ಕರ್ನಾಟಕ

karnataka

ETV Bharat / sports

Devdutt Padikkal: 21ನೇ ಶತಮಾನದಲ್ಲಿ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ - ರಾಲೆಂಜರ್ಸ್ ಬೆಂಗಳೂರು

ದೇವದತ್​ ಪಡಿಕ್ಕಲ್ ಜುಲೈ 7, 2000ದಲ್ಲಿ ಜನಿಸಿದ್ದಾರೆ. 2000ದ ಇಸವಿಯ ನಂತರ ಜನಿಸಿ ಭಾರತ ತಂಡದಲ್ಲಿ ಆಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Devdutt Padikkal
ದೇವದತ್​ ಪಡಿಕ್ಕಲ್

By

Published : Jul 29, 2021, 5:42 AM IST

ಕೊಲಂಬೊ: ಕರ್ನಾಟಕದ ಯವ ಆಟಗಾರ ದೇವದತ್​ ಪಡಿಕ್ಕಲ್ 21ನೇ ಶತಮಾನದಲ್ಲಿ ಜನಿಸಿ, ಭಾರತ ತಂಡದ ಪರ ಪದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ದೇವದತ್​ ಪಡಿಕ್ಕಲ್ ಜುಲೈ 7, 2000ದಲ್ಲಿ ಜನಿಸಿದ್ದಾರೆ. 2000ದ ಇಸವಿಯ ನಂತರ ಜನಿಸಿ ಭಾರತ ತಂಡದಲ್ಲಿ ಆಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಬುಧವಾರ ಶ್ರೀಲಂಕಾ ವಿರುದ್ದ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ರಾಯಲ್ ಚಾಲೆಂಜರ್ಸ್​ ಸ್ಟಾರ್ ಓಪನರ್​ ಪಡಿಕ್ಕಲ್​ ಪದಾರ್ಪಣೆ ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಅವರು 23 ಎಸೆತಗಳಲ್ಲಿ 29 ರನ್​ಗಳಿಸಿ ವಿಕೆಟ್​ ಒಪ್ಪಿಸುವ ಮೂಲಕ ಮೊದಲ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಳ್ಳುವಲ್ಲಿ ವಿಫಲರಾದರು.

ಇದೇ ಪಂದ್ಯದಲ್ಲಿ ಪಡಿಕ್ಕಲ್​ ಜೊತೆಗೆ ಮಹರಾಷ್ಟ್ರದ ರುತುರಾಜ್ ಗಾಯಕ್ವಾಡ್, ರಾಜಸ್ಥಾನದ ಚೇತನ್ ಸಕಾರಿಯಾ, ದೆಹಲಿಯ ನಿತೀಶ್ ರಾಣಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ರಾಣಾ ಮತ್ತು ಸಕಾರಿಯಾ ಈಗಾಗಲೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಅಂಡರ್ 19, ಕರ್ನಾಟಕ ಪ್ರೀಮಿಯರ್​ ಲೀಗ್ , ಸಯ್ಯದ್​ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಕ್ರಿಕೆಟ್​ನಲ್ಲಿ ರನ್​ಗಳ ಹೊಳೆಯರಿಸಿದ್ದ ಪಡಿಕ್ಕಲ್​ 2020ರ ಐಪಿಎಲ್​ ಆವೃತ್ತಿಯಲ್ಲಿ ಆಡುವ ಅವಕಾಶ ಪಡೆದಿದ್ದರು. ಅಲ್ಲದೆ ಆ ಆವೃತ್ತಿಯಲ್ಲಿ ಆರ್​ಸಿಬಿಯ ಟಾಪ್ ರನ್​ ಸ್ಕೋರರ್ ಮತ್ತು ಉದಯೋನ್ಮಖ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

2ನೇ ಟಿ20 ಪಂದ್ಯದಲ್ಲಿ ಭಾರತ 132 ರನ್​ಗಳಿಸಿತ್ತು. ಶ್ರೀಲಂಕಾ ಧನಂಜಯ ಡಿ ಸಿಲ್ವಾ ಅವರ ಸಾಹಸದಿಂದ ಇನ್ನು 2 ಎಸೆತಗಳಿರುವಂತೆ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿಕೊಂಡಿತು.

ಇದನ್ನು ಓದಿ:ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ

ABOUT THE AUTHOR

...view details