ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​ ಇತಿಹಾಸದಲ್ಲೇ ಮೊದಲ ಬಾರಿಗೆ DRS ಬಳಕೆ

ಪುರುಷರ ವಿಶ್ವಕಪ್​ ಒಮಾನ್ ಮತ್ತು ಯುಎಇಯಲ್ಲಿ ನಡೆಯಲಿದೆ. ಅಕ್ಟೋಬರ್​ 17ರಿಂದ ನವೆಂಬರ್​ 14ರವರೆ ಈ ಚುಟುಕು ಸಮರ ಜರುಗಲಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ.

DRS to make debut in upcoming men's T20 World Cup
ಮೊದಲ ಬಾರಿಗೆ ಡಿಆರ್​ಎಸ್​ ಬಳಕೆ

By

Published : Oct 10, 2021, 4:43 PM IST

Updated : Oct 10, 2021, 5:27 PM IST

ದುಬೈ: ಅಕ್ಟೋಬರ್​ 17ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ನಲ್ಲಿ ಅಂಪೈರ್​ ತೀರ್ಮಾನ ಪರಾಮರ್ಶೆ ವ್ಯವಸ್ಥೆಯನ್ನು (DRS​)ಬಳಸಲು ಐಸಿಸಿ ತೀರ್ಮಾನಿಸಿದೆ. ಇದೀಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಆರ್​ಎಸ್​ ಬಳಕೆಯಾಗಲಿದೆ ಎಂದು ಐಸಿಸಿ(ICC) ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.

ಪುರುಷರ ವಿಶ್ವಕಪ್​ ಒಮಾನ್ ಮತ್ತು ಯುಎಇಯಲ್ಲಿ ನಡೆಯಲಿದೆ. ಅಕ್ಟೋಬರ್​ 17ರಿಂದ ನವೆಂಬರ್​ 14ರವರೆ ಈ ಚುಟುಕು ಸಮರ ಜರುಗಲಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ.

ಕೋವಿಡ್​ 19 ಭೀತಿಯ ಪರಿಣಾಮ ಪರಿಣಿತ ಅಂಪೈರ್​ಗಳ ಕೊರತೆ ಉಂಟಾಗಿದ್ದರಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಹೆಚ್ಚುವರಿ ಐಸಿಸಿ ಡಿಆರ್​ಎಸ್​ ರಿವ್ಯೂವ್​ ತೆಗೆದುಕೊಳ್ಳಲು ಅವಕಾಶ ಕೊಟ್ಟು ಅನುಮೋದನೆ ನೀಡಿತ್ತು. ಅದರಂತೆ ಸೀಮಿತ ಓವರ್​ ಪಂದ್ಯಗಳ ಪಂದ್ಯದ ಪ್ರತಿ ಇನ್ನಿಂಗ್ಸ್​ನಲ್ಲಿ 2 ಅವಕಾಶ ಮತ್ತು ಟೆಸ್ಟ್​ನಲ್ಲಿ 3 ರಿವ್ಯೂವ್​ಗಳಿಗೆ ಏರಿಕೆ ಮಾಡಲಾಗಿತ್ತು. ಇದೀಗ ವಿಶ್ವಕಪ್​ನಲ್ಲಿ ಎರಡೂ ತಂಡಗಳೂ ಪ್ರತಿ ಇನ್ನಿಂಗ್ಸ್​ನಲ್ಲಿ ತಲಾ ಎರಡು ರಿವ್ಯೂವ್​ಗಳನ್ನು ಪಡೆಯಲಿವೆ.

ಭಾರತದಲ್ಲಿ 2016ರಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್​​ನಲ್ಲಿ ಡಿಆರ್​ಎಸ್ ವ್ಯವಸ್ಥೆ ಇರಲಿಲ್ಲ.​ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಇದು ಬಳಕೆಯಾಗಲಿದೆ. 2018ರ ಮಹಿಳೆಯರ ಟಿ20 ವಿಶ್ವಕಪ್​ ಮೂಲಕ ಡಿಆರ್​ಎಸ್​ ಚುಟುಕು ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿತ್ತು.

ಇದನ್ನು ಓದಿ:ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ ₹12 ಕೋಟಿ.. ಸೆಮಿಫೈನಲ್ಸ್​ ತಂಡಗಳಿಗೂ ಬಂಪರ್​..

Last Updated : Oct 10, 2021, 5:27 PM IST

ABOUT THE AUTHOR

...view details