ಕರ್ನಾಟಕ

karnataka

ETV Bharat / sports

ಉದಯೋನ್ಮುಖ ಏಷ್ಯಾಕಪ್ ಫೈನಲ್: ಭಾರತಕ್ಕೆ 353 ರನ್ ಗೆಲುವಿನ ಗುರಿ ನೀಡಿದ ಪಾಕ್​ - ಈಟಿವಿ ಭಾರತ್​ ಕನ್ನಡ ನ್ಯೂಸ್

Emerging Asia Cup 2023: ಉದಯೋನ್ಮುಖ ಏಷ್ಯಾಕಪ್ 2023 ಪೈನಲ್​ ಪಂದ್ಯದಲ್ಲಿ ಇಂಡೋ-ಪಾಕ್​ ಎದುರಾಗಿದ್ದು, ಪ್ರಶಸ್ತಿ ಎತ್ತಿ ಹಿಡಿಯಲು ಜಿದ್ದಾಜಿದ್ದಿ ನಡೆಸುತ್ತಿವೆ.

ಉದಯೋನ್ಮುಖ ಏಷ್ಯಾಕಪ್ 2023 ಪೈನಲ್​ ಪಂದ್ಯ
ಉದಯೋನ್ಮುಖ ಏಷ್ಯಾಕಪ್ 2023 ಪೈನಲ್​ ಪಂದ್ಯ

By

Published : Jul 23, 2023, 3:32 PM IST

Updated : Jul 23, 2023, 6:34 PM IST

ಕೊಲಂಬೊ (ಶ್ರೀಲಂಕಾ) :ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ನಡುವೆ ಉದಯೋನ್ಮುಖ ಏಷ್ಯಾಕಪ್ 2023ರ ಫೈನಲ್​ ಪಂದ್ಯ ನಡೆಯುತ್ತಿದೆ. ಪಾಕ್​ ಪರ ತಯ್ಯಬ್ ತಾಹಿರ್ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಪಾಕ್​​ ತಂಡ ಬೃಹತ್​ ಮೊತ್ತ ಕಲೆಹಾಕಿದ್ದು, 50 ಓವರ್​ಗಳಲ್ಲಿ 352 ರನ್ ಗಳಿಸಿ​ ಭಾರತಕ್ಕೆ 353 ರನ್​ ಟಾರ್ಗೆಟ್ ನೀಡಿದೆ.

ಮೊದಲು ಟಾಸ್​ ಗೆದ್ದ ಭಾರತ ಎ ತಂಡ ನಾಯಕ ಯಶ್​ ಧುಲ್​ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಪಾಕ್​ ತಂಡವನ್ನು ಬ್ಯಾಟಿಂಗ್​ ಮಾಡಲು ಆಹ್ವಾನಿಸಿದರು. ಅದರಂತೆ ಬ್ಯಾಟಿಂಗ್​ ಆರಂಭಿಸಿದ ಪಾಕ್​ ಆರಂಭಿಕರಾದ ಸೈಮ್ ಅಯೂಬ್ ಮತ್ತು ಸಾಹಿಬ್ಜಾದಾ ಫರ್ಹಾನ್ ಶತಕದ ಜೊತೆಯಾಟವಾಡಿ ಭಾರತದ ಬೌಲರ್​ಗಳ​ ಬೆವರಿಳಿಸಿದರು. ಸೈಮ್ ಅಯೂಬ್ 59 ರನ್​ ಗಳಿಸುವ ಮೂಲಕ ಆರ್ಧ ಶತಕ ಪೂರೈಸಿದರೆ, ಮತ್ತೊಂದೆಡೆ ಸಾಹಿಬ್ಜಾದಾ ಫರ್ಹಾನ್ ಕೂಡ ಅರ್ಧಶತಕ (65) ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು.

ಭಾರತಕ್ಕೆ ಕಂಟಕವಾಗಿದ್ದ ಈ ಜೋಡಿಯನ್ನು ಮಾನವ್ ಸುತಾರ್, 59 ರನ್​ ಗಳಿಸಿದ್ದ ಸೈಮ್ ಅಯೂಬ್ ವಿಕೆಟ್​ ಪಡೆಯುವ ಮೂಲಕ ಬೇರ್ಪಡಿಸಿದರು. ಬಳಿಕ ಒಮೈರ್ ಯೂಸುಫ್ ಜೊತೆಗೂಡಿ ಸಾಹಿಬ್ಜಾದಾ ಫರ್ಹಾನ್ ಆಕ್ರಮಣಕ್ಕೆ ಮುಂದಾಗುವ ವೇಳೆ ರನ್​ ಔಟ್​ಗೆ ಬಲಿಯಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದ ತಯ್ಯಬ್ ತಾಹಿರ್ ಆಕರ್ಷಕ ಆಟದ ಮೂಲಕ ಶತಕ (108) ಬಾರಿಸಿ ​ಪಾಕ್​ ಬೃಹತ್​ ಮೊತ್ತ ಗಳಿಸಲು ಕಾರಣವಾದರು. ಒಮೈರ್ ಯೂಸುಫ್ 35 ರನ್​ ಗಳಿಸಿ ರಿಯಾನ್ ಪರಾಗ್ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

ಬಳಿಕ ಒಮೈರ್ ಯೂಸುಫ್ ಕೂಡ ಶತಕದ ನಂತರ ಆರ್.ಎಸ್ ಹಂಗಾರಗೇಕರ ಬೌಲಿಂಗ್​ನಲ್ಲಿ ಔಟ್​ ಆದರು. ಖಾಸಿಂ ಅಕ್ರಮ್ ಕೂಡ ಶೂನ್ಯಕ್ಕೆ ರಿಯಾನ್​ ಪರಾಗ್​ ಗೆವಿಕೆಟ್​ ನೀಡಿದರು. ಪಾಕ್​ ನಾಯಕ ಮೊಹಮ್ಮದ್ ಹ್ಯಾರಿಸ್ ಕೂಡ 2 ರನ್​ಗೆ ಸುಸ್ತಾಗಿ ನಿಶಾಂತ್ ಸಿಂಧು ಬೌಲಿಂಗ್​ನಲ್ಲಿ ಔಟ್​ ಆಗುವ ಮೂಲಕ​ ಹೊರ ನಡೆದರು. ಮುಬಾಸಿರ್ ಖಾನ್ ಕೆಳ ಕ್ರಮಾಂಕರದಲ್ಲಿ ತಂಡಕ್ಕೆ 35 ರನ್ ಕೊಡುಗೆ ನೀಡಿ ಹಂಗಾರಗೇಕರ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡರು. ​ಇನ್ನು 13 ರನ್​ ಗಳಿಸಿದ್ದ ಮೆಹ್ರಾನ್ ಮುಮ್ತಾಜ್ ನನ್ನು ಹರ್ಷಿತ್ ರಾಣಾ ತನ್ನ ಬೌಲಿಂಗ್​ನಲ್ಲಿ ಬಲಿ ಪಡೆದುಕೊಂಡರು. ಕೊನೆಯಲ್ಲಿ ಮೊಹಮ್ಮದ್ ವಾಸಿಂ ಜೂ 13 ರನ್​ ಮತ್ತು ಸೂಫಿಯಾನ್ ಮುಖೀಮ್ 8 ರನ್​ ಗಳಿಸಿ ಔಟ್​ ಆಗದೆ ಉಳಿದುಕೊಂಡರು.

ಭಾರತ ಪರ ಪಾಕ್​ ರನ್​ ವೇಗಕ್ಕೆ ಬ್ರೇಕ್​ ಹಾಕಲು ಸಾಧ್ಯವಾಗದೆ ಬೌಲರ್ಸ್​ ದುಬಾರಿಯಾದರು. ಆದರು ರಿಯಾನ್​ ಪರಾಗ್​ 4 ಓವರ್​ನಲ್ಲಿ 24 ರನ್​ ನೀಡಿ 6.00 ಸರಾಸರಿಯಲ್ಲಿ 2 ವಿಕೆಟ್​ ಪಡೆದು ಮಿಂಚಿದರು. ಹಂಗಾರಗೇಕರ ಕೂಡ 2 ವಿಕೆಟ್​ ಪಡೆದುಕೊಂಡು ಹೆಚ್ಚು ಬಿಟ್ಟು ಕೊಟ್ಟರು. ಇನ್ನುಳಿದಂತೆ ಮಾನವ್ ಸುತಾರ್, ಹರ್ಷಿತ್ ರಾಣಾ, ನಿಶಾಂತ್ ಸಿಂಧು ತಲಾ ಒಂದು ವಿಕೆಟ್​ ಪಡೆದರು. ಅಭಿಷೇಕ್ ಶರ್ಮಾ ಮತ್ತು ಯುವರಾಜ್‌ಸಿನ್ಹ್ ದೋಡಿಯಾ ವಿಕೆಟ್​ ಪಡೆಯುವಲ್ಲಿ ವಿಫಲರಾದರೂ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದರು.

ತಂಡಗಳು :ಭಾರತ ಎ ಇಲೆವೆನ್​ :ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೀ), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ರಾಜವರ್ಧನ್ ಹಂಗಾರಗೇಕರ.

ಪಾಕಿಸ್ತಾನ ಎ ಇಲೆವೆನ್​ : ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಒಮೈರ್ ಯೂಸುಫ್, ತಯ್ಯಬ್ ತಾಹಿರ್, ಖಾಸಿಂ ಅಕ್ರಮ್, ಮೊಹಮ್ಮದ್ ಹ್ಯಾರಿಸ್ (ನಾಯಕ ಮತ್ತು ವಿಕೀ), ಮುಬಾಸಿರ್ ಖಾನ್ ಮತ್ತು ಮೆಹ್ರಾನ್ ಮುಮ್ತಾಜ್, ಮೊಹಮ್ಮದ್ ವಾಸಿಂ ಜೂ, ಅರ್ಷದ್ ಇಕ್ಬಾಲ್, ಸೂಫಿಯಾನ್ ಮುಖೀಮ್.

ಇದನ್ನೂ ಓದಿ :'ಕೆಟ್ಟ ಅಂಪೈರಿಂಗ್​ಗೆ ಸಜ್ಜಾಗಿಯೇ ಮುಂದಿನ ದಿನಗಳಲ್ಲಿ ಬಾಂಗ್ಲಾಕ್ಕೆ ಬರ್ತೀವಿ': ಅಂಪೈರಿಂಗ್​ ವಿರುದ್ಧ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕಿಡಿನುಡಿ

Last Updated : Jul 23, 2023, 6:34 PM IST

ABOUT THE AUTHOR

...view details