ಕರ್ನಾಟಕ

karnataka

ETV Bharat / sports

ಕೊಹ್ಲಿ v/s ಗವಾಸ್ಕರ್ : ರನ್​ ಮಷಿನ್​ಗಿಂತಲೂ ಬೆಸ್ಟ್ ಅನ್ನುತ್ತಿವೆ ಲಿಟ್ಲ್​ ಮಾಸ್ಟರ್​ ದಾಖಲೆಗಳು - southampton rain

ಸುನೀಲ್ ಗವಾಸ್ಕರ್​ ವಿರಾಟ್​ ಕೊಹ್ಲಿಗಿಂತ 1000 ದಿಂದ 6000 ರನ್​ಗಳ ಮೈಲುಗಲ್ಲನ್ನು ಕಡಿಮೆ ಇನ್ನಿಂಗ್ಸ್​ನಲ್ಲಿ ಪೂರೈಸಿದ್ದಾರೆ. ಆದರೆ, 7000 ರನ್​ಗಳ ಮೈಲುಗಲ್ಲು ತಲುಪಲು ಗವಾಸ್ಕರ್ 140 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ 138 ಇನ್ನಿಂಗ್ಸ್​ಗಳಲ್ಲಿ ತಲುಪಿದ್ದಾರೆ..

ಕೊಹ್ಲಿ vs ಗವಾಸ್ಕರ್
ಕೊಹ್ಲಿ vs ಗವಾಸ್ಕರ್

By

Published : Jun 22, 2021, 4:06 PM IST

ಸೌತಾಂಪ್ಟನ್ ​: ರನ್​ ಮಷಿನ್ ಖ್ಯಾತಿಯ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಪುಡಿಗಟ್ಟುವ ಮೂಲಕ ವಿಶ್ವದಲ್ಲಿ ಪ್ರಸ್ತುತ ಶ್ರೇಷ್ಠ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್​ರ ಎಲ್ಲಾ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಿದ್ದ ಕೊಹ್ಲಿ ಲೆಜೆಂಡರಿ ಬ್ಯಾಟ್ಸ್​ಮನ್ ಸುನೀಲ್ ಗವಾಸ್ಕರ್​ರನ್ನು ಹಿಂದಿಕ್ಕುವುದರಲ್ಲಿ ವಿಫಲರಾಗಿದ್ದಾರೆ.

ಪ್ರಸ್ತುತ WTC ಫೈನಲ್ ಸೇರಿ ವಿರಾಟ್​ ಕೊಹ್ಲಿ 154 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇಷ್ಟೇ ಇನ್ನಿಂಗ್ಸ್​ಗಳಲ್ಲಿ ಸುನೀಲ್ ಗವಾಸ್ಕರ್​ ಅವರ ದಾಖಲೆಯೊಂದಿಗೆ ಹೋಲಿಸಿದಾಗ ವಿರಾಟ್ ಸ್ವಲ್ಪ ಹಿನ್ನಡೆ ಸಾಧಿಸಿದ್ದಾರೆ.​

ಗವಾಸ್ಕರ್ 154 ಇನ್ನಿಂಗ್ಸ್​ಗಳಲ್ಲಿ 53.42 ಸರಾಸರಿಯಲ್ಲಿ 7585 ರನ್​ಗಳಿಸಿದ್ದಾರೆ. ಇಷ್ಟೇ ಇನ್ನಿಂಗ್ಸ್​ಗಳಲ್ಲಿ ವಿರಾಟ್​ ಕೊಹ್ಲಿ 52.31ರ ಸರಾಸರಿಯಲ್ಲಿ 7534 ರನ್​ ಸಿಡಿಸಿದ್ದಾರೆ. ಗವಾಸ್ಕರ್​ 27 ಶತಕ ಮತ್ತು 33 ಅರ್ಧಶತಕ ದಾಖಲಿಸಿದ್ದರೆ, ಕೊಹ್ಲಿ 27 ಶತಕ ಮತ್ತು 25 ಅರ್ಧಶತಕ ಸಿಡಿಸಿದ್ದಾರೆ.

ಸುನೀಲ್ ಗವಾಸ್ಕರ್​ ವಿರಾಟ್​ ಕೊಹ್ಲಿಗಿಂತ 1000 ದಿಂದ 6000 ರನ್​ಗಳ ಮೈಲುಗಲ್ಲನ್ನು ಕಡಿಮೆ ಇನ್ನಿಂಗ್ಸ್​ನಲ್ಲಿ ಪೂರೈಸಿದ್ದಾರೆ. ಆದರೆ, 7000 ರನ್​ಗಳ ಮೈಲುಗಲ್ಲು ತಲುಪಲು ಗವಾಸ್ಕರ್ 140 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ 138 ಇನ್ನಿಂಗ್ಸ್​ಗಳಲ್ಲಿ ತಲುಪಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​​ ಜೀವನದಲ್ಲಿ 10 ವರ್ಷ ಪೂರೈಸಿದ ಕಿಂಗ್​ ಕೊಹ್ಲಿ: ಇಲ್ಲಿದೆ ದಶಕದ ಸಾಧನೆ..

ABOUT THE AUTHOR

...view details