ನವದೆಹಲಿ :ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ವೈಟ್ ಬಾಲ್ ತಂಡದಲ್ಲಿ ಅವಕಾಶ ಪಡೆಯಲು ಮುಂಚೂಣಿಯಲ್ಲಿರುವ ಭಾರತ ತಂಡದ ಬೌಲರ್ ದೀಪಕ್ ಚಹಾರ್, ತಾವೂ ಪವರ್ ಪ್ಲೇ ಬೌಲರ್ ಆಗಿ ಯಶಸ್ವಿಯಾಗಲು ಎಂಎಸ್ ಧೋನಿ ಕಾರಣ ಎಂದು ಹೇಳಿದ್ದಾರೆ.
ಮಹಿ ಭಾಯ್ ನನ್ನನ್ನು ಪವರ್ ಪ್ಲೇ ಬೌಲರ್ ಆಗಿ ಮಾಡಿದರು. ಅವರ ಯಾವಾಗಲೂ ನನ್ನನ್ನು'ನೀನು ನನ್ನ ಪವರ್ ಪ್ಲೇ ಬೌಲರ್' ಎಂದು ಹೇಳುತ್ತಿರುತ್ತಾರೆ. ಅವರು ಬಹುಪಾಲು ಪಂದ್ಯಗಳಲ್ಲಿ ನನಗೆ ಮೊದಲ ಓವರ್ ಬೌಲಿಂಗ್ ಮಾಡಲು ಕೊಡುತ್ತಾರೆ.
ನಾನು ಅವರಿಂದ ಸಾಕಷ್ಟು ಬಾರಿ ಬೈಯಿಸಿಕೊಂಡಿದ್ದೇನೆ. ಆದರೆ, ಅವರ ಆ ಮಾತುಗಳು ಮತ್ತು ಮಾರ್ಗದರ್ಶನವೇ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಹಾರ್ ಹೇಳಿದ್ದಾರೆ.
ಮುಂದೂಡಲ್ಪಟ್ಟಿರುವ ಐಪಿಎಲ್ನಲ್ಲಿ ಚಹಾರ್ ಹೊಸ ಬಾಲಿನಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದಾರೆ. ಅವರು 4 ವಿಕೆಟ್ ಗೊಂಚಲು ಸೇರಿದಂತೆ ಕೆಲ ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದಾರೆ.
ಇನ್ನು, ಧೋನಿ ಒಂದೇ ಸ್ಪೆಲ್ನಲ್ಲಿ ಚಹಾರ್ ಅವರ ಬೌಲಿಂಗ್ ಕೋಟಾವನ್ನು ಕೂಡ ಮುಗಿಸುತ್ತಿದ್ದರು. ಆರಂಭಿಕ ಸ್ಪೆಲ್ಗಳು ನಿಜಕ್ಕೂ ದೀಪಕ್ಗೆ ಒಬ್ಬ ಕ್ವಾಲಿಟಿ ಪವರ್ ಪ್ಲೇ ಬೌಲರ್ ಆಗಲು ನೆರವಾಗಿದೆ ಎನ್ನವುವುದರಲ್ಲಿ ಅನುಮಾನವಿಲ್ಲ.