ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಆರಂಭ ಪಡೆದರೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿ ಮತ್ತೆ ಮೇಲುಗೈ ಸಾಧಿಸಿದ ಬೌಲರ್ಗಳ ಬಗ್ಗೆ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಆರ್ಸಿಬಿ ಸತತ 2 ಸೋಲುಗಳೊಂದಿಗೆ 3ನೇ ಸ್ಥಾನದಲ್ಲಿ ಮುಂದುವರಿದಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಕೊಹ್ಲಿ(53) ಮತ್ತು ಪಡಿಕ್ಕಲ್(70) ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟ ನೀಡಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತ್ತು.
ಆದರೆ, ನಂತರ ಸಿಎಸ್ಕೆ ಬೌಲರ್ಗಳು ತಿರುಗಿಬಿದ್ದು, ಮುಂದಿನ 10 ಓವರ್ಗಳಲ್ಲಿ ಕೇವಲ 66 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ನಂತರ 157 ರನ್ಗಳ ಗುರಿಯನ್ನು 18.1 ಓವರ್ಗಳಲ್ಲಿ ತಲುಪುವ ಮೂಲಕ ಸುಲಭ ಜಯ ಸಾಧಿಸಿತು. ಗಾಯಕ್ವಾಡ್(38),ಪ್ಲೆಸಿಸ್(31), ರಾಯುಡು(32)ಮತ್ತು ಮೊಯೀನ್ ಅಲಿ(23) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಪಂದ್ಯದ ನಂತರ ಮಾತನಾಡಿದ ಧೋನಿ, ತಮ್ಮ ಬೌಲರ್ಗಳ ಪ್ರದರ್ಶನವನ್ನು ಕೊಂಡಾಡಿದರು."ಅವರು(ಆರ್ಸಿಬಿ) ಉತ್ತಮ ಆರಂಭ ಪಡೆದರು. ಆದರೆ, 9ನೇ ಓವರ್ ಬಳಿಕ ವಿಕೆಟ್ ನಿಧಾನವಾಯಿತು. ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದರಿಂದ ಜಡೇಜಾ ಸ್ಪೆಲ್ ಅತ್ಯಂತ ಪ್ರಮುಖವಾಗಿತ್ತು. ನಂತರ ಬ್ರಾವೋ, ಹೆಜಲ್ವುಡ್,ಶಾರ್ದೂಲ್, ದೀಪಕ್ ಉತ್ತಮವಾಗಿ ಬೌಲಿಂಗ್ ಮಾಡಿದರು.