ಕರ್ನಾಟಕ

karnataka

ETV Bharat / sports

Vanakkam again... ದುಬೈ ತಲುಪಿದ ಧೋನಿ ನೇತೃತ್ವದ ಸಿಎಸ್​ಕೆ ತಂಡ

ಅರ್ಧಕ್ಕೆ ಮೊಟಕುಗೊಂಡಿದ್ದ ಇಂಡಿಯನ್​ ಪ್ರೀಮಿಯರ್ ಲೀಗ್ ಇದೀಗ ದುಬೈನಲ್ಲಿ ಆಯೋಜನೆಗೊಂಡಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ಸಿಎಸ್​ಕೆ ತಂಡ ಇಂದು ಯುಎಇ ತಲುಪಿದೆ.

Dhoni lead CSK
Dhoni lead CSK

By

Published : Aug 14, 2021, 9:06 PM IST

ದುಬೈ:14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ದುಬೈ ತಲುಪಿದೆ. ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.

Vanakkam again dubai... ಎಂದು ಟ್ಯಾಗ್​ಲೈನ್ ನೀಡಿ, ವಿಡಿಯೋ ಹರಿಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್​, ನಾಳೆಯಿಂದ ಅಭ್ಯಾಸದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಸೇರಿದಂತೆ ಅನೇಕ ಭಾರತೀಯ ಪ್ಲೇಯರ್ಸ್ ನಿನ್ನೆ ಚೆನ್ನೈನಿಂದ ಪ್ರಯಾಣ ಬೆಳೆಸಿದ್ದರು.

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ದೃಢಗೊಂಡಿತು. ಹೀಗಾಗಿ ಅರ್ಧದಲ್ಲೇ ಟೂರ್ನಿ ಮೊಟಕುಗೊಳಿಸಲಾಗಿತ್ತು. ಇದೀಗ ದುಬೈನಲ್ಲಿ ಉಳಿದ ಪಂದ್ಯಗಳು ಸೆಪ್ಟೆಂಬರ್​ 19ರಿಂದ ಆಯೋಜನೆಗೊಂಡಿದ್ದು, ಎಲ್ಲ ತಂಡಗಳು ವಿದೇಶಕ್ಕೆ ಪ್ರಯಾಣ ಬೆಳೆಸಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಲಿವೆ.

ಧೋನಿ ಜೊತೆಗೆ ಋತುರಾಜ್ ಗಾಯ್ಕವಾಡ, ಸುರೇಶ್ ರೈನಾ, ದೀಪಕ್​ ಚಹರ್ ಸೇರಿದಂತೆ ಅನೇಕರು ಬಂದಿಳಿದಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಸಿಎಸ್​ಕೆ ತಂಡ ಎರಡನೇ ಸ್ಥಾನದಲ್ಲಿದ್ದು, ಡೆಲ್ಲಿ ಕ್ಯಾಪಿಟಲ್​​ ಮೊದಲನೇ ಸ್ಥಾನದಲ್ಲಿದೆ.​

ಇದನ್ನೂ ಓದಿರಿ: ಟೆಸ್ಟ್​ನಲ್ಲಿ ಜೋ ರೂಟ್ 9000 ರನ್​.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..

ದುಬೈನಲ್ಲಿ 13 ಪಂದ್ಯಗಳು ಆಯೋಜನೆಗೊಂಡಿದ್ದು, ಶಾರ್ಜಾದಲ್ಲಿ 10 ಹಾಗೂ ಅಬುಧಾಬಿಯಲ್ಲಿ 8 ಪಂದ್ಯಗಳು ನಡೆಯಲಿವೆ. ಐಪಿಎಲ್​ ಮುಕ್ತಾಯವಾಗುತ್ತಿದ್ದಂತೆ ಟಿ-20 ವಿಶ್ವಕಪ್ ಕೂಡ ಇಲ್ಲೇ ಆಯೋಜನೆಗೊಂಡಿದ್ದು, ಅನೇಕ ಪ್ಲೇಯರ್ಸ್​​ ಅಲ್ಲೇ ಉಳಿದುಕೊಳ್ಳಲಿದ್ದಾರೆ.

ABOUT THE AUTHOR

...view details