ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ನ ಶ್ಯಾಮ್​ ಕರ್ರನ್​ ವಿಶೇಷ ದಾಖಲೆ.. ಐಪಿಎಲ್​ ಟೂರ್ನಿಯೇ ಇದಕ್ಕೆ ಕಾರಣವಂತೆ!

ಐಪಿಎಲ್​ ಟೂರ್ನಿ ಚುಟುಕು ಕ್ರಿಕೆಟ್​ನ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿದೆ. ಇದು ಭಾರತವಲ್ಲದೇ ವಿದೇಶಿ ಆಟಗಾರರನ್ನೂ ಬೆಳೆಸಿದೆ. ಟಿ20 ವಿಶ್ವಕಪ್​ ಶ್ರೇಷ್ಠ ಪ್ರದರ್ಶಕ ಸ್ಯಾಮ್​ ಕರ್ರನ್​ ಟೂರ್ನಿ ಬಗ್ಗೆ ಹೊಗಳಿದ್ದಾರೆ.

england-all-rounder-sam-curran
ಇಂಗ್ಲೆಂಡ್​ನ ಶ್ಯಾಮ್​ ಕರ್ರನ್​ ವಿಶೇಷ ದಾಖಲೆ

By

Published : Nov 13, 2022, 10:20 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ):ಟಿ20 ಚಾಂಪಿಯನ್ ಇಂಗ್ಲೆಂಡ್​ ತಂಡದ ಸ್ಟಾರ್​ ಬೌಲರ್​ ಸ್ಯಾಮ್​ ಕರ್ರನ್​ 13 ವಿಕೆಟ್​ ಕಿತ್ತು ಟೂರ್ನಿಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದಲ್ಲದೇ, ವಿಶ್ವಕಪ್​ನ ಫೈನಲ್​ನಲ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಎಲ್ಲ ಸಾಧನೆಗೆ ಭಾರತದ ಕ್ರಿಕೆಟ್​ ಟೂರ್ನಿಯಾದ ಐಪಿಎಲ್​ ಅನುಭವವೇ ಇದಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ವಿಶ್ವಕಪ್ ಗೆಲುವಿನ ಬಳಿಕ ಮಾತನಾಡಿದ ಸ್ಯಾಮ್​ ಕರ್ರನ್​, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಅನುಭವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲು ಸಹಕಾರಿಯಾಯಿತು. ಇದು ವಿಶ್ವಕಪ್​ನಲ್ಲೂ ಪ್ರತಿಬಿಂಬಿಸಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಯಿತು ಎಂದರು.

2 ನೇ ಬಾರಿಗೆ ಚುಟುಕು ಮಾದರಿಯ ವಿಶ್ವಕಪ್ ಎತ್ತಿಹಿಡಿದ ಇಂಗ್ಲೆಂಡ್​ ತಂಡದ ತಾರಾ ಆಲ್​ರೌಂಡರ್​ ಐಪಿಎಲ್​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ಮತ್ತು ಪಂಜಾಬ್​ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್​ನಲ್ಲಿ ಅದ್ಭುತ ತಂಡಗಳ ಜೊತೆಗೆ ಕಣಕ್ಕಿಳಿದಿದ್ದೇನೆ. ಆ ತಂಡದ ಆಟಗಾರರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಇದೇ ನನಗೆ ಇಂದಿನ ಸಾಧನೆಗೆ ನೆರವಾಯಿತು. ಕಲಿಯುವುದು ಸಾಕಷ್ಟಿದೆ. ಇದೇ ಹುಮ್ಮಸ್ಸಿನಲ್ಲಿ ಮತ್ತೆ ಭಾರತದ ಟೂರ್ನಿಗೆ ಹಿಂದಿರುಗುವೆ ಎಂದು ಸ್ಯಾಮ್​ ಹೇಳಿದರು.

ಇಂದು ಮೆಲ್ಬೋರ್ನ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್​ಗಳಿಂದ ಬಗ್ಗುಬಡಿದ ಇಂಗ್ಲೆಂಡ್​ ತಂಡ ಎರಡನೇ ಬಾರಿಗೆ ಚಾಂಪಿಯನ್​ ಆಯಿತು. ಅಲ್ಲದೇ, 2019 ರ ಏಕದಿನ ವಿಶ್ವಕಪ್​ ಗೆದ್ದಿದ್ದ ತಂಡ ಬಳಿಕ ಟಿ20 ವಿಶ್ವಕಪ್​ ಗೆದ್ದು ಮೊದಲ ತಂಡ ಎಂಬ ದಾಖಲೆ ಬರೆಯಿತು.

ಓದಿ:ಕರ್ಮ ಯಾವಾಗಲೂ ಹಿಂತಿರುಗಿಸುತ್ತದೆ: ಶೋಯೆಬ್​ ಅಖ್ತರ್​ಗೆ ಮೊಹಮದ್​ ಶಮಿ ಗುದ್ದು

ABOUT THE AUTHOR

...view details