ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಟಿಸಿರುವ ಐಪಿಎಲ್ನ ಪ್ರಮೋಷನಲ್ ಜಾಹಿರಾತೊಂದು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದನ್ನು ವಿಜೃಂಭಿಸಿರುವ ಕಾರಣಕ್ಕೆ ಆ ಜಾಹಿರಾತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲು ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (ASCI) ಸೂಚಿಸಿದೆ.
ಈ ಜಾಹಿರಾತು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ವಿಜೃಂಭಣೆಯಾಗಿ ತೋರಿಸಿದೆ ಎಂದು ರಸ್ತೆ ಸುರಕ್ಷತಾ ಕಂಪನಿಯೊಂದು ದೂರು ನೀಡಿದ್ದು, ಇದಕ್ಕಾಗಿ ವಿಡಿಯೊವನ್ನು ಬದಲಾಯಿಸಬೇಕು ಅಥವಾ ತೆಗೆದುಹಾಕಬೇಕು ಎಂದು ಎಎಸ್‌ಸಿಐ ಹೇಳಿದೆ ಎನ್ನಲಾಗಿದೆ.
ಈ ಐಪಿಎಲ್ ಪ್ರೋಮೋದಲ್ಲಿ ಧೊನಿ ಬಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾಫಿಕ್ನಲ್ಲಿ ಸಿಲುಕಿದ್ದ ಬಸ್ಅನ್ನು ನಡುರಸ್ತೆಯಲ್ಲಿ ತಂದು ನಿಲ್ಲಿಸ್ತಾರೆ. ಏನು ಮಾಡ್ತಿದ್ದೀಯಾ? ಎಂದು ಒಬ್ಬ ಪೊಲೀಸ್ ಪ್ರಶ್ನಿಸಿದ್ದಕ್ಕೆ, ಸೂಪರ್ ಓವರ್ ನಡೆಯುತ್ತಿದೆ ಎನ್ನುತ್ತಾರೆ. ಇದನ್ನು ಕೇಳಿದ ಪೊಲೀಸ್ ಏನು ಸಾಮಾನ್ಯ ವಿಷಯದಂತೆ ಪರಿಗಣಿಸಿ ಮುಂದೆ ಅಲ್ಲಿಂದ ಹೊರಡುತ್ತಾರೆ.
ಆದರೆ ಇದು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ಈ ಜಾಹಿರಾತನ್ನು ಸಿದ್ಧಪಡಿಸಿರುವ ಸಂಸ್ಥೆಗೆ ಹಿಂತೆಗೆದುಕೊಳ್ಳಲು ಅಥವಾ ಏಪ್ರಿಲ್ 20ರೊಳಗೆ ಬದಲಿಲಾವಣೆ ಮಾಡಿಕೊಳ್ಳಲು ಎಎಸ್‌ಸಿಐ ಸೂಚಿಸಿದೆ ಮತ್ತು ಕಂಪನಿ ಕೂಡ ಈ ಪ್ರೋಮೋವನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:'ಪಾಕ್ ವಿರುದ್ಧ ಆ ಪಂದ್ಯದಲ್ಲಿ ಧೋನಿ ನನಗೆ ಚೆಂಡು ನೀಡಿದಾಗ ನಡುಕ ಶುರುವಾಗಿತ್ತು! ಆದರೆ...'