ಕರ್ನಾಟಕ

karnataka

ETV Bharat / sports

ಸುದೀರ್ಘ ಮಾತುಕತೆಯ ನಂತರ ಆ್ಯಶಸ್​ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ತಂಡದಿಂದ ಒಪ್ಪಿಗೆ ​: ವರದಿ

ಇಂಗ್ಲೀಷ್ ಆಟಗಾರರು ಕ್ರಿಸ್​ಮಸ್​ ಮತ್ತು ಹೊಸವರ್ಷಕ್ಕೆ ತಮ್ಮ ಕುಟುಂಬಗಳ ಜೊತೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವು ವಾರಗಳ ನಂತರ ಇಸಿಬಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿಗಳು ಕಠಿಣ ಕ್ವಾರಂಟೈನ್​ ಅವಶ್ಯಕತೆಗಳ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ಇಂಗ್ಲೀಷ್ ಪತ್ರಿಕೆ ಸೆನ್​(Sen.com) ವರದಿ ಮಾಡಿದೆ.

England commits itself to Ashes tour: Reports
ಇಂಗ್ಲೆಂಡ್ ಕ್ರಿಕೆಟಿಗರಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ಒಪ್ಪಿಗೆ

By

Published : Oct 6, 2021, 5:13 PM IST

ಸಿಡ್ನಿ: ಐದು ಪಂದ್ಯಗಳ ಆ್ಯಶಸ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಾಕ್ಕೆ ತೆರಳುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇದ್ದ ಕೂತೂಹಲ ಕೊನೆಗೂ ಮುಗಿದಿದೆ ಎನ್ನಲಾಗುತ್ತಿದ್ದು, ನಾಯಕ ಜೋ ರೂಟ್ ಅವರು ಸರಣಿಗಾಗಿ ಡೌನ್​ ಅಂಡರ್​ಗೆ ಪ್ರಯಾಣ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ ಎಂದು ಕೆಲವು ಇಂಗ್ಲಿಷ್​​ ಪತ್ರಿಕೆಗಳು ವರದಿ ಮಾಡಿವೆ.

ಈ ಕುರಿತು ಇನ್ನೂ ಎರಡೂ ಕ್ರಿಕೆಟ್​ ಮಂಡಳಿಗಳು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿದ್ದರೂ ಯುಕೆ ನ್ಯೂಸ್​ ಪೇಪರ್​ಗಳು ಸರಣಿ ವೇಳಾಪಟ್ಟಿಯಂತೆ ನಡೆಯಲಿದೆ. ಒಂದು ವಾರದ ನಂತರ ಈ ಕುರಿತು ಔಪಚಾರಿಕವಾಗಿ ಘೋಷಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಇಂಗ್ಲಿಷ್​​ ಆಟಗಾರರು ಕ್ರಿಸ್​ಮಸ್​ ಮತ್ತು ಹೊಸವರ್ಷಕ್ಕೆ ತಮ್ಮ ಕುಟುಂಬಗಳ ಜೊತೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಲವು ವಾರಗಳ ನಂತರ ಇಸಿಬಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿಗಳು ಕಠಿಣ ಕ್ವಾರಂಟೈನ್​ ಅವಶ್ಯಕತೆಗಳ ಬಗ್ಗೆ ಮಾತುಕತೆ ನಡೆಸುತ್ತಿವೆ ಎಂದು ಇಂಗ್ಲಿಷ್​​ ಪತ್ರಿಕೆ ಸೆನ್​(Sen.com) ವರದಿ ಮಾಡಿದೆ.

ಹೋಟೆಲ್​ನಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ಮಾಡುವ ಬದಲು ವಿಕ್ಟೋರಿಯಾದ ಯರ್ರಾ ಕಣಿವೆಯ ರೆಸಾರ್ಟ್​ನಲ್ಲಿ ಆಟಗಾರರ ಕುಟುಂಬಗಳನ್ನು ಕ್ವಾರಂಟೈನ್ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ಈ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಟೆಲಿಗ್ರಾಫ್​ ವರದಿ ಮಾಡಿದೆ.

ಪ್ರವಾಸ ಕುರಿತು ಇಸಿಬಿ ಮತ್ತು ಸಿಎ ನಡುವೆ ಸುದೀರ್ಘ ಚರ್ಚೆ ನಡೆಯುತ್ತಿವೆ. ಅಕ್ಟೋಬರ್​ 4ರಂದು ನಡೆದ ವಿಡಿಯೋ ಕಾನ್ಫರೆನ್ಸ್​ ಸಭೆಯಲ್ಲಿ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿಯ ಅಧಿಕಾರಿಗಳಿಗೆ ಆಸೀಸ್​​ ಪ್ರವಾಸ ಕೈಗೊಳ್ಳುವ ತಂಡ ತಾವೂ 11 ವಾರಗಳ ಸುದೀರ್ಘ ಪ್ರವಾಸದಲ್ಲಿ ತಾವೂ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ವಿವರಿಸಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದಲ್ಲಿ ಕಠಿಣ ಕೋವಿಡ್​ ಪ್ರೋಟೋಕಾಲ್​ಗಳನ್ನು ಜಾರಿಗೆ ತಂದಿದ್ದು, ದೇಶಕ್ಕೆ ಬರುವವರಿಗೆ ಕಠಿಣ ಕ್ವಾರಂಟೈನ್ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಜೊತೆಗೆ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್​ ಸರಣಗಾಗಿ ದೇಶಕ್ಕೆ ಬರುವ ಕ್ರಿಕೆಟಿಗರು ಕುಟುಂಬವನ್ನು ಕರೆತರಲೂ ಸಹಾ ನಿಷೇಧವೇರಿತ್ತು. ಆದರೆ, ಇದಕ್ಕೆ ಇಂಗ್ಲೆಂಡ್​ ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸಿದ್ದರು. ಈ ಗೊಂದಲ ನಿವಾರಿಸಲು ಸ್ವತಃ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್​ ಅಕಾಡಕ್ಕೆ ಇಳಿದು ಆಸ್ಟ್ರೇಲಿಯಾ ಸರ್ಕಾರಕ್ಕೆ ತಮ್ಮ ದೇಶದ ಆಟಗಾರರ ಕುಟುಂಬಗಳ ಪ್ರಯಾಣಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದರು.

ಇದನ್ನು ಓದಿ:ಹಾಕಿ..FIH ವಾರ್ಷಿಕ ಪ್ರಶಸ್ತಿಗಳೆಲ್ಲವನ್ನು ಬಾಚಿಕೊಂಡ ಭಾರತ: ಬೆಲ್ಜಿಯಂ ಅಸಮಾಧಾನ

ABOUT THE AUTHOR

...view details