ಲಂಡನ್: ಮಾರಕ ವೇಗಿ ಜೋಫ್ರಾ ಆರ್ಚರ್ ಗಾಯದ ಕಾರಣ ಈ ವರ್ಷ ಮೈದಾನಕ್ಕಿಳಿಯುವುದು ಅಸಾಧ್ಯವಾಗಿದ್ದು, ಮುಂಬರುವ ಟಿ-20 ವಿಶ್ವಕಪ್ ಮತ್ತು ಆ್ಯಶಷ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.
ಜೋಫ್ರಾ ಆರ್ಚರ್ಮೊಣಕೈ ಮೂಳೆ ಮುರಿತಕ್ಕೆ ಒಳಗಾಗಿದ್ದು, ಈ ವರ್ಷ ನಡೆಯುವ ಯಾವುದೇ ಟೂರ್ನಮೆಂಟ್ಗಳಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಗುರುವಾರ ಸ್ಪಷ್ಟಪಡಿಸಿದೆ. 2020ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗಾಯಗೊಂಡಿದ್ದ ಜೋಫ್ರಾ ಆರ್ಚರ್ ಭಾರತದ ವಿರುದ್ಧದ ಸೀಮಿತ ಓವರ್ಗಳ ಸರಣಿ, ಐಪಿಎಲ್ ತಪ್ಪಿಸಿಕೊಂಡಿದ್ದರು.
ಚೇತರಿಸಿಕೊಂಡು ಸಸೆಕ್ಸ್ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿದಿದ್ದ ಅರ್ಚರ್ 2ನೇ ಇನ್ನಿಂಗ್ಸ್ ವೇಳೆ ಮತ್ತೆ ಗಾಯಕ್ಕೊಳಗಾಗಿದ್ದು, ಬೌಲಿಂಗ್ ಮಾಡಿರಲಿಲ್ಲ. ನಂತರ ತವರಿನಲ್ಲಿ ನಡೆದ ಕೀವಿಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕೂಡ ತಪ್ಪಿಸಿಕೊಂಡಿದ್ದರು.
ಗಾಯಕ್ಕೊಳಗಾಗಿದ್ದ ಜೋಫ್ರಾ ಆರ್ಚರ್ ಕಳೆದ ವಾರ ಮೊಣಕೈ ಸ್ಕಾನಿಂಗ್ಗೆ ಒಳಗಾಗಿದ್ದು, ವರದಿಯಲ್ಲಿ ಅವರ ಬಲಗೈನ ಮೂಳೆ ಮುರಿದಿರುವುದು ದೃಢಪಟ್ಟಿದೆ. ಹಾಗಾಗಿ ಅವರು ಭಾರತ ವಿರುದ್ಧದ ಟೆಸ್ಟ್ ಸರಣಿ, ಟಿ-20 ವಿಶ್ವಕಪ್ ಮತ್ತು ಆ್ಯಶಷ್ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಇಸಿಬಿ ಪ್ರಕಟಣೆ ಹೊರಡಿಸಿದೆ.
ಇದನ್ನು ಓದಿ:ಮೊದಲ ದಿನವೇ ಚೆಂಡು ರಿವರ್ಸ್ ಸ್ವಿಂಗ್ ಆಗಿದ್ದು ಆಶ್ಚರ್ಯವೇನಿಲ್ಲ: ಶಮಿ