ಚೆನ್ನೈ:ಮೈದಾನದಲ್ಲಿ ಆಡುವಾಗ ಯಾವುದೇ ಬೌಲರ್ಗಳ ವಿರುದ್ಧದ ಸ್ಪರ್ಧೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಸಂದರ್ಭಗಳಿಗೆ ಅನುಗುಣವಾಗಿ ಆಡಲು ಪ್ರಯತ್ನಿಸುತ್ತೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.
ಮಂಗಳವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂತ್ 7 ರನ್ ಗಳಿಸಿದ್ದ ವೇಳೆ ಜಸ್ಪ್ರೀತ್ ಬುಮ್ರಾ ಔಟ್ ಮಾಡಿದ್ದರು. ಬುಮ್ರಾ ಮತ್ತು ನಿಮ್ಮ ನಡುವೆ ಸ್ಪರ್ಧೆಯ ಬಗ್ಗೆ ಯೋಚಿಸಿದ್ದೀರಾ ಎಂದು ಕೇಳಿದ್ದಕ್ಕೆ, ಆ ಸಂದರ್ಭದಲ್ಲಿ ಬುಮ್ರಾರನ್ನು ಅವರು ಕಣಕ್ಕಿಳಿಸದೇ ಬೇರೆ ದಾರಿಯಿರಲಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.
"ನಾನೊಬ್ಬ ಆಟಗಾರನಾಗಿ ಹೇಳುವುದೆಂದರೆ, ನೀವು ಯಾವುದೇ ಆಟಗಾರನ ಜೊತೆ ಮ್ಯಾಚ್-ಅಪ್ ಬಗ್ಗೆ ಗಮನ ನೀಡಬಾರದು. ನೀವು ಏನು ಮಾಡುತ್ತೀರಾ ಅಥವಾ ಹಿಂದೆ ಏನು ಮಾಡಿದ್ದೀರಾ ಎನ್ನುವುದು ವಿಷಯವಲ್ಲ. ಕ್ರಿಕೆಟ್ನಲ್ಲಿ ಪ್ರತಿದಿನವೂ ಹೊಸ ದಿನ. ಮುಂಬೈ ನನ್ನ ವಿರುದ್ಧ ಕಣಕ್ಕಿಳಿಸಿದ್ರು, ಯಾಕಂದ್ರೆ ಅವರಿಗೆ ಆ ಸಂದರ್ಭದಲ್ಲಿ ಬೇರೆ ಆಯ್ಕೆಯಿರಲಿಲ್ಲ. ನಾನು ಕೂಡ ನನ್ನ ಆಟವನ್ನೇ ಆಡಿದೆ. ಯಾಕಂದ್ರೆ ನಾವು ಚೇಸ್ ಮಾಡ್ತಿದ್ವಿ. ಆದ್ದರಿಂದ ನಾವು ಯಾವುದೇ ಬೌಲರ್ ಜೊತೆಗೆ ಮ್ಯಾಚ್ ಅಪ್ಗಿಂತ ಹೆಚ್ಚಾಗಿ ಪಂದ್ಯದ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕು" ಎಂದು ಪಂತ್ ಪಂದ್ಯದ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.