ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟ್ ಬೀಸುತ್ತಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಹೊಸ ದಾಖಲೆ ನಿರ್ಮಿಸಿದರು. ಚುಟುಕು ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿರುವ ಮೊದಲ ಭಾರತೀಯ ಕ್ರಿಕೆಟರ್ ಎಂಬ ಖ್ಯಾತಿಗೂ ಅವರು ಭಾಜನರಾಗಿದ್ದಾರೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಈ ರೆಕಾರ್ಡ್ ಬರೆದಿದ್ದು, ಚುಟುಕು ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೌಂಡರಿ(ಫೋರ್) ಸಿಡಿಸಿರುವ ಭಾರತದ ಮೊದಲ ಹಾಗೂ ವಿಶ್ವದ ಐದನೇ ಪ್ಲೇಯರ್ ಆಗಿದ್ದಾರೆ. ಈ ಹಿಂದೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ಫೋರ್ ಸಹಾಯದಿಂದ 33ರನ್ಗಳಿಕೆ ಮಾಡಿದ್ದ ಇವರು, ಟಿ-20ಯಲ್ಲಿ 997 ಬೌಂಡರಿ ಸಿಡಿಸಿರುವ ಸಾಧನೆ ಮಾಡಿದ್ದರು. ಇಂದಿನ ಪಂದ್ಯದಲ್ಲಿ 3 ಫೋರ್ ಬಾರಿಸುತ್ತಿದ್ದಂತೆ ಸಾವಿರ ಬೌಂಡರಿಗಳಿಸಿರುವ ದಾಖಲೆಗೆ ಪಾತ್ರರಾಗಿದ್ದಾರೆ.