ಅಹ್ಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡಿದ್ದಾರೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನವದೀಪ್ ಸೈನಿ ಬದಲಿಗೆ ರಜತ್ ಪಾಟಿದಾರ್ ಮತ್ತು ಡೇನಿಯಲ್ ಕ್ರಿಸ್ಚಿಯನ್ ಬದಲಿಗೆ ಡೇನಿಯಲ್ ಸ್ಯಾಮ್ಸ್ ಆರ್‌ಸಿಬಿ ಪರ ಪದಾರ್ಪಣೆ ಮಾಡಲಿದ್ದಾರೆ. ಡೆಲ್ಲಿ ತಂಡ ಅಶ್ವಿನ್ ಬದಲಿಗೆ ಇಶಾಂತ್ ಶರ್ಮಾಗೆ ಅವಕಾಶ ನೀಡಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್ (ವಿಕೀ), ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್
ಡೆಲ್ಲಿ ಕ್ಯಾಪಿಟಲ್ಸ್ : ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್ (ಕೀಪರ್/ ನಾಯಕ), ಸ್ಟೀವನ್ ಸ್ಮಿತ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋಯ್ನಿಸ್, ಆಕ್ಷರ್ ಪಟೇಲ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಇಶಾಂತ್ ಶರ್ಮಾ, ಅವೇಶ್ ಖಾನ್