ಲಂಡನ್ :ಭಾರತದ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಆಲ್ರೌಂಡರ್ ಮೊಯೀನ್ ಅಲಿಗೆ ಕರೆ ನೀಡಲಾಗಿದೆ. ಗುರುವಾರದಿಂದ 2ನೇ ಟೆಸ್ಟ್ ಆರಂಭವಾಗಲಿದೆ.
ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮೊದಲ ಟೆಸ್ಟ್ ನಂತರ ಸ್ಪಿನ್ನರ್ ಆಲ್ರೌಂಡರ್ ಮೊಯೀನ್ ಅಲಿ ಅವರನ್ನು ಎರಡನೇ ಟೆಸ್ಟ್‌ಗೆ ಖಂಡಿತವಾಗಿಯೂ ಪರಿಗಣನೆಯಲ್ಲಿದ್ದಾರೆ ಎಂದು ಹೇಳಿದ ಒಂದು ದಿನದ ನಂತರ ಇಸಿಬಿ ಮೊಯೀನ್ ಸೇರ್ಪಡೆ ಖಚಿತಪಡಿಸಿದೆ.
ಪ್ರಸ್ತುತ ದಿ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ತಂಡವನ್ನು ಮುನ್ನಡೆಸುತ್ತಿರುವ ಮೊಯೀನ್, ಮಂಗಳವಾರವೇ ಇಂಗ್ಲೆಂಡ್ ತಂಡವನ್ನು ಸೇರಿಕೊಂಡು ತರಬೇತಿ ನಡೆಸಲಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇದನ್ನು ಓದಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸಲು ಐಸಿಸಿ ನಿರ್ಧಾರ
ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಲೈನ್ಅಪ್ ಹೇಳಿಕೊಳ್ಳುವಂತಿರಲಿಲ್ಲ. ಇದೀಗ ಮೊಯೀನ್ ಸೇರ್ಪಡೆಯಿಂದ ಬ್ಯಾಟಿಂಗ್ ಆಳವನ್ನು ಹೆಚ್ಚಿಸಿದೆ. ಅವರು ಲಾರೆನ್ಸ್ ಬದಲು ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.
ಮೊಯೀನ್ ಖಂಡಿತ ಪರಿಗಣನೆಯಲ್ಲಿದ್ದಾರೆ. ಅವರು ಯಾವಾಗಲೂ ನಮ್ಮ ನಮ್ಮ ಪರಿಗಣನೆಯ ಭಾಗವಾಗಿರುತ್ತಾರೆ. ಲಾರ್ಡ್ಸ್ ಟೆಸ್ಟ್ಗೂ ಮುನ್ನ ನಾನು ಮತ್ತು ಜೋ ರೂಟ್ ಇದರ ಬಗ್ಗೆ ಮಾತನಾಡಲಿದ್ದೇವೆ ಎಂದು ಕೋಚ್ ಸಿಲ್ವರ್‌ವುಡ್ ಸೋಮವಾರ ಹೇಳಿದ್ದಾರೆ.
ಅವರೊಬ್ಬ ಉತ್ತಮ ಕ್ರಿಕೆಟರ್ ಎಂಬುದು ನಮಗೆ ತಿಳಿದಿದೆ. ಪ್ರಸ್ತುತ ಅವರು ದಿ ಹಂಡ್ರೆಡ್ ಲೀಗ್ನಲ್ಲಿ ಅತ್ಯುತ್ತಮ ಲಯದಲ್ಲಿರುವುದು ನಮಗೆ ತಿಳಿದಿದೆ ಎಂದು ಇಂಗ್ಲೆಂಡ್ ಕೋಚ್ ಅಲಿ ಸೇರ್ಪಡೆ ಖಚಿತ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ 4ನೇ ದಿನ ಮಳೆಗೆ ಆಹುತಿಯಾಗುವ ಮೂಲಕ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಇದನ್ನು ಓದಿ: ಅಫ್ಘಾನಿಸ್ತಾನ ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ನೇಮಕ