ರಾಂಚಿ :ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಯುವ ವಿಕೆಟ್ ಕೀಪರ್ ಇಂದ್ರಾಣಿ ತಮಗೆ ಧೋನಿ ನೀಡಿದ್ದ ಪ್ರಮುಖ ಸಲಹೆಗಳನ್ನು ತಿಳಿಸಿದ್ದಾರೆ.
ಮುಂದಿನ ತಿಂಗಳು ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲು ತೆರಳಲಿದೆ.
ಈ ಸರಣಿಯಲ್ಲಿ ರಾಂಚಿಯ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ವುಮನ್ ಇಂದ್ರಾಣಿ ರಾಯ್ ಮೊದಲ ಬಾರಿಗೆ ನೀಲಿ ಜರ್ಸಿ ತೊಡಲು ಸಿದ್ಧರಾಗಿದ್ದಾರೆ.
ತಮ್ಮ ಆಯ್ಕೆಯ ಸಂಭ್ರಮವನ್ನು ಸ್ಪೋರ್ಟ್ಸ್ ಸ್ಟಾರ್ ಜೊತೆ ಹಂಚಿಕೊಂಡಿರುವ ಅವರು, ತಮ್ಮ ಆಟ ಅಭಿವೃದ್ಧಿಯಾಗಲು ಧೋನಿ ನೀಡಿದ ಸಲಹೆ ಹೇಗಿತ್ತು ಎಂದು ರಾಯ್ ತಿಳಿಸಿದ್ದಾರೆ.
ಕಳೆದ ವರ್ಷ ರಾಂಚಿಯಲ್ಲಿ ತರಬೇತಿ ಸೆಷನ್ ನಡೆಯುವ ವೇಳೆ ಮಹಿ ಸರ್ ಜೊತೆ ನಾನು ದೀರ್ಘವಾದ ಮಾತುಕತೆ ನಡೆಸಿದ್ದೆ. ಅವರು ನನ್ನ ಆಟ ಉತ್ತಮಗೊಳಿಸಲು ಹಲವು ಸಲಹೆ ನೀಡಿದರು. 5 ಮೀಟರ್ ತ್ರಿಜ್ಯದಲ್ಲಿ ರೆಫ್ಲೆಕ್ಸಸ್ ಮತ್ತು ಮೂವ್ಮೆಂಟ್ ಕಡೆ ಹೆಚ್ಚು ಗಮನ ನೀಡಬೇಕೆಂದು ತಿಳಿಸಿದರು.
ವಿಕೆಟ್ ಕೀಪರ್ಗಳು ಪಾದದ ಚಲನೆಗಳು ಪ್ರಮುಖ ವಿಷಯ, ಅದನ್ನು ಉತ್ತಮಗೊಳಿಸಿಕೊಳ್ಳಬೇಕೆಂದು ಅವರು ನನಗೆ ಸಲಹೆ ನೀಡಿದರು. ಅವರ ಸಲಹೆಗಳು ನನಗೆ ಸಾಕಷ್ಟು ಸಹಾಯ ಮಾಡಿದವು.
ಮಹಿ ಸರ್ ಅವರಂತಹ ಲೆಜೆಂಡ್ಗಳಿಂದ ಕಲಿಯುವುದು ನಿಜಕ್ಕೂ ದೊಡ್ಡ ಸವಲತ್ತಾಗಿದೆ. ಇದೀ ಅವರಿಂದ ನನ್ನ ಆಟ ಸುಧಾರಿಸಿದೆ. ನಾನು ಮೈದಾನಕ್ಕೆ ಬಂದಾಗಲೆಲ್ಲಾ ಅವರ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ ಎಂದು ರಾಯ್ ತಿಳಿಸಿದ್ದಾರೆ.
ಇದನ್ನು ಓದಿ:ನನಗೆ ಜಾಕ್ ಕಾಲಿಸ್, ವಾಟ್ಸನ್ರಂತೆ ಆಡುವ ಸಾಮರ್ಥ್ಯವಿದೆ, ಅವಕಾಶ ಸಿಗುತ್ತಿಲ್ಲ: ವಿಜಯ ಶಂಕರ್