ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ಗಳು ಬೇಗ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತು ಎಂದು ನಾಯಕ ಕೊಹ್ಲಿಯ ಹೇಳಿಕೆ ನನಗೆ ತುಂಬಾ ನಿರಾಸೆಯನ್ನುಂಟು ಮಾಡಿದೆ ಎಂದು ಮಾಜಿ ಬ್ಯಾಟರ್ ಅಜಯ್ ಜಡೇಜಾ ಹೇಳಿದ್ದಾರೆ.
ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾದ ರೋಹಿತ್ರನ್ನು ಮೊದಲ ಓವರ್ನಲ್ಲೇ ಮತ್ತು ಕೆಎಲ್ ರಾಹುಲ್ರನ್ನು ಮೂರನೇ ಓವರ್ನಲ್ಲಿ ಶಾಹೀನ್ ಅಫ್ರಿದಿ ಔಟ್ ಮಾಡಿದ್ದರು. ಈ ಪಂದ್ಯ ಮುಗಿದ ನಂತರ ಕೊಹ್ಲಿ ಆರಂಭಿಕರ ವಿಕೆಟ್ ಪತನ ನಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿತು ಎಂದು ಹೇಳಿದ್ದರು.
ಆ ಪಂದ್ಯದ ದಿನ ಕೊಹ್ಲಿ ಹೇಳಿಕೆಯನ್ನು ನಾನು ಕೇಳಿದ್ದೇನೆ. ಮೊದಲೆರಡು ವಿಕೆಟ್ ಕಳೆದುಕೊಂಡಿದ್ದರಿಂದ ನಾವು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ತುಂಬಾ ಹಿಂದೆ ಉಳಿದೆವು ಎಂದಿದ್ದಾರೆ. ಈ ಹೇಳಿಕೆ ನನಗೆ ತುಂಬಾ ಬೇಸರ ತರಿಸಿತು ಎಂದು ಅವರು ಕ್ರಿಕ್ಬಜ್ಗೆ ಹೇಳಿದ್ದಾರೆ.