ಲಂಡನ್:ಲಾರ್ಡ್ಸ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ತಂಡವನ್ನು 52 ರನ್ಗಳಿಂದ ಮಣಿಸಿದ ಸ್ಟಾರ್ ಆಟಗಾರರಿಲ್ಲದ ಇಂಗ್ಲೆಂಡ್ ದ್ವಿತೀಯ ದರ್ಜೆ ತಂಡ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿ ವಶಪಡಿಸಿಕೊಂಡಿದೆ.
ಕೋವಿಡ್ 19 ಕಾರಣ ಮೊದಲ ಆಯ್ಕೆಯ ಸಂಪೂರ್ಣ ತಂಡ ಕ್ವಾರಂಟೈನ್ಗೆ ಒಳಪಡಿಸಿ, ದ್ವಿತೀಯ ದರ್ಜೆಯ ಸಂಪೂರ್ಣ ತಂಡವನ್ನು ಇಸಿಬಿ ಆಯ್ಕೆ ಮಾಡಿತ್ತು. ಆದರೆ ಈ ತಂಡವೇ ಪಾಕಿಸ್ತಾನವನ್ನು ಎರಡೂ ಪಂದ್ಯಗಳಲ್ಲೂ ಪ್ರತಿರೋಧವಿಲ್ಲದೆ ಗೆಲುವು ಸಾಧಿಸಿ ಸರಣಿ ವಶ ಮಾಡಿಕೊಂಡಿದೆ.
ಶನಿವಾರ ನಡೆದ 47 ಓವರ್ಗಳ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 45.2 ಓವರ್ಗಳಲ್ಲಿ 247 ರನ್ ದಾಖಲಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಫಿಲಿಫ್ ಸಾಲ್ಟ್, 54 ಎಸೆತಗಳಲ್ಲಿ 60 ರನ, ಜೇಮ್ಸ್ ವಿನ್ಸ್ 56, ಲೂಯಿಸ್ ಗ್ರೆಗೊರಿ 40 ಮತ್ತು ಬ್ರಿಡನ್ ಕಾರ್ಸ್ 31 ರನ್ಗಳಿಸಿದರು.
ಪಾಕಿಸ್ತಾನ ಪರ ಹಸನ್ ಅಲಿ 5, ಹ್ಯಾರಿಸ್ ರವೂಫ್ 2 ಹಾಗೂ ಶಹೀನ್ ಅಫ್ರಿದಿ, ಶದಬ್ ಖಾನ್ ಮತ್ತು ಶಕೀಲ್ ತಲಾ ಒಂದು ವಿಕೆಟ್ ಪಡೆದಿದ್ದರು.
ಇನ್ನು 248 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 41 ಓವರ್ಗಳಲ್ಲಿ 195 ರನ್ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ಗೆ ತಲೆಬಾಗಿತು. ಸ್ಟಾರ್ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಆಲ್ರೌಂಡರ್ ಸೌದ್ ಶಕೀಲ್ 56 ರನ್ ಮತ್ತು ಹಸನ್ ಅಲಿ 31 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಂಬರ್ 1 ODI ಬ್ಯಾಟ್ಸ್ಮನ್ ಬಾಬರ್ ಅಜಮ್ ಕೇವಲ 19 ರನ್ಗಳಿಸಿದರೆ, ಇಮಾಮ್ 1, ಫಖರ್ ಜಮಾನ್ 10, ರಿಜ್ವಾನ್ 5, ಮಕ್ಸೂದ್ 19, ಸದಾಬ್ ಖಾನ್ 21 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಲೂಯಿಸ್ ಗ್ರೆಗೊರಿ 3, ಸಕಿದ್ ಮಹ್ಮೂದ್ , ಕ್ರೈಗ್ ಓವರ್ಟನ್ ಮತ್ತು ಮ್ಯಾಥ್ಯೂ ಓವರ್ಟನ್ ತಲಾ 2 ವಿಕೆಟ್ ಪಡೆದು ಸರಣಿ ಗೆಲ್ಲಲು ನೆರವಾದರು.
ಇದನ್ನು ಓದಿ: ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ ವಿಂಡೀಸ್ಗೆ ಭರ್ಜರಿ ಜಯ : ಸರಣಿಯಲ್ಲಿ 2-0 ಮುನ್ನಡೆ