ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಆಟಗಾರ್ತಿಯರು ಸ್ಲೆಡ್ಜಿಂಗ್​ಗೆ ಪ್ರಯತ್ನಿಸಿದ್ರು, ನಾವು ತಲೆಕಡೆಸಿಕೊಳ್ಳಲಿಲ್ಲ : ದೀಪ್ತಿ ಶರ್ಮಾ

ಅವರು ಉದ್ದೇಶಪೂರ್ವಕವಾಗಿ ನಮ್ಮ ಹತ್ತಿರ ಬರುತ್ತಿದ್ದರು, ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದ್ದರಿಂದ ಜೊತಗಾರ್ತಿ ಸ್ನೇಹ್ ರಾಣಾ ಮತ್ತು ನಾನು ಪ್ರತಿ ಚೆಂಡಿನ ನಂತರವೂ ಸಂವಹನ ನಡೆಸಿ,ಆಟದತ್ತ ಮಾತ್ರ ಗಮನ ಹರಿಸಲು ಬಯಸಿದೆವು..

ದೀಪ್ತಿ ಶರ್ಮಾ
ದೀಪ್ತಿ ಶರ್ಮಾ

By

Published : Jun 21, 2021, 3:26 PM IST

ಬ್ರಿಸ್ಟೋಲ್ : ಟೆಸ್ಟ್​ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರ್ತಿಯರು ಸ್ಲೆಡ್ಜಿಂಗ್​ ಮಾಡಲು ಪ್ರಯತ್ನಿಸಿದರು. ಆದರೆ, ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಮಿಥಾಲಿ ಪಡೆ ಸೋಲಿನಿಂದ ಪಾರಾಗಲೂ ಪ್ರಮುಖ ಪಾತ್ರವಹಿಸಿದ ಆಲ್​ರೌಂಡರ್​​ ದೀಪ್ತಿ ಶರ್ಮಾ ಹೇಳಿದ್ದಾರೆ.

ದೀಪ್ತಿ ಶರ್ಮಾ ಇಂಗ್ಲೆಂಡ್​ ವಿರುದ್ಧ ವಿಕೆಟ್​ ಪಡೆದಿದ್ದರಲ್ಲದೆ, ಮೊದಲ ಇನ್ನಿಂಗ್ಸ್​ನಲ್ಲಿ ಅಜೇಯ 29 ರನ್ ಮತ್ತು 2ನೇ ಇನ್ನಿಂಗ್ಸ್​ನಲ್ಲಿ ತಾಳ್ಮೆಯ ಅರ್ಧಶತಕ ಬಾರಿಸಿದ್ದರು. ಫಾಲೋಆನ್​ಗೆ ತುತ್ತಾಗಿ ಸೋಲನ್ನು ತಪ್ಪಿಸಿಕೊಳ್ಳಲು ತಾಳ್ಮೆಯಿಂದ ಆಡುತ್ತಿದ್ದ ತಮ್ಮನ್ನು ಇಂಗ್ಲೆಂಡ್​ ಪ್ಲೇಯರ್ಸ್​ ಪ್ರತಿಯೊಂದು ಎಸೆತಕ್ಕೂ ತಮಾಷೆ ಮಾಡುತ್ತಿದ್ದರು. ಆದರೆ, ನಾನು ಅವರತ್ತ ಗಮನ ನೀಡಲಿಲ್ಲ ಎಂದು ಪಂದ್ಯದ ನಂತರ ದೀಪ್ತಿ ಶರ್ಮಾ ಹೇಳಿಕೊಂಡಿದ್ದಾರೆ.

"ಅವರು ಉದ್ದೇಶಪೂರ್ವಕವಾಗಿ ನಮ್ಮ ಹತ್ತಿರ ಬರುತ್ತಿದ್ದರು, ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದ್ದರಿಂದ ಜೊತಗಾರ್ತಿ ಸ್ನೇಹ್ ರಾಣಾ ಮತ್ತು ನಾನು ಪ್ರತಿ ಚೆಂಡಿನ ನಂತರವೂ ಸಂವಹನ ನಡೆಸಿ,ಆಟದತ್ತ ಮಾತ್ರ ಗಮನ ಹರಿಸಲು ಬಯಸಿದೆವು "ಎಂದು ಶರ್ಮಾ ಹೇಳಿದ್ದಾರೆ.

ಇಂಗ್ಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 396 ರನ್​ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 231 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 344 ರನ್​ಗಳಿಸಿ ಡ್ರಾ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಶೆಫಾಲಿ ವರ್ಮಾ 63, ದೀಪ್ತಿ ಶರ್ಮಾ 54, ಸ್ನೇಹ್ ರಾಣಾ ಅಜೇಯ 80 ರನ್​ ಮತ್ತು ಭಾಟಿಯಾ ಅಜೇಯ 44 ರನ್​ಗಳಿಸಿದ್ದರು.

ಇದನ್ನು ಓದಿ:ವಿರಾಟ್​​ ಕೊಹ್ಲಿ ವಿಕೆಟ್​​ ಪಡೆದಿದ್ದು ನಮಗೆ ದೊಡ್ಡ ತಿರುವು ನೀಡಿತು: ಜೆಮೀಸನ್

ABOUT THE AUTHOR

...view details