ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟಿತ್ತು. ಆದರೆ ಸ್ವತಃ ಭುವನೇಶ್ವರ್ಗೆ ಟೆಸ್ಟ್ ಆಡುವುದಕ್ಕೆ ಇಷ್ಟವಿಲ್ಲ ಎಂದು ಬಿಸಿಸಿಐ ಮೂಲಗಳ ಆಧಾರದ ಮೇಲೆ ಕೆಲವು ವರದಿ ಪ್ರಕಟವಾಗಿದ್ದವು.
ಆದರೆ ಈ ವರದಿಗಳ ಬಗ್ಗೆ ಕಿಡಿ ಕಾರಿರುವ ಭುವನೇಶ್ವರ್ ಕುಮಾರ್ ಮೂಲಗಳ ಆಧಾರದಲ್ಲಿ ನಿಮ್ಮ ಊಹೆಗಳನ್ನು ಬರೆಯಬೇಡಿ ಎಂದು ಟ್ವಿಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತಿಲ್ಲ ಎಂಬಂತೆ ಹಲವು ಲೇಖನಗಳನ್ನು ಪ್ರಕಟವಾಗಿವೆ. ಅವುಗಳಿಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ತಂಡದ ಆಯ್ಕೆಯನ್ನು ಲೆಕ್ಕಿಸದೇ ನಾನು ಸದಾ ಮೂರು ಸ್ವರೂಪದ ಕ್ರಿಕೆಟ್‌ಗಳಿಗೆ ತಯಾರಿ ನಡೆಸುತ್ತಿದ್ದೇನೆ ಮತ್ತು ಅದನ್ನು ಇನ್ನೂ ಮುಂದುವರಿಸುತ್ತೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಆದರೆ, ಮೂಲಗಳು ಎಂದ ಆಧಾರವನ್ನಿಟ್ಟುಕೊಂಡು ನಿಮ್ಮ ಊಹೆಗಳ ತೋಚಿದಂತೆ ವರದಿಗಳನ್ನು ದಯವಿಟ್ಟು ಬರೆಯಬೇಡಿ. ಇದು ನನ್ನ ಸಲಹೆ ಎಂದು ಬರೆದುಕೊಂಡಿದ್ದಾರೆ.
ಭುವನೇಶ್ವರ್ ಕುಮಾರ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಸರಣಿಯಲ್ಲಿ ಗಾಯಗೊಂಡಿದ್ದ ಅವರು ನಂತರ ಇಲ್ಲಿಯವರೆಗೆ ದೀರ್ಘ ಮಾದರಿಯ ದೇಶಿ ಅಥವಾ ರಾಷ್ಟ್ರೀಯ ತಂಡದ ಪರ ಒಂದೂ ಪಂದ್ಯವನ್ನಾಡಿಲ್ಲ. ಹಾಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆಗಾರರು ಪರಿಗಣಿಸಿಲ್ಲ.
ಸ್ವಿಂಗ್ ಸ್ಪೆಷಲಿಸ್ಟ್ ಆಗಿರುವ ಭುವನೇಶ್ವರ್ ಕುಮಾರ್ 21 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 63 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ 3 ಅರ್ಧಶತಕ ಸಿಡಿಸಿ ಕೊಡುಗೆ ನೀಡಿದ್ದಾರೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ಸ್ಟಾರ್ ಇಂಡಿಯನ್ ಬೌಲರ್ ನಿರ್ಧಾರ ?