ನಾಟಿಂಗ್ ಹ್ಯಾಮ್ (ಇಂಗ್ಲೆಂಡ್): ಜಸ್ಪ್ರೀತ್ ಬುಮ್ರಾ ವಿಶ್ವದರ್ಜೆಯ ಬೌಲರ್ ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಹಾಗಿರುವಾಗ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು 9 ವಿಕೆಟ್ ಪಡೆದಿರುವುದನ್ನು ಕಮ್ಬ್ಯಾಕ್ ಅಂತ ಯಾಕೆ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಕೆ.ಎಲ್ ರಾಹುಲ್ ಹೇಳಿದ್ದಾರೆ.
ಭಾರತ -ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಮಾತನಾಡಿದ ಅವರು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಚೆನ್ನಾಗಿ ಆಡಿದರೂ, ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಒಂದೆರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿರಲಿಲ್ಲ. ಇದಕ್ಕೆ ಕೆಲವೊಂದು ಕಾರಣಗಳಿವೆ ಎಂದಿದ್ದಾರೆ.
ಇದನ್ನೂಓದಿ : ಭಾರತದ ಗೆಲುವಿನ ಆಸೆಗೆ ಮುಳ್ಳಾದ ಮಳೆರಾಯ: ಮೊದಲ ಟೆಸ್ಟ್ ನೀರಸ ಡ್ರಾನಲ್ಲಿ ಅಂತ್ಯ
ಎಲ್ಲಾ ಸಮಯ, ಎಲ್ಲಾ ಸಂದರ್ಭ, ಎಲ್ಲಾ ಪಂದ್ಯಗಳಲ್ಲೂ ಬುಮ್ರಾ ತನ್ನನ್ನು ತಾನು ಪ್ರೂವ್ ಮಾಡಿದ್ದಾರೆ, ಅವರು ನಮ್ಮ ನಂಬರ್ ಒನ್ ಬೌಲರ್. ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ ಅವರು ಮಾಡಿರುವುದರಲ್ಲಿ ನಮಗೆ ಖುಷಿಯಿದೆ ಎಂದಿದ್ದಾರೆ ರಾಹುಲ್.
ವಿರಾಟ್ ಕೊಹ್ಲಿ ಪಡೆಗೆ ಆತಿಥೇಯ ಆಂಗ್ಲರು 209 ರನ್ಗಳ ಗುರಿ ನೀಡಿದ್ದು, 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ಗಳನ್ನು ಅವಶ್ಯಕತೆಯಿತ್ತು. ಭಾರತದ ಕೈಯಲ್ಲಿ ಇನ್ನೂ 9 ವಿಕೆಟ್ಗಳು ಉಳಿದಿದ್ದರಿಂದ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಮಳೆ ಕೊಹ್ಲಿ ಪಡೆಯನ್ನು ನಿರಾಶೆಗೊಳಿಸಿತು.