ಕರ್ನಾಟಕ

karnataka

ETV Bharat / sports

ಭಾರತ ವಿರುದ್ಧದ ಸರಣಿಗೆ ಸಿದ್ಧವಾಗಲು ಪಾಕ್-ಲಂಕಾ ಸರಣಿಗಳನ್ನು ಕೈಬಿಟ್ಟ ಇಂಗ್ಲೆಂಡ್ ಕೋಚ್ - ಟೆಸ್ಟ್​ ಕ್ರಿಕೆಟ್​

ನಾನು ಶೇ.100ಕ್ಕಿಂತ ಕಡಿಮೆ ಕಾರ್ಯಾಚರಣೆ ನಡೆಸುವ ಸ್ಥಿತಿಯಲ್ಲಿದ್ದರೂ ತಂಡದಲ್ಲಿರುವುದು ಆಟಗಾರರ ದೃಷ್ಟಿಯಿಂದ ನ್ಯಾಯಸಮ್ಮತವಲ್ಲ ಮತ್ತು ನನಗೂ ಕೂಡ ಸರಿ ಎನಿಸುತ್ತಿಲ್ಲ..

ಕ್ರಿಸ್ ಸಿಲ್ವರ್​ವುಡ್​
ಕ್ರಿಸ್ ಸಿಲ್ವರ್​ವುಡ್​

By

Published : May 15, 2021, 5:11 PM IST

ಲಂಡನ್ :ಜೂನ್​ನಲ್ಲಿನ್ಯೂಜಿಲೆಂಡ್ ವಿರುದ್ಧ ನಡೆಯುವ ಟೆಸ್ಟ್​ ಸರಣಿಯ ನಂತರ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ವಿಶ್ರಾಂತಿ ಪಡೆದುಕೊಳ್ಳಲು ನಿರ್ಧರಿಸಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸೀಮಿತ ಓವರ್​ಗಳ ಸರಣಿಯ ವೇಳೆ ತಮ್ಮ ಜವಾಬ್ದಾರಿಯನ್ನು ಬೋರ್ಡ್​ಗೆ ಬಿಟ್ಟುಕೊಡಲಿದ್ದಾರೆ.

ವರ್ಷಾರಂಭದಲ್ಲಿ ಶ್ರೀಲಂಕಾ ಮತ್ತು ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿದ್ದ ಸಿಲ್ವರ್​ವುಡ್​ ತವರಿನಲ್ಲಿ ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೂ ಮುನ್ನ ಹೊಸತನವನ್ನು ಕಾಣಲು ವಿಶ್ರಾಂತಿ ಬಯಸಿರುವುದಾಗಿ ತಿಳಿಸಿದ್ದಾರೆ.

ಸಿಲ್ವರ್‌ವುಡ್ ಅನುಪಸ್ಥಿತಿಯಲ್ಲಿ ಅವರ ಸಹಾಯಕ ಕೋಚ್‌ಗಳಾದ ಪಾಲ್ ಕಾಲಿಂಗ್‌ವುಡ್ ಮತ್ತು ಗ್ರಹಾಂ ಥಾರ್ಪ್ ತವರಿನ ಎರಡು ಏಕದಿನ ಸರಣಿಗಳಲ್ಲಿ ತರಬೇತುದಾರರಾಗಿ ಜವಾಬ್ದಾರಿ ನಿರ್ವಹಿಸಿಲಿದ್ದಾರೆ.

ನಾನು ಶೇ.100ಕ್ಕಿಂತ ಕಡಿಮೆ ಕಾರ್ಯಾಚರಣೆ ನಡೆಸುವ ಸ್ಥಿತಿಯಲ್ಲಿದ್ದರೂ ತಂಡದಲ್ಲಿರುವುದು ಆಟಗಾರರ ದೃಷ್ಟಿಯಿಂದ ನ್ಯಾಯಸಮ್ಮತವಲ್ಲ ಮತ್ತು ನನಗೂ ಕೂಡ ಸರಿ ಎನಿಸುತ್ತಿಲ್ಲ.

ಹಾಗಾಗಿ, ಏಕದಿನ ಸರಣಿಯಿಂದ ಹಿಂದೆ ಸರಿದಿದ್ದೇನೆ. ನಾನು ಭಾರತದ ವಿರುದ್ಧದ ಸರಣಿಯ ವೇಳೆಗೆ ಆದಷ್ಟು ರೀಪ್ರೆಸ್​ ಆಗಲು ಬಯಸಿದ್ದೇನೆ. ಜೊತೆಗೆ ಉಳಿದ ಸಿಬ್ಬಂದಿಗೂ ಸಮಾನ ಪ್ರಾಮುಖ್ಯತೆ ನೀಡಲು ಬಯಸಿದ್ದೇನೆ ಎಂದು ಸಿಲ್ವರ್​ವುಡ್​ ತಿಳಿಸಿದ್ದಾರೆ.

ಇದನ್ನು ಓದಿ:ಇಂಟರ್​ನೆಟ್​ನಲ್ಲಿ ಕಿಚ್ಚೆಬ್ಬೆಸುತ್ತಿವೆ ವಿರಾಟ್​ ಕೊಹ್ಲಿ ಶಾಲಾ ದಿನಗಳ ಫೋಟೋಸ್​

ABOUT THE AUTHOR

...view details