ಕರ್ನಾಟಕ

karnataka

ETV Bharat / sports

ದ್ರಾವಿಡ್​ಗೆ ತಂಡವನ್ನು ಮುನ್ನಡೆಸುವ ಪಾಠ ಮಾಡ್ಬೇಡಿ, ಅವರಿಚ್ಛೆಯಂತೆ ಬಿಟ್ಬಿಡಿ: ಬಿಸಿಸಿಐಗೆ ಜಡೇಜಾ ಮನವಿ

ಐಸಿಸಿ ಹಾಲ್ ಆಫ್​ ಗೌರವಕ್ಕೆ ಪಾತ್ರರಾಗಿರುವ ಕನ್ನಡಿಗ ದ್ರಾವಿಡ್​ ಭಾರತದ ತರಬೇತುದಾರರಾಗಿ ಟೀಂ​ ಇಂಡಿಯಾ ಜೊತೆ 3 ಐಸಿಸಿ ಟೂರ್ನಿಗಳಲ್ಲಿ ಭಾರತದ ಆಟಗಾರರ ಜೊತೆಗೆ ಪ್ರಯಾಣಿಸಲಿದ್ದಾರೆ. ಈಗಾಗಲೇ ಭಾರತ ಎ, ಅಂಡರ್​ 19 ಮತ್ತು ಐಪಿಎಲ್​ ತಂಡಗಳಿಗೆ ಕೋಚ್ ಆಗಿ ಯಶಸ್ವಿಯಾಗಿರುವ ದ್ರಾವಿಡ್​ ಮತ್ತೆ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್​ಗೆ ಮರಳುತ್ತಿದ್ದು, ಹಾಲಿ ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

Rahul Dravid
ರಾಹುಲ್ ದ್ರಾವಿಡ್​

By

Published : Nov 4, 2021, 7:38 PM IST

ಮುಂಬೈ: ಕನ್ನಡಿಗ ರಾಹುಲ್ ದ್ರಾವಿಡ್ ಹೆಚ್ಚು ಕಡಿಮೆ ದಶಕದ ಬಳಿಕ ಮತ್ತ ಭಾರತ ತಂಡಕ್ಕೆ ಮರಳುತ್ತಿದ್ದಾರೆ. 2013ರಲ್ಲಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ದ್ರಾವಿಡ್​ ಇದೀಗ ಮುಖ್ಯ ಕೋಚ್​ ಆಗಿ ಭಾರತ ತಂಡದ ಡ್ರೆಸ್ಸಿಂಗ್ ರೂಮಿನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಎರಡು ಬಾರಿ ಸೀಮಿತ ಅವಧಿಗೆ ಭಾರತ ತಂಡದ ಕೋಚ್​ ಆಗಿದ್ದ ದ್ರಾವಿಡ್​ ಮುಂದಿನ ನ್ಯೂಜಿಲ್ಯಾಂಡ್​ ವಿರುದ್ಧದ ತವರಿನ ಸರಣಿಯಿಂದ 2 ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಐಸಿಸಿ ಹಾಲ್ ಆಫ್​ ಗೌರವಕ್ಕೆ ಪಾತ್ರರಾಗಿರುವ ಕನ್ನಡಿಗ ದ್ರಾವಿಡ್​ ಭಾರತದ ತರಬೇತುದಾರರಾಗಿ ಟೀಂ​ ಇಂಡಿಯಾ ಜೊತೆ 3 ಐಸಿಸಿ ಟೂರ್ನಿಗಳಲ್ಲಿ ಭಾರತದ ಆಟಗಾರರ ಜೊತೆಗೆ ಪ್ರಯಾಣಿಸಲಿದ್ದಾರೆ. ಈಗಾಗಲೇ ಭಾರತ ಎ, ಅಂಡರ್​ 19 ಮತ್ತು ಐಪಿಎಲ್​ ತಂಡಗಳಿಗೆ ಕೋಚ್ ಆಗಿ ಯಶಸ್ವಿಯಾಗಿರುವ ದ್ರಾವಿಡ್​ ಮತ್ತೆ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್​ಗೆ ಮರಳುತ್ತಿದ್ದು, ಹಾಲಿ ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಕ್ರಿಕ್​ಬಜ್​ ಕಾರ್ಯಕ್ರಮದಲ್ಲಿ ದ್ರಾವಿಡ್​ ಕೋಚ್​ ಆಗಿರುವುದರ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅಜಯ್​ ಜಡೇಜಾ " ಬಿಸಿಸಿಐ ದ್ರಾವಿಡ್​ಗೆ ಕೋಚ್​ ಆಗಿ ಹೇಗೆ ಕೆಲಸ ಮಾಡಬೇಕೆಂದು ಸಲಹೆ ನೀಡಲು ಹೋಗದೆ ಅವರನ್ನು ಅವರ ಪಾಡಿಗೆ ಬಿಡುವಂತೆ" ವಿಶೇಷ ಮನವಿ ಮಾಡಿದ್ದಾರೆ.

"ಯಾರಾದರೂ ಶಿಸ್ತು ಮತ್ತು ಬದ್ಧತೆಗೆ ರೋಲ್‌ ಮಾಡೆಲ್‌ ಅಂದರೆ, ಅದು ರಾಹುಲ್ ದ್ರಾವಿಡ್‌. ಕೋಚ್​ಗಳಿಂದ ನೀವು ವಿಷಯಗಳನ್ನು ನಿರೀಕ್ಷಿಸುತ್ತೀರಿ. ಅದರೆ ಶಿಸ್ತು ಮತ್ತು ಬದ್ಧತೆ ಅತ್ಯಂತ ಪ್ರಮುಖ ವಿಷಯಗಳಾಗಿರುತ್ತವೆ. ಪ್ರಸ್ತುತ ಭಾರತ ತಂಡದ ಮುಂದಿನ ನಾಯಕನ ಆಯ್ಕೆಯನ್ನು ದ್ರಾವಿಡ್‌ ಮಾಡುತ್ತಾರೆಯೇ ಅಥವಾ ಆಯ್ಕೆ ಸಮಿತಿ ನಿರ್ಧರಿಸುತ್ತದೆಯೋ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ".

"ಭಾರತ ತಂಡದ ಕೋಚ್‌ ಆಗಿರುವ ವ್ಯಕ್ತಿಗೆ ತನ್ನದೇ ಆದ ದೃಷ್ಟಿಕೋನದಂತೆ ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಡಬೇಕು. ಅವರಿಗೆ ಪ್ರತಿಯೊಂದು ವಿಷಯವನ್ನು ಪಾಠ ಮಾಡುವುದಾದರೆ ಯಾರು ಬೇಕಾದರೂ ಕೋಚ್‌ ಆಗಬಹುದು" ಎಂದು ಜಡೇಜಾ ಹೇಳಿದ್ದಾರೆ.

ಮುಂದುವರಿಸಿ, " ನೀವು ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಹೆಸರಾದ ರಾಹುಲ್ ದ್ರಾವಿಡ್‌ ಅವರನ್ನು ಕರೆತಂದಿದ್ದೀರಿ. ಆದ್ದರಿಂದ ನೀವು ಅವರ ದೃಷ್ಟಿಕೋನದಂತೆ ಮುಂದುವರಿಯುವುದಕ್ಕೆ ಬಿಡಿ. ಇದು ಬಿಸಿಸಿಐಗೆ ನಾನು ಮಾಡಿಕೊಳ್ಳುವ ಮನವಿ. ದ್ರಾವಿಡ್‌ ಅಂತಹ ವ್ಯಕ್ತಿ ತಂಡಕ್ಕೆ ಸೇರಿದ್ದಾರೆಂದರೆ, ದಯವಿಟ್ಟು ಅವರನ್ನ ಅವರಿಚ್ಛೆಯಂತೆ ನಡೆಯಲು ಬಿಡಿ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬ ಪಾಠವನ್ನು ಮಾಡಲು ದಯಮಾಡಿ ಹೋಗಬೇಡಿ " ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ:ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ; ನಾರಾಯಣಗೌಡ ಅಭಿನಂದನೆ

ABOUT THE AUTHOR

...view details