ಕರ್ನಾಟಕ

karnataka

ETV Bharat / sports

25ನೇ ಶತಕ ಸಿಡಿಸಿದ ರೂಟ್​: 15 ತಿಂಗಳಲ್ಲಿ 8ನೇ ಸೆಂಚುರಿ ದಾಖಲಿಸಿದ ಇಂಗ್ಲೆಂಡ್ ಕ್ಯಾಪ್ಟನ್ - ರೂಟ್​ 25ನೇ ಟೆಸ್ಟ್ ಶತಕ

ರೂಟ್​ 2021ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ 2 ಶತಕ (228 ಮತ್ತು 186) ನಂತರ ಭಾರತ ಪ್ರವಾಸದಲ್ಲಿ ಒಂದು ಶತಕ (218), ನಂತರ ತವರಿನಲ್ಲಿ ಭಾರತದ ವಿರುದ್ದ 3 ಶತಕ(109, 180, 121) ಇದೀಗ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ 2ನೇ ಶತಕ ದಾಖಲಿಸಿದ್ದಾರೆ.

England captain Joe Root scores 25th hundred in Test cricket
ಜೋ ರೂಟ್ 25ನೇ ಶತಕ

By

Published : Mar 17, 2022, 5:43 PM IST

ಬಾರ್ಬಡೊಸ್​:ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ ವೆಸ್ಟ್​ ಇಮಡೀಸ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ದಾಖಲಿಸಿದ್ದಾರೆ. ಈ ಮೂಲಕ ವೃತ್ತಿಜೀವನದ 25ನೇ ಮತ್ತು ಕಳೆದ 15 ತಿಂಗಳಲ್ಲಿ 8ನೇ ಶತಕ ಸಿಡಿಸಿ ಅವರು ಸಂಭ್ರಮಿಸಿದರು.

ಬಾರ್ಬಡೊಸ್​ನಲ್ಲಿ ಬುಧವಾರದಿಂದ ಆರಂಭವಾಗಿರುವ ಟೆಸ್ಟ್​ ಪಂದ್ಯದಲ್ಲಿ ಮೊದಲ ದಿನವೇ ರೂಟ್ ಶತಕ ಸಾಧನೆ ಮಾಡಿದರು. ಇದು ಸರಣಿಯಲ್ಲಿ ಅವರ 2ನೇ ಶತಕವಾಗಿದೆ. 2021ರ ಆರಂಭದ ನಂತರ ಇಂಗ್ಲೆಂಡ್ ಕ್ಯಾಪ್ಟನ್ ಸಿಡಿಸಿದ 8ನೇ ಶತಕ ಎನ್ನುವುದು ಮತ್ತೊಂದು ವಿಶೇಷ.

ರೂಟ್​ 2021ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ 2 ಶತಕ (228 ಮತ್ತು 186) ನಂತರ ಭಾರತ ಪ್ರವಾಸದಲ್ಲಿ ಒಂದು ಶತಕ (218), ನಂತರ ತವರಿನಲ್ಲಿ ಭಾರತದ ವಿರುದ್ದ 3 ಶತಕ (109, 180, 121) ಇದೀಗ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ 2ನೇ ಶತಕ ದಾಖಲಿಸಿದ್ದಾರೆ.

ವಿಶೇಷವೆಂದರೆ ವಿಶ್ವ ಕ್ರಿಕೆಟ್​ನ ಫ್ಯಾಬ್ 4 ಎಂದು ಗುರುತಿಸಿಕೊಂಡಿರುವ ಕೊಹ್ಲಿ, ಸ್ಟೀವ್​ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್​​ 2021ರ ಅಂಕಿ ಅಂಶದ ಪ್ರಕಾರ ಕ್ರಮವಾಗಿ 27, 26, 24 ಮತ್ತು 17 ಶತಕ ಸಿಡಿಸಿದ್ದರು. ಆದರೆ ಈ 15 ತಿಂಗಳಲ್ಲಿ ರೂಟ್​ 8 ಶತಕ ಸಿಡಿಸಿ ತಮ್ಮ ಶತಕದ ಸಂಖ್ಯೆಯನ್ನು 26ಕ್ಕೇ ಏರಿಸಿಕೊಂಡಿದ್ದಾರೆ. ಸ್ಮಿತ್​ ಒಂದು ಶತಕ ಸಿಡಿಸಿದ್ದರೆ, ವಿಲಿಯಮ್ಸನ್​ ಮತ್ತು ಕೊಹ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ:'ಆಮ್ ಆದ್ಮಿ'ಯಾಗಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್‌

ABOUT THE AUTHOR

...view details