ಕರ್ನಾಟಕ

karnataka

ETV Bharat / sports

ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯನ್​ ರಾಷ್ಟ್ರಗಳ ಪ್ರಾಬಲ್ಯ: ಈ ಸಲದ ವಿಶ್ವಕಪ್​ ಯಾರಿಗೆ? - ETV Bharath Karnataka

ಅಫ್ಘಾನಿಸ್ತಾನದ ವಿರುದ್ಧ ಸರಣಿ ಗೆದ್ದ ಪಾಕಿಸ್ತಾನ ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ನಂ.1 ಆಗಿದೆ.

Domination by Asian teams in ICC rankings
Domination by Asian teams in ICC rankings

By ETV Bharat Karnataka Team

Published : Aug 27, 2023, 1:41 PM IST

ದುಬೈ: ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್​ ಸಾಧನೆ ಮಾಡುವ ಮೂಲಕ ಬಾಬರ್​ ಅಜಮ್​ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್‌ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ. ನಂಬರ್​​ 1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾವನ್ನು ಪಾಕ್​ ಕೆಳಕ್ಕೆ ತಳ್ಳಿದ್ದು, ಏಷ್ಯಾಕಪ್​ ಮತ್ತು ವಿಶ್ವಕಪ್​ಗೂ ಮುನ್ನ ತಂಡಕ್ಕೆ ಬೂಸ್ಟರ್‌ ಡೋಸ್‌ ಸಿಕ್ಕಿದೆ.

ಅಫ್ಘಾನಿಸ್ತಾನದ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಪಾಕಿಸ್ತಾನ ಶ್ರೀಲಂಕಾದ ನೆಲದಲ್ಲಿ ಆಡಿತ್ತು. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕಿ 142 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಒಂದು ವಿಕೆಟ್​ ಮೂಲಕ ರೋಚಕ ಜಯ ಹಾಗೂ ನಿನ್ನೆ (ಶನಿವಾರ) ನಡೆದ ಮೂರನೇ ಪಂದ್ಯದಲ್ಲಿ 59 ರನ್‌ಗಳ ಅಂತರದ ಗೆಲುವು ದಾಖಲಿಸಿದೆ. ಈ ಫಲಿತಾಂಶದಿಂದ ಪಾಕ್‌ 23 ಪಂದ್ಯಗಳಲ್ಲಿ 2,725 ಅಂಕದಿಂದ 118 ರೇಟಿಂಗ್​ ಪಡೆದು ಟಾಪ್​ ಏಕದಿನ ತಂಡವಾಗಿ ಹೊರಹೊಮ್ಮಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯನ್​ ರಾಷ್ಟ್ರಗಳ ಪ್ರಾಬಲ್ಯ: ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆಯ (ಐಸಿಸಿ) ಶ್ರೇಯಾಂಕದಲ್ಲಿ ಏಷ್ಯನ್​ ರಾಷ್ಟ್ರಗಳು ಮತ್ತು ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್​ ಮತ್ತು ಟಿ20ಯಲ್ಲಿ ತಂಡದ ರ್‍ಯಾಂಕಿಂಗ್​ನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2022ರ ಟಿ20 ವಿಶ್ವಕಪ್​ ಗೆಲುವು ಸಾಧಿಸುವಲ್ಲಿ ಭಾರತ ಎಡವಿದರೂ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಟಾಪ್​ ತಂಡವಾಗಿದೆ. ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ ಭಾರತದ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಇದರಿಂದಾಗಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ಗೂ ಮುನ್ನ ಭಾರತ ಟೆಸ್ಟ್​ ಶ್ರೇಯಾಂಕದಲ್ಲಿ ನಂ.1 ಸ್ಥಾನ ಗಿಟ್ಟಿಸಿತು.

ಆಟಗಾರರ ಶ್ರೇಯಾಂಕದಲ್ಲಿ ಟಿ20ಯಲ್ಲಿ ಸೂರ್ಯ ಕುಮಾರ್​ ಯಾದವ್​ ಬ್ಯಾಟಿಂಗ್​, ರಶೀದ್​ ಖಾನ್​ ಬೌಲಿಂಗ್​, ಶಕೀಬ್​ ಅಲ್​ ಹಸನ್​ ಆಲ್​ರೌಂಡರ್​ ವಿಭಾಗದಲ್ಲಿ ನಂ.1 ಆಗಿದ್ದಾರೆ. ಏಕದಿನದಲ್ಲಿ ಬಾಬರ್​ ಅಜಮ್​ ಬ್ಯಾಟಿಂಗ್​, ಶಕೀಬ್​ ಅಲ್​ ಹಸನ್​ ಆಲ್​ ರೌಂಡರ್​ ಆಗಿ ಅಗ್ರ ಆಟಗಾರರಾಗಿದ್ದಾರೆ. ಟೆಸ್ಟ್ ಬೌಲಿಂಗ್​ ವಿಭಾಗದಲ್ಲಿ ರವಿಚಂದ್ರನ್​ ಅಶ್ವಿನ್​ ಮತ್ತು ಆಲ್​ರೌಂಡರ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಟ್​ ಬ್ಯಾಟಿಂಗ್​ನಲ್ಲಿ ಕೇನ್​ ವಿಲಿಯಮ್ಸನ್​ ಮತ್ತು ಏಕದಿನ ಬೌಲಿಂಗ್​ನಲ್ಲಿ ಜೋಶ್ ಹೆಜಲ್​ವುಡ್​ ಮೊದಲಿಗರು. ಈ ಇಬ್ಬರನ್ನು ಬಿಟ್ಟು ಮಿಕ್ಕೆಲ್ಲರೂ ಏಷ್ಯನ್​ ರಾಷ್ಟ್ರಗಳ ಆಟಗಾರರು. 2023ರ ವಿಶ್ವಕಪ್​ ಭಾರತದಲ್ಲಿ ನಡೆಯುತ್ತಿರುವುರಿಂದ ಏಷ್ಯನ್​ ರಾಷ್ಟ್ರಗಳು ಹೆಚ್ಚು ಪ್ರಭಾವ ಬೀರುವ ನಿರೀಕ್ಷೆ ಇದೆ.

ಇದನ್ನೂ ಓದಿ:ಏಷ್ಯನ್​ ಗೇಮ್ಸ್, ಕ್ರಿಕೆಟ್‌: ಗಾಯಕ್ವಾಡ್​ ಬಳಗಕ್ಕೆ ಲಕ್ಷ್ಮಣ್, ಕೌರ್​ ತಂಡಕ್ಕೆ ಕಾನಿಟ್ಕರ್​ ತರಬೇತಿ

ABOUT THE AUTHOR

...view details