ಕರ್ನಾಟಕ

karnataka

ETV Bharat / sports

2ನೇ ಏಕದಿನ ಪಂದ್ಯ: ಇಂಗ್ಲೆಂಡ್​ ವಿರುದ್ಧ ಸೋತ ಭಾರತ - India Cricket team

2ನೇ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಮಹಿಳಾ ಇಂಡಿಯಾ 5 ವಿಕೆಟ್​ಗಳ ಸೋಲು ಕಂಡಿದೆ. ಇನ್ನು ಭಾರತ 221 ರನ್‌ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್​ 2-0 ದಿಂದ ಸರಣಿ ಮುನ್ನಡೆ ಸಾಧಿಸಿದೆ.

England beat India
ಇಂಗ್ಲೆಂಡ್​ ವಿರುದ್ಧ ಸೋತ ಭಾರತ

By

Published : Jul 1, 2021, 6:30 AM IST

ಟೌಂಟನ್: ಎರಡನೇ ಮಹಿಳಾ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಐದು ವಿಕೆಟ್‌ಗಳಿಂದ ಪರಾಭವಗೊಂಡಿದೆ. ಈ ಮೂಲಕ ಇಂಗ್ಲೆಂಡ್​ 2-0 ಸರಣಿ ಮುನ್ನಡೆ ಸಾಧಿಸಿದೆ. ಸೋಫಿಯಾ ಡಂಕ್ಲೆ ಅಜೇಯ 73 ಮತ್ತು ಕ್ಯಾಥರೀನ್ ಬ್ರಂಟ್ ಅಜೇಯ 33 ರನ್​ ಗಳಿಸಿದ್ದು, 92 ರನ್​ಗಳ ಜೊತೆಯಾಟವಾಡಿದ್ದಾರೆ. 222 ರನ್​ಗಳ ಗೆಲುವಿನ ಗುರಿ ಬೆನ್ನಟ್ಟಿದ ತಂಡ 5 ವಿಕೆಟ್​ಗಳ ಜಯ ಸಾಧಿಸಿದೆ.

ಇದನ್ನು ಓದಿ: Kashmir Terrorism: ಮೂವರು ಉಗ್ರರು ಖಲ್ಲಾಸ್​, ಇಬ್ಬರು ಯೋಧರಿಗೆ ಗಾಯ

ಇನ್ನು ಭಾರತದ ಪರ ಭಾರತ ಪರ ಲೆಗ್ ಸ್ಪಿನ್ನರ್ ಪೂನಂ ಯಾದವ್ 63 ರನ್ ಗಳಿಸಿ ಎರಡು ವಿಕೆಟ್ ಪಡೆದರೆ, ಅನುಭವಿ ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ ಮತ್ತು ಸ್ನೇಹ ರಾಣಾ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ ನಾಯಕಿ ಮಿಥಾಲಿ ರಾಜ್ 92 ಎಸೆತಗಳಲ್ಲಿ 59 ರನ್ ಗಳಿಸಿ ಅಗ್ರ ಸ್ಕೋರ್ ಮಾಡಿ ನಾಲ್ಕನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು. ಅಂತಿಮವಾಗಿ ಭಾರತ 221 ರನ್‌ಗಳಿಗೆ ಆಲೌಟ್ ಆಗಿದೆ. ಯುವ ಓಪನರ್ ಶಫಾಲಿ ವರ್ಮಾ 55 ಎಸೆತಗಳಲ್ಲಿ 44 ರನ್ ಗಳಿಸಿದರೆ, ಇಂಗ್ಲೆಂಡ್ ಪರ, ವೇಗಿ ಕೇಟ್ ಕ್ರಾಸ್ 34 ರನ್​ಗೆ 5 ವಿಕೆಟ್​ ಪಡೆದರು.

ಭಾರತ:50 ಓವರ್‌ಗಳಲ್ಲಿ 221 ಆಲ್​ಔಟ್ (ಮಿಥಾಲಿ ರಾಜ್ 59, ಶಫಾಲಿ ವರ್ಮಾ 44; ಕೇಟ್ ಕ್ರಾಸ್ 5/34)

ಇಂಗ್ಲೆಂಡ್:47.3 ಓವರ್‌ಗಳಲ್ಲಿ 5 ವಿಕೆಟ್​ಗೆ​ 225 (ಲಾರೆನ್ ವಿನ್‌ಫೀಲ್ಡ್-ಹಿಲ್ 42, ಸೋಫಿಯಾ ಡಂಕ್ಲೆ 73, ಕ್ಯಾಥರೀನ್ ಬ್ರಂಟ್ 33; ಪೂನಮ್ ಯಾದವ್ 2/63)

ABOUT THE AUTHOR

...view details