ನವದೆಹಲಿ: ಈಗಾಗಲೇ ಭಾರತ ಟೆಸ್ಟ್ ಮತ್ತು ಟಿ-20 ತಂಡದಿಂದ ಹೊರಬಿದ್ದಿರುವ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಆಯ್ಕೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾರತ ತಂಡದ ಮಾಜಿ ಆಯ್ಕೆಗಾರ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.
ಧವನ್ ಕಳೆದ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ದ್ವಿತೀಯ ದರ್ಜೆಯ ಭಾರತ ತಂಡದಲ್ಲಿ ಕೊನೆಯ ಬಾರಿ ಆಡಿದ್ದರು. ನಂತರ ಐಪಿಎಲ್ನಲ್ಲಿ 2021ರಲ್ಲಿ ಡೆಲ್ಲಿಪರ 587 ರನ್ಗಳಿಸಿದ ಹೊರತಾಗಿಯೂ ಅವರು ಟಿ-20 ವಿಶ್ವಕಪ್ಗಾಗಿ ಘೋಷಿಸಿದ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು.
ನಂತರ ಭಾರತೀಯರ ಆಯ್ಕೆಗಾರರು ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಗೂ ಧವನ್ರನ್ನು ಕಡೆಗಣಿಸಿದ್ದರು. ರೋಹಿತ್ ಮತ್ತು ರಾಹುಲ್ ಜೊತೆಗೆ ಇಶಾನ್ ಕಿಶನ್ರನ್ನು ಮೀಸಲು ಆರಂಭಿಕನಾಗಿ ಆಯ್ಕೆಮಾಡಿದ್ದರು. ಹಾಗಾಗಿ ಕರೀಮ್ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಧವನ್ ಅವರನ್ನು ಆಯ್ಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
" ಒಂದು ವೇಳೆ ಶಿಖರ್ ಧವನ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದರೂ ಅವರೂ ಆಡುವ ಹನ್ನೊಂದರ ಬಳಗದ ಭಾಗವಾಗಲಿದ್ದಾರೆಯೇ? ರೋಹಿತ್ ಮತ್ತು ಕೆಎಲ್ ರಾಹುಲ್ ಈಗಾಗಲೇ ಟೆಸ್ಟ್ ಮತ್ತು ಟಿ-20 ಕ್ರಿಕೆರಟ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ, ಇದೀಗ ಏಕದಿನ ಕ್ರಿಕೆಟ್‌ನಲ್ಲೂ ಅವರೇ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂದು ಭಾವಿಸುತ್ತೇನೆ.