ಕರ್ನಾಟಕ

karnataka

ETV Bharat / sports

ಭಾರತದ ವಿರುದ್ಧದ ಟಿ20, ಏಕದಿನ ಸರಣಿಗೆ ಇಂಗ್ಲೆಂಡ್​ ತಂಡ ಪ್ರಕಟ: ಬೆನ್​​ ಸ್ಟೋಕ್ಸ್​, ರೂಟ್​ಗೆ ಚಾನ್ಸ್​ - ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ

ರೋಹಿತ್ ಶರ್ಮಾ ಬಳಗದ ವಿರುದ್ಧ ನಡೆಯಲಿರುವ ಟಿ20, ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ವಿಶ್ವಕಪ್​ ದೃಷ್ಟಿಯಿಂದ ಕೆಲ ಹಿರಿಯ ಪ್ಲೇಯರ್ಸ್​ಗೆ ಮಣೆ ಹಾಕಲಾಗಿದೆ.

England Announce Squad
England Announce Squad

By

Published : Jul 1, 2022, 6:35 PM IST

ಬರ್ಮಿಂಗ್​ಹ್ಯಾಮ್​​(ಲಂಡನ್​): ಜುಲೈ 7ರಿಂದ ಪ್ರವಾಸಿ ಭಾರತದ ವಿರುದ್ಧ ಆರಂಭಗೊಳ್ಳಲಿರುವ ಟಿ20 ಹಾಗೂ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಟೆಸ್ಟ್​ ತಂಡದ ನಾಯಕ ಬೆನ್​​ಸ್ಟೋಕ್ಸ್​ ಹಾಗೂ ಮಾಜಿ ಕ್ಯಾಪ್ಟನ್​​ ಜೋ ರೂಟ್​ಗೆ ಅವಕಾಶ ನೀಡಲಾಗಿದೆ.

5ನೇ ಟೆಸ್ಟ್​ ಮುಕ್ತಾಯವಾಗುತ್ತಿದ್ದಂತೆ ಭಾರತ-ಇಂಗ್ಲೆಂಡ್ ನಡುವೆ ಮೂರು ಟಿ20 ಹಾಗೂ ಮೂರು ಏಕದಿನ ಸರಣಿ ನಡೆಯಲಿವೆ. ಈ ಸರಣಿಯಿಂದ ಆದಿಲ್​ ರಶೀದ್ ಹೊರಗುಳಿಯಲಿದ್ದಾರೆ. ಮೆಕ್ಕಾಗೆ ಹಜ್​ ಯಾತ್ರೆ ಕೈಗೊಳ್ಳುವ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಇಸಿಬಿ ತಿಳಿಸಿದೆ. ಉಳಿದಂತೆ ಟೆಸ್ಟ್ ತಂಡದ ನಾಯಕ ಸ್ಟೋಕ್ಸ್ ಹಾಗೂ ಮಾಜಿ ನಾಯಕ ಜೋ ರೂಟ್​​​ ಅವಕಾಶ ಪಡೆದುಕೊಂಡಿದ್ದಾರೆ.

ವೈಟ್​ ಬಾಲ್​​ ಕ್ಯಾಪ್ಟನ್​ ಇಯಾನ್​ ಮಾರ್ಗನ್​​ ಕ್ರಿಕೆಟ್​ನಿಂದ ನಿವೃತ್ತಿಯಾಗಿರುವ ಕಾರಣ ಅವರ ಸ್ಥಾನಕ್ಕೆ ಜೋಸ್ ಬಟ್ಲರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಸರಣಿಗೋಸ್ಕರ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ಟಿ20 ಪಂದ್ಯಗಳು ಕ್ರಮವಾಗಿ ಜುಲೈ 7, ಜುಲೈ 9 ಮತ್ತು ಜುಲೈ 10ರಂದು ನಡೆಯಲಿದ್ದು, ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 12, ಜುಲೈ 14 ಮತ್ತು ಜುಲೈ 17 ರಂದು ಓವಲ್, ಲಾರ್ಡ್ಸ್ ಮತ್ತು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿವೆ.

ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧದ ಟಿ-20, ಏಕದಿನ ಸರಣಿಗೆ ಭಾರತ ತಂಡ ಪ್ರಕಟ

ಇಂಗ್ಲೆಂಡ್ T20I ತಂಡ:ಜೋಸ್ ಬಟ್ಲರ್(ಕ್ಯಾಪ್ಟನ್​), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ

ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್(ಕ್ಯಾಪ್ಟನ್​), ಮೊಯಿನ್ ಅಲಿ, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ

ABOUT THE AUTHOR

...view details