ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಶಿಸ್ತುಬದ್ಧ ದಾಳಿಯ ಮುಂದೆ ನಾವು ವಿಫಲರಾದೆವು, ಅವರ ಪ್ರದರ್ಶನ ಗೆಲುವಿಗೆ ಅರ್ಹ: ಕೊಹ್ಲಿ - ವಿರಾಟ್​ ಕೊಹ್ಲಿ

ಭಾರತ ತಂಡ ಶನಿವಾರ 4ನೇ ದಿನ ಎರಡನೇ ಇನ್ನಿಂಗ್ಸ್​ನಲ್ಲಿ ಒಲ್ಲಿ ರಾಬಿನ್ಸನ್​ ಬೌಲಿಂಗ್ ದಾಳಿಗೆ ತತ್ತರಿಸಿ 278ರನ್​ಗಳಿಗೆ ಆಲೌಟ್​ ಆಯಿತು.ಕ್ರೇಗ್ ಓವರ್​ಟನ್​ 47ಕ್ಕೆ 3 ವಿಕೆಟ್ ಪಡೆದರೆ, ಆ್ಯಂಡರ್ಸನ್ ಮತ್ತು ಮೊಯೀನ್ ಅಲಿ ತಲಾ ಒಂದು ವಿಕೆಟ್ ಪಡೆದರು.

England vs Virat Kohli
ವಿರಾಟ್ ಕೊಹ್ಲಿ

By

Published : Aug 28, 2021, 8:15 PM IST

ಲೀಡ್ಸ್: ಇಂಗ್ಲೆಂಡ್​ ತಂಡ ನಮಗಿಂತಲೂ ಹೆಚ್ಚು ಬ್ಯಾಟಿಂಗ್​ನಲ್ಲಿ ದೃಢಸಂಕಲ್ಪ ಹೊಂದಿತ್ತು ಮತ್ತು ಅವರ ನಿರ್ಧಾರಗಳು ಅತ್ಯುತ್ತಮವಾಗಿದ್ದವು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 3ನೇ ಟೆಸ್ಟ್​ನಲ್ಲಿ ಅತಿಥೇಯರೆದುರು ಇನ್ನಿಂಗ್ಸ್​ ಮತ್ತು 76 ರನ್​ಗಳ ಸೋಲು ಕಂಡ ನಂತರ ಹೇಳಿದ್ದಾರೆ.

ಭಾರತ ತಂಡ ಶನಿವಾರ 4ನೇ ದಿನ ಎರಡನೇ ಇನ್ನಿಂಗ್ಸ್​ನಲ್ಲಿ ಒಲ್ಲಿ ರಾಬಿನ್ಸನ್​ ಬೌಲಿಂಗ್ ದಾಳಿಗೆ ತತ್ತರಿಸಿ 278ರನ್​ಗಳಿಗೆ ಆಲೌಟ್​ ಆಯಿತು.ಕ್ರೇಗ್ ಓವರ್​ಟನ್​ 47ಕ್ಕೆ 3 ವಿಕೆಟ್ ಪಡೆದರೆ, ಆ್ಯಂಡರ್ಸನ್ ಮತ್ತು ಮೊಯೀನ್ ಅಲಿ ತಲಾ ಒಂದು ವಿಕೆಟ್ ಪಡೆದರು.

ಸ್ಕೋರ್​ಬೋರ್ಡ್​ ಒತ್ತಡ ನಮ್ಮನ್ನು ಕುಸಿಯುವಂತೆ ಮಾಡಿತು. ನಾವು ಕೇವಲ 80(78) ರನ್ ಗಳಿಸಿದ್ದಾಗ ಮತ್ತು ಎದುರಾಳಿ ದೊಡ್ಡ ಮೊತ್ತಗಳಿಸಿದ್ದಾಗ ನಾವು ಒತ್ತಡ ಸಾಮಾನ್ಯವಾಗಿರುತ್ತದೆ. ಆದರೂ 3ನೇ ದಿನ ಪೂರ್ತಿ ಕೆಲವು ನಿರ್ಣಾಯಕ ಜೊತೆಯಾಟವನ್ನು ನೀಡಿದೆವು. ಆದರೆ ಈ ದಿನ ಬೆಳಿಗ್ಗೆ ಇಂಗ್ಲೀಷ್ ಬೌಲರ್​ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು, ನಾವು ಅಕ್ಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಎಂದು ಕೊಹ್ಲಿ ಪಂದ್ಯ ಮುಗಿದ ನಂತರ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಇದನ್ನು ಓದಿ:ಕೊಹ್ಲಿ ವಿಕೆಟ್​ ಪಡೆಯಲು ಮಾಡಿದ್ದ ಪ್ಲಾನ್ ತುಂಬಾ ಸಿಂಪಲ್​: ರಾಬಿನ್ಸನ್​

ಮಾತು ಮುಂದುವರಿಸಿ, ಈ ದೇಶದಲ್ಲಿ ಬ್ಯಾಟಿಂಗ್ ಕುಸಿತ ಸಾಮಾನ್ಯವಾಗಿ ಕಂಡುಬರುತ್ತದೆ. ಪಿಚ್​ ಬ್ಯಾಟಿಂಗ್ ಮಾಡಲು ಉತ್ತಮವಾಗಿತ್ತು. ಆದರೆ ಅವರ ಶಿಸ್ತುಬದ್ದ ಬೌಲಿಂಗ್ ದಾಳಿ ನಮ್ಮನ್ನು ತಪ್ಪು ಮಾಡಲು ಒತ್ತಾಯಿಸಿತು. ನಾವು ರನ್​ಗಳಿಸಲು ಸಾಧ್ಯವಾಗದಿದ್ದಾಗ ಅಂತಹ ಸ್ಪೆಲ್​ಗಳನ್ನು ನಿಭಾಯಿಸುವುದು ಕಷ್ಟಕರವಾಗಿತ್ತದೆ. ಅಲ್ಲದೆ ಬ್ಯಾಟಿಂಗ್ ಬಳಗವಾಗಿ ನಾವು ಉತ್ತಮ ಶಾಟ್​ಗಳ ಆಯ್ಕೆಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈ ಪಿಚ್​ ಬ್ಯಾಟಿಂಗ್ ಮಾಡಲೂ ತುಂಬಾ ಒಳ್ಳೆಯದಾಗಿತ್ತು. ಇಂಗ್ಲೆಂಡ್​ ಬ್ಯಾಟಿಂಗ್ ಮಾಡುವಾಗ ಇದು ಹೆಚ್ಚೇನು ಬದಲಾಗಿರಲಿಲ್ಲ, ಅವರು ಬ್ಯಾಟಿಂಗ್​​ನಲ್ಲಿ ತುಂಬಾ ದೃಢಸಂಕಲ್ಪ ಹೊಂದಿದ್ದರು ಮತ್ತು ಅತ್ಯುತ್ತಮವಾಗಿ ನಿಭಾಯಿಸಿದರು. ಅವರು ಖಂಡಿತ ಈ ಗೆಲುವಿಗೆ ಅರ್ಹರಾಗಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಇನ್ನಷ್ಟು ಉತ್ತಮ ಪ್ರದರ್ಶನ ತೋರಬಹುದಿತ್ತೆ ಎಂದು ಕೇಳಿದ್ದಕ್ಕೆ, ಕೊಹ್ಲಿ, " ನಮ್ಮಲ್ಲಿ ಸಾಕಷ್ಟು ಬ್ಯಾಟಿಂಗ್ ಆಳವಿಲ್ಲ ಎಂದು ನೀವು ಹೇಳಬಹುದು, ಆದರೆ ಅಗ್ರ ಕ್ರಮಾಂಕವು ಕೆಳ ಮಧ್ಯಮ ಕ್ರಮಾಂಕಕ್ಕೆ ಮುಂದುವರಿಸಿಕೊಂಡು ಹೋಗಲು ಸಾಕಷ್ಟು ರನ್ ನೀಡಬೇಕಾಗುತ್ತದೆ. ಯಾವಾಗಲೂ ಕೆಳ ಕ್ರಮಾಂಕವು ತಂಡವನ್ನು ಯಾವಾಗಲೂ ಆಧಾರವಾಗಲು ಸಾಧ್ಯವಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹೊರತುಪಡಿಸಿ, ಈ ಪಂದ್ಯದಲ್ಲಿ ನಾವು ಧನಾತ್ಮಕವಾಗಿ ತೆಗೆದುಕೊಳ್ಳುವಂತಹದ್ದು ಏನೂ ಇಲ್ಲ" ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.

ಇದನ್ನು ಓದಿ:ರಾಬಿನ್ಸನ್​ 5 ವಿಕೆಟ್​: ಭಾರತಕ್ಕೆ ಇನ್ನಿಂಗ್ಸ್ ಮತ್ತು 76ರನ್​ಗಳ ಸೋಲು, ಸರಣಿ 1 1ರಲ್ಲಿ ಸಮಬಲ

ABOUT THE AUTHOR

...view details