ನವದೆಹಲಿ:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ನಲ್ಲಿ ಸೆಮೀಸ್ ಸೇರಿರುವ ಇಂಗ್ಲೆಂಡ್ -ಭಾರತ ಭರ್ಜರಿ ತಾಲೀಮು ನಡೆಸುತ್ತಿವೆ. ಈ ಮಧ್ಯೆ ಆಂಗ್ಲ ಪಡೆಯ ಪ್ರಮುಖ ಬೌಲರ್ ಮಾರ್ಕ್ ವುಡ್ ಗಾಯಗೊಂಡಿದ್ದು, ಅಭ್ಯಾಸಕ್ಕೆ ಗೈರಾಗಿದ್ದಾರೆ. ಬ್ಯಾಟರ್ ಡೇವಿಡ್ ಮಲಾನ್ ಬಳಿಕ ಮಾರ್ಕ್ ವುಡ್ ಗಾಯಗೊಂಡಿದ್ದು ಇಂಗ್ಲೆಂಡ್ಗೆ ತಲೆನೋವಾಗಿದೆ.
ನವೆಂಬರ್ 10 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಅಡಿಲೇಡ್ನಲ್ಲಿ ಎರಡನೇ ಸೆಮಿಫೈನಲ್ ಕಾದಾಟ ನಡೆಯಲಿದೆ. ತಂಡದ ವೇಗದ ಬೌಲರ್ ಮಾರ್ಕ್ ವುಡ್ ಸಂಪೂರ್ಣ ಫಿಟ್ ಆಗಿಲ್ಲ. ಈ ಕಾರಣಕ್ಕಾಗಿ ಮಂಗಳವಾರದ ಅಭ್ಯಾಸದಲ್ಲಿ ಅವರು ಭಾಗವಹಿಸಲಿಲ್ಲ. ಸೆಮಿಫೈನಲ್ಗೂ ಮುನ್ನ ಇಂಗ್ಲೆಂಡ್ಗೆ ಇದು ಹಿನ್ನಡೆ ಉಂಟು ಮಾಡುವ ಆತಂಕವಿದೆ.
ಸ್ನಾಯು ಸೆಳೆತಕ್ಕೀಡಾಗಿರುವ ಇಂಗ್ಲೆಂಡ್ ಶರವೇಗದ ಬೌಲರ್ ನೆಟ್ಸ್ನಲ್ಲಿ ಮಂಗಳವಾರ ಅಭ್ಯಾಸ ಮಾಡಿಲ್ಲ. ವಿಶ್ವಕಪ್ ಆರಂಭಕ್ಕೂ ಮೊದಲು ಮೊಣಕೈ ಗಾಯ ಮಾಡಿಕೊಂಡಿದ್ದ ವುಡ್, ಬಳಿಕ ಚೇತರಿಸಿಕೊಂಡು ತಂಡದಲ್ಲಿ ಸ್ಥಾನ ಪಡೆದಿದ್ದರು. ಕಳೆದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೀಡಾದ ವುಡ್ಗೆ ವಿಶ್ರಾಂತಿ ನೀಡಲಾಗಿತ್ತು.