ದುಬೈ:ಶುಕ್ರವಾರದಿಂದ ನ್ಯೂಜಿಲ್ಯಾಂಡ್ನಲ್ಲಿ ಆರಂಭವಾಗಲಿರುವ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ (ಡಿಆರ್ಎಸ್) ಸೌಲಭ್ಯವು ಎಲ್ಲಾ ಪಂದ್ಯಗಳಿಗೂ ಲಭ್ಯವಾಗಲಿದೆ ಎಂದು ಐಸಿಸಿ ಗುರುವಾರ ತಿಳಿಸಿದೆ.
ಡಿಆರ್ಎಸ್ ಪದ್ಧತಿಯನ್ನು ಮಹಿಳಾ ವಿಶ್ವಕಪ್ನಲ್ಲಿ ಎರಡನೇ ಬಾರಿ ಬಳಸಲಾಗುತ್ತಿದೆ. 2017ರ ಇಂಗ್ಲೆಂಡ್ ಅವೃತ್ತಿಯಲ್ಲಿ ಈ ಪದ್ದತಿ ಜಾರಿಯಲ್ಲಿತ್ತು. "ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್ಎಸ್) ವಿಶ್ವಕಪ್ನ ಎಲ್ಲಾ ಪಂದ್ಯಗಳಿಗೂ ಲಭ್ಯವಿರಲಿದೆ" ಎಂದು ವಿಶ್ವ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
"ಪ್ರತಿಷ್ಠಿತ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಪ್ರಪಂಚದಾದ್ಯಂತ ಬ್ರಾಡ್ಕಾಸ್ಟ್ ಪಾಲುದಾರರು ನೇರಪ್ರಸಾರ ಮಾಡುತ್ತಾರೆ. ಆರು ಸ್ಟೇಡಿಯಂನಲ್ಲಿ ಕನಿಷ್ಠ 24 ಕ್ಯಾಮೆರಾಗಳನ್ನು ಬಳಸಿಕೊಂಡು ಐಸಿಸಿ ಟಿವಿಯಿಂದ ಸೆರೆಹಿಡಿಯುವ ವಿಶ್ವಮಟ್ಟದ ಕಾರ್ಯಕ್ರಮವನ್ನು ಅವರು ಪ್ರದರ್ಶಿಸಲಿದ್ದಾರೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಶುಕ್ರವಾರ ಆತಿಥ್ಯ ರಾಷ್ಟ್ರ ನ್ಯೂಜಿಲ್ಯಾಂಡ್ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೌಂಟ್ ಮೌಂಗನುಯಿಯಲ್ಲಿ ಎದುರಿಸಲಿದೆ. ಭಾರತ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ.
ಇದನ್ನೂ ಓದಿ:'100 ಟೆಸ್ಟ್ ಪಂದ್ಯಗಳನ್ನಾಡುವ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ': ಬಿಸಿಸಿಐ ಸಂದರ್ಶನಲ್ಲಿ ಕೊಹ್ಲಿ ಮಾತು