ಕರ್ನಾಟಕ

karnataka

ETV Bharat / sports

ವೈಡ್​, ಹೈಟ್ ನೋ ಬಾಲ್​ಗಳಿಗೂ ಡಿಆರ್​ಎಸ್​ ಅವಕಾಶ ಇದ್ದರೆ ಉತ್ತಮ​: ವಿಟೋರಿ

ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್​ 19ನೇ ಓವರ್​ನಲ್ಲಿ ನೀಡಿದ ವೈಡ್​ ತೀರ್ಪು ನಾಯಕ ಸಂಜು ಸಾಮ್ಸನ್​ಗೆ ಅಸಮಾಧಾನ ಉಂಟುಮಾಡಿತ್ತು. ಬ್ಯಾಟರ್​ ವೈಡ್​ ಕ್ರೀಸ್​ ಮುಂದೆ ಬಂದು ಬ್ಯಾಟ್​ ಮಾಡುತ್ತಿದ್ದರೂ ಆ ಎಸೆತಗಳನ್ನು ಅಂಪೈರ್ ವೈಡ್​ ನೀಡುತ್ತಿದ್ದರು. ಆದರೆ ಬ್ಯಾಟರ್ ಮುಂದೆ ಬಂದು ಆಡಿದಾಗ ನಿಯಮಗಳ ಪ್ರಕಾರ ಅದು ಒಳ್ಳೆಯ ಎಸೆತವಾಗಬೇಕಿತ್ತು.

DRS challenge need for wide-ball calls: Daniel Vettori
ವೈಡ್​ಬಾಲ್​ಗೆ ಡಿಆರ್​ಎಸ್​

By

Published : May 3, 2022, 9:12 PM IST

ಮುಂಬೈ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಂಪೈರ್​ಗಳ ಕೆಲವು ತೀರ್ಪುಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತಿವೆ. ವೈಡ್​, ನೋಬಾಲ್​ ತೀರ್ಪುಗಳು ವಿವಾದಕ್ಕೆ ಕಾರಣವಾಗುತ್ತಿವೆ. ಈ ಕಾರಣದಿಂದ ವೈಡ್​​ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಸಿಬಿ ಮಾಜಿ ನಾಯಕ ಮತ್ತು ಮಾಜಿ ಕೋಚ್ ಡೇನಿಯಲ್ ವಿಟೋರಿ ಕಷ್ಟಕರವಾದ ವೈಡ್​ಗಳ ನಿರ್ಧಾರವನ್ನು ಪ್ರಶ್ನಿಸಲು ಡಿಆರ್​ಎಸ್​ ಉಪಯೋಗಿಸುವ ಅವಕಾಶವನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್​ 19ನೇ ಓವರ್​ನಲ್ಲಿ ನೀಡಿದ ವೈಡ್​ ತೀರ್ಪು ನಾಯಕ ಸಂಜು ಸಾಮ್ಸನ್​ಗೆ ಅಸಮಾಧಾನ ಉಂಟುಮಾಡಿತ್ತು. ಬ್ಯಾಟರ್​ ವೈಡ್​ ಕ್ರೀಸ್​ ಮುಂದೆ ಬಂದು ಬ್ಯಾಟ್​ ಮಾಡುತ್ತಿದ್ದರೂ ಆ ಎಸೆತಗಳನ್ನು ಅಂಪೈರ್ ವೈಡ್​ ನೀಡುತ್ತಿದ್ದರು. ಆದರೆ ಬ್ಯಾಟರ್ ಮುಂದೆ ಬಂದು ಆಡಿದಾಗ ನಿಯಮಗಳ ಪ್ರಕಾರ ಅದು ಒಳ್ಳೆಯ ಎಸೆತವಾಗಬೇಕಿತ್ತು.

ವೈಡ್​ಗೋಸ್ಕರ ಆಟಗಾರರು ಡಿಆರ್​ಎಸ್ ತೆಗೆದುಕೊಳ್ಳಲು ಅನುಮತಿ ನೀಡಬೇಕು. ಇಂತಹ ಗೊಂದಲ ಸಮಯದಲ್ಲಿ ಆಟಗಾರರಿಗೆ ಸ್ವಾತಂತ್ರ್ಯ ಅಗತ್ಯವಿದೆ. ರಾಜಸ್ಥಾನ್​ ಪಂದ್ಯದಲ್ಲಿ ಕೋಲ್ಕತ್ತಾ ಗೆಲುವು ಸಾಧಿಸಿತ್ತು. ಆದರೆ ಸಾಕಷ್ಟು ಬಾರಿ ಅಂಪೈರ್ ತೀರ್ಪು ಬೌಲರ್​ಗೆ ವಿರುದ್ಧವಾಗಿದ್ದವು. ಅದರಲ್ಲೂ ವೈಡ್ ವಿಚಾರದಲ್ಲಿ ಕೆಲವು ತಪ್ಪು ನಿರ್ಣಯಗಳು ಬಂದವು ಎಂದು ಅನ್ನಿಸುತ್ತಿದೆ. ಹಾಗಾಗಿ ಕ್ಲಿಷ್ಟಕೆ ವೈಡ್​​ ನಿರ್ಧಾರವನ್ನು ಡಿಆರ್​ಎಸ್​ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ನೀಡಿದರೆ ಉತ್ತವಾಗಿರುತ್ತದೆ ಎಂದು ಡೇನಿಯಲ್ ವಿಟೋರಿ ಅಭಿಪ್ರಾಯಪಟ್ಟಿದ್ದಾರೆ.

ವಿಟೋರಿ ಸಲಹೆಯನ್ನು ಬೆಂಬಲಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್​ ಇಮ್ರಾನ್ ತಾಹೀರ್​​, ಹೌದು, ಏಕೆ ಆಗಲ್ಲ? ಕ್ರಿಕೆಟ್​ನಲ್ಲಿ ಬೌಲರ್​ಗಳಿಗೆ ಸಾಕಷ್ಟು ಬೆಂಬಲದ ನಿಯಮಗಳಿಲ್ಲ. ಬ್ಯಾಟರ್​ ನಿಮಗೆ ಮೈದಾನದ ಸುತ್ತ ಹೊಡೆಯುತ್ತಿದ್ದಾಗ ವೈಡ್​ ಯಾರ್ಕರ್ ಅಥವಾ ವೈಡ್​ ಲೆಗ್​ ಬ್ರೇಕರ್ ​ ಎಸೆಯದೇ ನಿಮಗೆ ಬೇರೆ ಆಯ್ಕೆಗಳಿರುವುದಿಲ್ಲ ಎಂದು ತಾಹೀರ್ ಹೇಳಿದ್ದಾರೆ.

ಇದನ್ನೂ ಓದಿ:ಅಹಮದಾಬಾದ್​ನಲ್ಲಿ ಐಪಿಎಲ್ ಫೈನಲ್... ಪುಣೆಯಲ್ಲಿ ವುಮೆನ್ಸ್ ಟಿ-20 ಚಾಲೆಂಜ್​

ABOUT THE AUTHOR

...view details