ಹೈದರಾಬಾದ್: ಭಾರತದ ಸ್ಪಿನ್ ಸ್ನೇಹಿ ಪಿಚ್ಗಳಿಗೆ ಅನುಗುಣವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇಂಡಿಯಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಿದೆ. ಯುವ ಮತ್ತು ಅನುಭವಿ ಆಟಗಾರರನ್ನು ಹೊಂದಿರುವ 16 ಜನ ಸದಸ್ಯರ ತಂಡವನ್ನು ಸೂಚಿಸಿದ್ದು, ಇದರಲ್ಲಿ ನಾಲ್ವರು ಸ್ಪಿನ್ ಬೌಲರ್ಗಳನ್ನು ಹೆಸರಿಸಲಾಗಿದೆ. ಟೀಮ್ ಇಂಡಿಯಾದ ವಿರುದ್ಧದ ಭಾರತದ ಪಿಚ್ಗಳಲ್ಲಿ ಸ್ಪಿನ್ ತಂತ್ರವನ್ನು ಹೆಣೆಯಲು ಚಿಂತಿಸಿದಂತಿದೆ.
ತಂಡದಲ್ಲಿ ಮೂವರು ಆಟಗಾರರು ಭಾರತದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. 20 ವರ್ಷದ ಆಫ್‌ಸ್ಪಿನ್ನರ್ ಶೋಯೆಬ್ ಬಶೀರ್, ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಚೊಚ್ಚಲ ಟೆಸ್ಟ್ ಪಂದ್ಯದ ಕರೆಯನ್ನು ಸ್ವೀಕರಿಸಿದ್ದಾರೆ. ಬಶೀರ್ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 10 ವಿಕೆಟ್ ಮಾತ್ರ ಪಡೆದಿದ್ದು,ಉದಯೋನ್ಮುಖ ಭರವಸೆಯ ಬೌಲರ್ ಆಗಿದ್ದಾರೆ.
ಯುವಕರಿಗೆ ಅವಕಾಶ:ರೆಹಾನ್ ಅಹ್ಮದ್, ಎಡಗೈ ಸ್ಪಿನ್ನರ್ ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್ ಮತ್ತು ಕೇವಲ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶೋಯೆಬ್ ಬಶೀರ್ ಪ್ರವಾಸಿ ತಂಡದ ನಾಲ್ಕು ಸ್ಪಿನ್ನರ್‌ಗಳಾಗಿದ್ದಾರೆ. ವೇಗದ ವಿಭಾಗ ಅನುಭವಿ ಜೇಮ್ಸ್ ಆಂಡರ್ಸನ್ ಮುಂದಾಳತ್ವದಲ್ಲಿ ದಾಳಿಗೆ ಇಳಿಯಲಿದೆ. ಇವರ ಜೊತೆಗೆ ಟಿ20 ಮತ್ತು ಏಕದಿನದಲ್ಲಿ ಆಡಿದ ಅನುಭವ ಇರುವ ಗಸ್ ಅಟ್ಕಿನ್ಸನ್, ಮಾರ್ಕ್ ವುಡ್ ಮತ್ತು ಆಲಿ ರಾಬಿನ್ಸನ್ ವೇಗದ ಬೌಲರ್ಗಳಾಗಿದ್ದಾರೆ.
ಸ್ಥಾನ ಕಳೆದುಕೊಂಡ ವೋಕ್ಸ್:ಕಳೆದ ತಿಂಗಳು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಿರೀಕ್ಷೆಯಂತೆ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ, ಆದರೂ ಅವರು ಬೌಲಿಂಗ್ ಮಾಡಲು ಫಿಟ್ ಆಗುತ್ತಾರೆಯೇ ಎಂದು ನೋಡಬೇಕಾಗಿದೆ. ಬೆನ್ ಫೋಕ್ಸ್ ಅವರನ್ನು ಆಶಸ್ ಸರಣಿಗೆ ಕೈಬಿಡಲಾಗಿತ್ತು ಭಾರತದ ವಿರುದ್ಧ ಅವರನ್ನು ಸೇರಿಸಿಕೊಳ್ಳಲಾಗಿದೆ. ಜ್ಯಾಕ್ ಲೀಚ್ ಮತ್ತು ಆಲಿ ಪೋಪ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್ ಮತ್ತು ವಿಲ್ ಜ್ಯಾಕ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಆಲಿ ಪೋಪ್, ಆಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್
ಇಂಗ್ಲೆಂಡ್ ವಿರುದ್ಧ ಭಾರತ ವೇಳಾಪಟ್ಟಿ:
1ನೇ ಟೆಸ್ಟ್: ಭಾರತ v ಇಂಗ್ಲೆಂಡ್, 25-29 ಜನವರಿ, ಹೈದರಾಬಾದ್
2 ನೇ ಟೆಸ್ಟ್: ಭಾರತ v ಇಂಗ್ಲೆಂಡ್, 2-6 ಫೆಬ್ರವರಿ, ವಿಶಾಖಪಟ್ಟಣಂ
3 ನೇ ಟೆಸ್ಟ್: ಭಾರತ v ಇಂಗ್ಲೆಂಡ್, 15-19 ಫೆಬ್ರವರಿ, ರಾಜ್ಕೋಟ್
4 ನೇ ಟೆಸ್ಟ್: ಭಾರತ v ಇಂಗ್ಲೆಂಡ್, 23-27 ಫೆಬ್ರವರಿ, ರಾಂಚಿ
5 ನೇ ಟೆಸ್ಟ್: ಭಾರತ v ಇಂಗ್ಲೆಂಡ್, ಮಾರ್ಚ್ 7-11, ಧರ್ಮಶಾಲಾ
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಗೆಲ್ಲುವಲ್ಲಿ ವಿರಾಟ್ ಪ್ರಮುಖ ಪಾತ್ರ ವಹಿಸಲಿದ್ದಾರೆ: ಜಾಕ್ ಕಾಲಿಸ್