ದುಬೈ: ಒಂದೇ ಓವರ್ನಲ್ಲಿ ಆರು ಸಿಕ್ಸರ್ ಬಾರಿಸಿರುವ ಬ್ಯಾಟರ್ಗಳ ಬಗ್ಗೆ ನಿವೆಲ್ಲರೂ ಕೇಳಿದ್ದೀರಿ. ಆದರೆ, ಭಾರತ ಮೂಲದ ಬೌಲರ್ ಒಂದೇ ಓವರ್ನಲ್ಲಿ ಆರು ವಿಕೆಟ್ ಪಡೆದು ಹೊಸ ಸಾಧನೆ ಮಾಡಿದ್ದಾರೆ. ದುಬೈನಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ಹರ್ಷಿತ್ ಸೇಠ್, ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯವೊಂದರಲ್ಲಿ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಯುಎಇಯಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಸರಣಿ ಆಯೋಜನೆಗೊಂಡಿತ್ತು. ದುಬೈ ಕ್ರಿಕೆಟ್ ಕೌನ್ಸಿಲ್ ಪರ ಆಡಿದ ಹರ್ಷಿತ್ ಪಾಕಿಸ್ತಾನದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ. ನವೆಂಬರ್ 28ರಂದು ಈ ಪಂದ್ಯ ನಡೆದಿದ್ದು, ಇದೀಗ ಸುದ್ದಿ ಬೆಳಕಿಗೆ ಬಂದಿದೆ.
ಹೈದರಾಬಾದ್ ಹಾಕ್ಸ್ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 6 ವಿಕೆಟ್ ಸೇರಿದಂತೆ ಒಟ್ಟು 8 ವಿಕೆಟ್ ಪಡೆದುಕೊಂಡಿರುವ ಹರ್ಷಿತ್ ಸೇಠ್, ಎದುರಾಳಿ ತಂಡ ಕೇವಲ 44ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಎಡಗೈ ಸ್ಪಿನ್ನರ್ ಆಗಿರುವ ಹರ್ಷಿತ್ ಈ ಪಂದ್ಯದಲ್ಲಿ ನಾಲ್ವರು ಬ್ಯಾಟರ್ಗಳನ್ನ ಕ್ಲೀನ್ ಬೌಲ್ಡ್ ಮಾಡಿದ್ದು, ಮೂವರು ಪ್ಲೇಯರ್ಗಳನ್ನ ಎಲ್ಬಿ ಬಲೆಗೆ ಹಾಗೂ ಮತ್ತೋರ್ವ ಬ್ಯಾಟರ್ ಕ್ಯಾಚ್ ನೀಡಿದ್ದಾರೆ.