ಕೆನ್ನಿಂಗ್ಟನ್ (ಲಂಡನ್): ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಗಳಲ್ಲಿ 250 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿ ಹೊರ ಹೊಮ್ಮಿದ್ದಾರೆ. ಮಂಗಳವಾರ ಕೆನ್ನಿಂಗ್ಟನ್‌ನ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಾವು ಎದುರಿಸಿದ 58 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 76 ರನ್‌ಗಳನ್ನು ಅವರು ಚಚ್ಚಿದರು.
ENG vs IND: ಏಕದಿನ ಪಂದ್ಯಗಳಲ್ಲಿ 250 ಸಿಕ್ಸರ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ - ರೋಹಿತ್ ಶರ್ಮಾ ದಾಖಲೆ
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹೊಸ ಮೈಲುಗಲ್ಲು ಮುಟ್ಟಿದ್ದಾರೆ.
19ನೇ ಓವರ್‌ನಲ್ಲಿ ವೇಗಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ಸಿಡಿಸಿದ ಒಂದು ಸಿಕ್ಸರ್ ರೋಹಿತ್ ಈ ಹೆಗ್ಗುರುತು ತಲುಪಲು ನೆರವಾಯಿತು. ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಸನತ್ ಜಯಸೂರ್ಯ (270), ಕ್ರಿಸ್ ಗೇಲ್ (331) ಮತ್ತು ಶಾಹಿದ್ ಅಫ್ರಿದಿ (351) ನಂತರ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಲ್ಕನೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿರುವ ಕ್ರಿಕೆಟ್ ಪಟು ಆಗಿದ್ದಾರೆ.
ಜಸ್ಪ್ರಿತ್ ಬುಮ್ರಾ ಅವರ ಆಕ್ರಮಣಕಾರಿ ಬೌಲಿಂಗ್ (6/19) ಮತ್ತು ಹಿಟ್ಟರ್ ರೋಹಿತ್ ಶರ್ಮಾ ಅವರ ಅರ್ಧಶತಕದ (ಅಜೇಯ 76) ನೆರವಿನಿಂದ ಭಾರತವು ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದಿದೆ.