ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ವಿಶ್ವಕಪ್ ತಂಡದಿಂದ ಹೊರಬಿದ್ದ ಬಳಿಕ ಅವರ ಬದಲಿಗೆ ಹಿರಿಯ ವೇಗಿ ಮೊಹಮದ್ ಶಮಿಯನ್ನು ಆಯ್ಕೆ ಮಾಡಲಾಗಿದೆ. ತಂಡವನ್ನು ಕೂಡಿಕೊಂಡಿರುವ ಶಮಿ ನೆಟ್ನಲ್ಲಿ ಬೆವರಿಳಿಸುತ್ತಿದ್ದಾರೆ. ವಿಶ್ವಕಪ್ ಪಂದ್ಯಗಳಿಗೂ ಮೊದಲು ಭಾರತ ಆಸ್ಟ್ರೇಲಿಯಾ ಜೊತೆ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಇದಕ್ಕೂ ಮೊದಲು ವೇಗಿ ಮೊಹಮದ್ ಶಮಿ ಟ್ವಿಟ್ಟರ್ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
"ವಿಶ್ವಕಪ್ನಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ತಂಡಕ್ಕೆ ಹಿಂತಿರುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಕಠಿಣ ಪರಿಶ್ರಮ, ಬದ್ಧತೆ ಮತ್ತು ಸಮರ್ಪಣಾಭಾವ ಅಗತ್ಯವಿದೆ. ಆಸ್ಟ್ರೇಲಿಯಾ ಪ್ರವಾಸದ ಸಂಪೂರ್ಣ ಲಾಭ ಪಡೆಯಬೇಕಿದೆ. ಟೀಂ ಇಂಡಿಯಾ ಮತ್ತು ನನ್ನ ಗೆಳೆಯರ ಜೊತೆ ಆಡುವುದಕ್ಕಿಂತ ಉತ್ತಮ ಭಾವನೆ ಮತ್ತೊಂದಿಲ್ಲ" ಎಂದು ಬರೆದುಕೊಂಡಿದ್ದಾರೆ. ಶಮಿಯ ಈ ಭಾವನಾತ್ಮಕ ಬರಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.