ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 2022ರ ಆವೃತ್ತಿಗೂ ಮುನ್ನ ಬಿಸಿಸಿಐ ಡಿಆರ್ಎಸ್ ಸೇರಿದಂತೆ ಕೆಲವು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾರ್ಚ್ 26 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ಮತ್ತು ರನ್ನರ್ ಅಪ್ ಕೆಕೆಆರ್ ಕಣಕ್ಕಿಳಿಯಲಿವೆ. ಈ ಬಾರಿ ಶ್ರೀಮಂತ ಲೀಗ್ನಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ಪದ್ದತಿ(ಡಿಆರ್ಎಸ್) ರಿವ್ಯೂವ್ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ.
ಕ್ರಿಕ್ಬಜ್ ವರದಿಯ ಪ್ರಕಾರ, ಬಿಸಿಸಿಐ 15ನೇ ಆವೃತ್ತಿಯಲ್ಲಿ ಪ್ರತಿ ಇನ್ನಿಂಗ್ಸ್ನಲ್ಲಿ ಒಂದರ ಬದಲು ಎರಡು ರಿವ್ಯೂವ್ ತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ. ಅಂದರೆ ಪ್ರತಿ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ತಂಡಗಳು ಅಂಪೈರ್ ತೀರ್ಪಿನ ವಿರುದ್ಧ ತಲಾ 2 ಬಾರಿ ರಿವ್ಯೂವ್ ತೆಗೆದುಕೊಳ್ಳಬಹುದು. ಈ ಹಿಂದಿನ ಆವೃತ್ತಿಗಳು ಪ್ರತಿ ಇನ್ನಿಂಗ್ಸ್ನಲ್ಲಿ ಎರಡೂ ತಂಡಗಳು ಒಮ್ಮೆ ಮಾತ್ರ ರಿವ್ಯೂವ್ ತೆಗೆದುಕೊಳ್ಳಬಹುದಿತ್ತು.