ಸಿಡ್ನಿ: ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್ ತಂಡ 79.1 ಓವರ್ಗಳಲ್ಲಿ 294 ರನ್ಗಳಿಗೆ ಆಲೌಟ್ ಆಗುವ ಮೂಲಕ 122 ರನ್ಗಳ ಹಿನ್ನಡೆ ಅನುಭವಿಸಿದೆ.
ಶುಕ್ರವಾರ 7 ವಿಕೆಟ್ ಕಳೆದುಕೊಂಡು 258 ರನ್ಗಳಿಸಿದ್ದ ಇಂಗ್ಲೆಂಡ್ ಇಂದು ಆ ಮೊತ್ತಕ್ಕೆ ಕೇವಲ 36 ರನ್ ಸೇರಿಸಿ ಸರ್ವಪತನ ಕಂಡಿತು. 103 ರನ್ಗಳಿಸಿ ಅಜೇಯರಾಗುಳಿದಿದ್ದ ಜಾನಿ ಬೈರ್ಸ್ಟೋವ್ 158 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 113 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಜಾಕ್ ಲೀಚ್ 10, ಬ್ರಾಡ್ 15 ರನ್ಗಳಿಸಿದರು.
ಬೆನ್ ಸ್ಟೋಕ್ಸ್ 91 ಎಸೆತಗಳಲ್ಲಿ 66, ಮಾರ್ಕ್ ವುಡ್ 41 ಎಸೆತಗಳಲ್ಲಿ 39 ರನ್ಗಳಿಸಿ ಹಿನ್ನಡೆಯ ಅಂತರವನ್ನು ತಗ್ಗಿಸಿದ್ದರು. ಸ್ಕಾಟ್ ಬೊಲ್ಯಾಂಡ್ 36ಕ್ಕೆ 4, ನೇಥನ್ ಲಿಯಾನ್ 88ಕ್ಕೆ 2, ಪ್ಯಾಟ್ ಕಮಿನ್ಸ್ 68ಕ್ಕೆ 2 ವಿಕೆಟ್, ಸ್ಟಾರ್ಕ್ ಮತ್ತು ಗ್ರೀನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.