ಕರ್ನಾಟಕ

karnataka

ETV Bharat / sports

ಧವನ್, ಶ್ರೇಯಸ್​, ಋತುರಾಜ್​ ಸೇರಿ ಟೀಂ ಇಂಡಿಯಾದ ಅನೇಕ ಪ್ಲೇಯರ್ಸ್​ಗೆ ಕೋವಿಡ್​ - ಶಿಖರ್ ಧವನ್ ಕೊರೊನಾ

COVID-19 outbreak hit the Indian cricket team: ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜುಗೊಳ್ಳುತ್ತಿರುವ ಟೀಂ ಇಂಡಿಯಾದಲ್ಲಿ ಕೊರೊನಾ ಕಾಣಿಸಿಕೊಂಡಿದೆ.

COVID-19 outbreak hit the Indian cricket team
COVID-19 outbreak hit the Indian cricket team

By

Published : Feb 2, 2022, 10:51 PM IST

Updated : Feb 3, 2022, 1:16 AM IST

ಅಹ್ಮದಾಬಾದ್​:ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಜ್ಜುಗೊಳ್ಳುತ್ತಿದ್ದ ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಇದೀಗ ಕೋವಿಡ್​ ಕಾಣಿಸಿಕೊಂಡಿದ್ದು, ಇದರಿಂದ ಕೆರಿಬಿಯನ್​ ವಿರುದ್ಧದ ಸರಣಿ ಮೇಲೆ ಕರಿನೆರಳು ಬಿದ್ದಿದೆ.

ವೆಸ್ಟ್​ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಲು ಗುಜರಾತ್​ನ ಅಹ್ಮದಾಬಾದ್​ಗೆ ಟೀಂ ಇಂಡಿಯಾ ನಿನ್ನೆ ಬಂದಿಳಿದಿದ್ದು, ಇದರ ಬೆನ್ನಲ್ಲೇ ಮಹಾಮಾರಿ ಕೊರೊನಾ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಆರಂಭಿಕ ಬ್ಯಾಟರ್​ ಶಿಖರ್ ಧವನ್, ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್​ಗೆ ಸೋಂಕು ದೃಢಗೊಂಡಿದ್ದು, ತಂಡದ ಕೆಲ ಸಹ ಸಿಬ್ಬಂದಿಯಲ್ಲೂ ಕೋವಿಡ್ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ತಂಡದ 8 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿರಿ:U19 WC:ನಾಯಕ ಯಶ್​ ಶತಕ, ರಶೀದ್​ 94, ಆಸ್ಟ್ರೇಲಿಯಾಗೆ 291ರನ್​ಗಳ ಗುರಿ ನೀಡಿದ ಭಾರತದ ಯಂಗ್ ಟೈಗರ್ಸ್​

ಬಿಸಿಸಿಐ ಖಜಾಂಚಿ ಅರುಣ್​ ಧುಮಾಲ್ ಎಎನ್​ಐಗೆ ಮಾಹಿತಿ ನೀಡಿದ್ದು, ಕೆಲ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಇದರ ಮೇಲೆ ನಿಗಾ ಇಟ್ಟಿದೆ ಎಂದಿದ್ದಾರೆ. ಆಟಗಾರರಿಗೆ ಇದೀಗ ನಾಳೆ ಮತ್ತೊಮ್ಮೆ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಿದ್ದು, ಅಲ್ಲಿ ಬರುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿ ಆಡಲಿದ್ದು, ಫೆ.6ರಿಂದ ಅಹ್ಮದಾಬಾದ್‌ನಲ್ಲಿ ಏಕದಿನ ಸರಣಿ ತದನಂತರ ಕೋಲ್ಕತ್ತಾದಲ್ಲಿ ಟಿ20 ಸರಣಿ ನಡೆಯಲಿದೆ. ಇದೀಗ ಕೊರೊನಾ ದೃಢಗೊಂಡಿರುವ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ಅಥವಾ ಬದಲಿ ಆಟಗಾರರನ್ನ ಬಿಸಿಸಿಐ ಘೋಷಣೆ ಮಾಡುವ ಸಾಧ್ಯತೆ ಇದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 3, 2022, 1:16 AM IST

ABOUT THE AUTHOR

...view details