ನವದೆಹಲಿ: ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜುಲೈ 1 ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಸುಮಾರು 12.5 ಮಿಲಿಯನ್ ಚಂದಾದಾರರನ್ನು ಕಳೆದುಕೊಂಡಿದೆ. ಪ್ಲಾಟ್ಫಾರ್ಮ್ನಲ್ಲಿ ಕ್ರಿಕೆಟ್ ಕಂಟೆಂಟ್ ಇಲ್ಲವಾಗಿರುವುದರಿಂದ ಚಂದಾದಾರರು ದೂರವಾಗುತ್ತಿದ್ದಾರೆ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಸೇರಿದಂತೆ ಸತತ ಮೂರನೇ ತ್ರೈಮಾಸಿಕದಲ್ಲಿ ಡಿಸ್ನಿ+ ಹಾಟ್ಸ್ಟಾರ್ ಗಮನಾರ್ಹ ಸಂಖ್ಯೆಯ ಚಂದಾದಾರರನ್ನು ಕಳೆದುಕೊಂಡಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಇಂಟರ್ ನ್ಯಾಷನಲ್ಸ್ ಚಾನೆಲ್ಗಳ ಆದಾಯವು ಶೇಕಡಾ 20 ರಷ್ಟು ಇಳಿದು 1.2 ಬಿಲಿಯನ್ ಡಾಲರ್ಗೆ ತಲುಪಿದೆ ಮತ್ತು ಕಾರ್ಯಾಚರಣೆಯ ಆದಾಯಗಳು $ 166 ಮಿಲಿಯನ್ ಆದಾಯದಿಂದ $ 87 ಮಿಲಿಯನ್ ನಷ್ಟಕ್ಕೆ ಇಳಿದಿವೆ. ಡಿಸ್ನಿ+ ಹಾಟ್ ಸ್ಟಾರ್ ಜೂನ್ ಅಂತ್ಯದ ವೇಳೆಗೆ 40.4 ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಇದು ಕಳೆದ ವರ್ಷ ಅಕ್ಟೋಬರ್ಗೆ ಹೋಲಿಸಿದರೆ ಸುಮಾರು 21 ಮಿಲಿಯನ್ ಕಡಿಮೆಯಾಗಿದೆ. ಇಂಟರ್ ನ್ಯಾಷನಲ್ ಡಿಸ್ನಿ+ (ಡಿಸ್ನಿ+ ಹಾಟ್ಸ್ಟಾರ್ ಹೊರತುಪಡಿಸಿ) ಪಾವತಿಸಿದ ಚಂದಾದಾರರ ಸರಾಸರಿ ಮಾಸಿಕ ಆದಾಯವು $ 5.93 ರಿಂದ $ 6.01 ಕ್ಕೆ ಏರಿಕೆಯಾಗಿದೆ.
ಕಳೆದ ವರ್ಷ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಕಳೆದುಕೊಂಡ ನಂತರ ವಿಡಿಯೋ ಸ್ಟ್ರೀಮಿಂಗ್ ಸೇವೆಯಲ್ಲಿ ಚಂದಾದಾರರ ಕುಸಿತವಾಗಲಿದೆ ಎಂದು ಡಿಸ್ನಿ ಈ ಹಿಂದೆ ಹೇಳಿಕೊಂಡಿತ್ತು. ಡಿಸ್ನಿ+ ಹಾಟ್ ಸ್ಟಾರ್ನ ಚಂದಾದಾರರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಈ ಪಂದ್ಯಾವಳಿಯು ಪ್ರಮುಖ ಪಾತ್ರ ವಹಿಸಿತ್ತು. ವಯಾಕಾಮ್-18 2023-2027ರ ಅವಧಿಯ ಐಪಿಎಲ್ ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಇತ್ತೀಚೆಗೆ ಇಡೀ ಪಂದ್ಯಾವಳಿಯನ್ನು ಜಿಯೋ ಸಿನೆಮಾದಲ್ಲಿ ಉಚಿತವಾಗಿ ಪ್ರಸಾರ ಮಾಡಿತ್ತು.