ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ ಆಡುವ ಬಗ್ಗೆ ಮಾತನಾಡಿದ ರೋಹಿತ್​: ವಿಶ್ವಕಪ್​ ಸೋಲಿನ ಬಗ್ಗೆ ಭಾವನಾತ್ಮಕ ವಿಡಿಯೋ.. - ETV Bharath Kannada news

ಏಕದಿನ ಸೋಲಿನ ನಂತರ ಮುಕ್ತವಾಗಿ ಮಾತನಾಡಿರುವ ಟೀಮ್​​ ಇಂಡಿಯಾ ನಾಯಕ ರೋಹಿತ್​ ಶರ್ಮಾ 2024ರ ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

World Cup as a skipper Rohit Sharma
World Cup as a skipper Rohit Sharma

By ETV Bharat Karnataka Team

Published : Dec 13, 2023, 4:49 PM IST

ಹೈದರಾಬಾದ್​​:ವಿಶ್ವಕಪ್ ಫೈನಲ್ ಸೋಲಿನ ನಿರಾಸೆಯಿಂದ ಹೊರಬರಲು ಯಾವುದೇ ಮಾರ್ಗ ಇರಲಿಲ್ಲ, ಆದರೆ, ಅಭಿಮಾನಿಗಳ ಪ್ರೀತಿ ಮತ್ತು ಅವರಿಟ್ಟಿರುವ ನಂಬಿಕೆ ಇದೀಗ ಮತ್ತೊಂದು ಗುರಿಯನ್ನು ಭೇದಿಸಲು ಪ್ರೇರೇಪಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಏಕದಿನ ವಿಶ್ವಕಪ್ ಸೋಲಿನ ನಂತರ ಮುಕ್ತವಾಗಿ ಮೊದಲ ಬಾರಿಗೆ ನಾಯಕ ರೋಹಿತ್​ ಶರ್ಮಾ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್​ ಎಕ್ಸ್​ ಆ್ಯಪ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಇನ್ನೊಂದು ಗುರಿ ಭೇದಿಸಲು ಅಭಿಮಾನಿಗಳು ಪ್ರೇರೇಪಿಸಿದ್ದಾರೆ ಎಂದು ಹೇಳುವ ಮೂಕಲ ರೋಹಿತ್​ ಶರ್ಮಾ 2024ರ ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

2011ರ ನಂತರ ಭಾರತ ಮತ್ತೊಂಮ್ಮೆ ರೋಹಿತ್​ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್​ ಗೆಲ್ಲುತ್ತದೆ ಎಂದು ಎಲ್ಲರ ವಿಶ್ವಾಸವಾಗಿತ್ತು. ಸ್ವತಃ ರೋಹಿತ್​ ಶರ್ಮಾ ವಿಶ್ವಕಪ್​ ಗೆಲುವಿನ ಬಗ್ಗೆ ಕನಸು ಕಂಡಿದ್ದರು. ಏಕೆಂದರೆ ರೋಹಿತ್​ ಮತ್ತು ವಿರಾಟ್​ ಕೊಹ್ಲಿಗೆ ಇದು ಕೊನೆಯ ಏಕದಿನ ವಿಶ್ವಕಪ್​​ ಆಗಿರಲಿದೆ. ಹೀಗಾಗಿ ಗೆಲ್ಲಲೇಬೇಕು ಎಂಬ ಹಠ ಅವರಲ್ಲಿತ್ತು. ಫೈನಲ್​ ಸೋತಾಗ ಮೈದಾನದಲ್ಲೇ ಹಿಟ್​ ಮ್ಯಾನ್​ ಕಣ್ಣೀರಿಟ್ಟಿದ್ದರು. ಈ ಸೋಲಿನ ನೋವನ್ನು ಮರೆಯಲು ವಿಶ್ರಾಂತಿಗಾಗಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದರು.

"ಮೊದಲ ಕೆಲವು ದಿನ ವಿಶ್ವಕಪ್​ ಸೋಲಿನಿಂದ ಹಿಂತಿರುಗುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕುಟುಂಬ, ಸ್ನೇಹಿತರು ನನ್ನನ್ನು ಇದರಿಂದ ಹೊರತಂದರು. ಅವರು ವಿಷಯಗಳನ್ನು ಹಗುರಗೊಳಿಸಿದರು. ಇದನ್ನು ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಆದರೆ ಜೀವನವು ಚಲಿಸುತ್ತದೆ. ಅದರ ಜೊತೆಗೆ ನಾವು ಮುನ್ನಡೆಯಬೇಕು ಎಂಬುದನ್ನು ಕಲಿತೆ" ಎಂದು ರೋಹಿತ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

2024ರ ಟಿ20 ವಿಶ್ವಕಪ್​ ಕನಸು: ಅಭಿಮಾನಿಗಳು ತಂಡದ ಪ್ರದರ್ಶನ ಮತ್ತು ರೋಹಿತ್​ ಮೇಲೆ ಇಟ್ಟ ಪ್ರೀತಿ ದುಃಖದಿಂದ ಹೊರಬರಲು ಸಹಕಾರಿ ಆಯಿತು ಎಂದು ಹೇಳಿಕೊಂಡಿದ್ದಾರೆ. "ನನ್ನನ್ನು ನೋಡಲು ಜನರು ಬರುತ್ತಿದ್ದರು. ಅವರು ತಂಡದ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಕೇಳಿ ನನಗೆ ಒಳ್ಳೆಯ ಭಾವನೆ ಮೂಡಿಸಿತು. ಅವರ ಜೊತೆಗೆ ಕಾಲಕಳೆಯುವುದು ನನಗೆ ಚೇತರಿಕೆ ಎನಿಸುತ್ತಿತ್ತು. ಅಭಿಮಾನಿಗಳು ಯೋಚಿಸುವ ರೀತಿಯಲ್ಲೇ ನಾನು ಇರಲು ಬಯಸಿದೆ ಅದು ಸರಿ ಎನಿಸಿತು."

ಅಭಿಮಾನಿಗಳೇ ಸಂತೈಸಿದರು:"ಅಭಿಮಾನಿಗಳೇ ಆಟಗಾರನು ಏನನ್ನು ಅನುಭವಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಂಡಾಗ ಮತ್ತು ಅವರೇ ನಮ್ಮನ್ನು ಸಂತೈಸಿದಾಗ ಇನ್ನಷ್ಟು ಉತ್ಸಾಹ ಬರುತ್ತದೆ. ಅಭಿಮಾನಿಗಳ ಕೋಪಕ್ಕೂ ಅರ್ಥ ಇದೆ. ಅದನ್ನು ಕೋಪ ಎಂದು ಕರೆದರೆ ತಪ್ಪಾಗುತ್ತದೆ ಅದು ತಂಡದ ಮೇಲಿನ ಪ್ರೀತಿ. ಭೇಟಿ ಮಾಡಲು ಅಭಿಮಾನಿಗಳು ಬಂದಾಗ ಅವರು ತೋರುವ ಕಲ್ಮಶ ರಹಿತ ಪ್ರೀತಿ ಮುಂದಿನ ಗುರಿಯತ್ತ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಆದ್ದರಿಂದ ಇದು ನಿಮಗೆ ಹಿಂತಿರುಗಲು ಮತ್ತು ಮತ್ತೆ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಮತ್ತೊಂದು ದೊಡ್ಡ ಬಹುಮಾನವನ್ನು ಹುಡುಕುತ್ತದೆ" ಎಂದು ಟಿ20 ವಿಶ್ವಕಪ್​ ಗೆಲ್ಲುವ ಗುರಿಯನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ:ವಿಶ್ವಕಪ್​ ಅಭಿಯಾನದಲ್ಲಿ ತಂಡಕ್ಕೆ ದೊರೆತ ಬೆಂಬಲ ನಂಬಲಸಾಧ್ಯವಾಗಿತ್ತು. "ಸಂಪೂರ್ಣ ಅಭಿಯಾನದ ಸಮಯದಲ್ಲಿ ನಾವು ಹೋದಲ್ಲೆಲ್ಲಾ, ಮೊದಲು ಕ್ರೀಡಾಂಗಣಕ್ಕೆ ಬಂದ ಪ್ರತಿಯೊಬ್ಬರಿಂದಲೂ ಮತ್ತು ಮನೆಯಿಂದಲೂ ಅದನ್ನು ವೀಕ್ಷಿಸುತ್ತಿದ್ದ ಜನರಿಂದಲೂ ತುಂಬಾ ಬೆಂಬಲವಿತ್ತು. ಆ ಒಂದೂವರೆ ತಿಂಗಳ ಅವಧಿಯಲ್ಲಿ ಜನರು ನಮಗಾಗಿ ಏನು ಮಾಡಿದ್ದಾರೆಂದು ನಾನು ಪ್ರಶಂಸಿಸಲು ಬಯಸುತ್ತೇನೆ. ಆದರೆ ಮತ್ತೆ, ನಾನು ಅದರ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಿದರೆ, ನಾವು ಅವರಿಗಾಗಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಬೇಸರಕ್ಕೆ ಒಳಗಾಗುತ್ತೇನೆ" ಎಂದಿದ್ದಾರೆ.

ಸೋಲಿನ ಬೇಸರ ಹೊರಹಾಕಿದ ನಾಯಕ:ಸೋಲಿನ ಹತಾಶೆಯ ಕಾರಣದ ಬಗ್ಗೆ ಮಾತನಾಡಿದ ಅವರು, "ನಾನು 50 ಓವರ್‌ಗಳ ವಿಶ್ವಕಪ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ನನಗೆ ಅದು ಅಂತಿಮ ಬಹುಮಾನ. ನಾವು ಆ ವಿಶ್ವಕಪ್‌ಗಾಗಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ಇದು ನಿರಾಶಾದಾಯಕವಾಗಿದೆ, ಸರಿ? ನಿಮಗೆ ಬೇಕಾದುದನ್ನು ಪಡೆಯಲಾಗಿಲ್ಲ ಎಂದು, ನೀವು ಇಷ್ಟು ದಿನ ಏನನ್ನು ಹುಡುಕುತ್ತಿದೆವು ಮತ್ತು ಅ ಕನಸು ಈಡೇರಲಿಲ್ಲಾ ಎಂದು ನಿರಾಶೆಯಾಗಿದೆ" ಎಂದು ರೋಹಿತ್ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಮಳೆ ನಡುವೆ ಅಬ್ಬರಿಸಿ ಮುಗ್ಗರಿಸಿದ ಟೀಂ ಇಂಡಿಯಾ; ದಕ್ಷಿಣ ಆಫ್ರಿಕಾಕ್ಕೆ ಐದು ವಿಕೆಟ್​ ಜಯ

ABOUT THE AUTHOR

...view details