ಲಂಡನ್:ಈ ವರ್ಷದ ಅಂತ್ಯಕ್ಕೆ ಆರಂಭಗೊಳ್ಳುತ್ತಿರುವ ಪ್ರತಿಷ್ಠಿತ ಆ್ಯಷಸ್ ಸರಣಿಯನ್ನ ಇಂಗ್ಲೆಂಡ್ನ ಕೆಲ ಆಟಗಾರರು ಬಹಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ್ಯಷಸ್ ಸರಣಿಯಲ್ಲಿ ಭಾಗಿಯಾಗಬೇಕಾದರೆ 4 ತಿಂಗಳ ಕಾಲ ಹೋಟೆಲ್ನಲ್ಲೇ ಕ್ವಾರಂಟೈನ್ ಆಗಬೇಕಿದೆ. ಈ ನಿಯಮವನ್ನ ಕೆಲ ಆಟಗಾರರು ವಿರೋಧಿಸಿದ್ದಾರೆ ಎನ್ನಲಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿಗದಿ ಮಾಡಿರುವ ದಿನಾಂಕದಂತೆಯೇ ಟೆಸ್ಟ್ ನಡೆಸಲು ನಿರ್ಧರಿದೆ. ಈ ಮೂಲಕ ಸರಣಿ ಮುಂದೂಡುವ ಯಾವುದೇ ಯೋಜನೆ ಇಲ್ಲ ಎಂದಿದೆ. ಈ ನಿರ್ಧಾರದಿಂದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಜೊತೆಗೆ ಇಂಗ್ಲೆಂಡ್ ತಂಡ ಮತ್ತು ಅಧಿಕಾರಿಗಳ ಮಾತುಕತೆಯ ಬಳಿಕ ಆ್ಯಷಸ್ನಲ್ಲಿ ಕಡಿಮೆ ಸದಸ್ಯರ ತಂಡ ಮತ್ತು ಸಹಾಯಕ ಸದಸ್ಯರ ಒಳಗೊಂಡ ತಂಡ ಆಸ್ಟ್ರೇಲಿಯಾ ತಲುಪುವ ಸಾಧ್ಯತೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.