ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್​: 'KulCha'​ ನಡುವೆ ಹೈವೊಲ್ಟೇಜ್​ ಕದನ - ಆರ್​ಆರ್​ vs ಡಿಸಿ ಲೈವ್ ಅಪ್​ಡೇಟ್​

ಟೂರ್ನಿಯಲ್ಲಿ 2 ತಂಡಗಳು ತಲಾ 6 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 4 ಜಯ ಮತ್ತು ಡೆಲ್ಲಿ 3 ಜಯ ಸಾಧಿಸಿ ಕ್ರಮವಾಗಿ 3 ಮತ್ತು 6ನೇ ಸ್ಥಾನದಲ್ಲಿವೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಈ ಪಂದ್ಯ ಹೈವೋಲ್ಟೇಜ್ ಕ್ರೇಜ್​ ಹುಟ್ಟುಹಾಕಿದೆ.

Delhi Capitals vs Rajasthan Royals
ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್

By

Published : Apr 21, 2022, 10:34 PM IST

ಮುಂಬೈ: ಕೋವಿಡ್​ 19 ಭೀತಿ ಲೆಕ್ಕಿಸದೇ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್​ಗಳ ಜಯ ಸಾಧಿಸಿರುವ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಟೂರ್ನಿಯಲ್ಲಿ ತಲಾ 6 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 4 ಜಯ ಮತ್ತು ಡೆಲ್ಲಿ 3 ಜಯ ಸಾಧಿಸಿ ಕ್ರಮವಾಗಿ 3 ಮತ್ತು 6ನೇ ಸ್ಥಾನದಲ್ಲಿವೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಈ ಪಂದ್ಯ ಹೈವೋಲ್ಟೇಜ್ ಕ್ರೇಜ್​ ಹುಟ್ಟುಹಾಕಿದೆ.

ಎರಡೂ ತಂಡಗಳಲ್ಲೂ ಸ್ಫೋಟಕ ಆಟಗಾರರ ದಂಡೇ ಇದೆ. ರಾಯಲ್ಸ್​ ಪರ ಜಾಸ್ ಬಟ್ಲರ್, ಸಂಜು ಸಾಮ್ಸನ್, ಪಡಿಕ್ಕಲ್​ ಅದ್ಭುತ ಫಾರ್ಮ್​ನಲ್ಲಿದ್ದರೆ, ಇತ್ತ ಡೆಲ್ಲಿ ತಂಡದಲ್ಲಿ ಆರಂಭಿಕ ಬ್ಯಾಟರ್​ಗಳಾದ ಪೃಥ್ವಿ ಶಾ, ಡೇವಿಡ್​ ವಾರ್ನರ್ ಮತ್ತು ರಿಷಭ್ ಪಂತ್ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಅದರಲ್ಲೂ ವಾರ್ನರ್-ಶಾ ಜೋಡಿ ಸತತ 4 ಪಂದ್ಯಗಳಲ್ಲಿ 50 ರನ್​ಗಳ ಜೊತೆಯಾಟ ನಡೆಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಹಾಗಾಗಿ ಆರಂಭಿಕ ಕ್ರಮಾಂಕದಲ್ಲಿ ಸಮಬಲದ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ರಾಜಸ್ಥಾನ್​ ರಾಯಲ್ಸ್​ಗೆ ಹೋಲಿಸಿದರೆ ತಂಡದ ಮಧ್ಯಮ ಕ್ರಮಾಂಕ ಅಷ್ಟೇನೂ ಬಲಿಷ್ಠವಾಗಿಲ್ಲ. ರೋವ್​ಮನ್ ಪೋವೆಲ್ ಸಂಪೂರ್ಣ ವಿಫಲರಾದರೆ, ಲಲಿತ್ ಯಾದವ್​ ಸರ್ಫರಾಜ್​ ಖಾನ್​ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲು ಅವಕಾಶಗಳು ಸಿಕ್ಕಿಲ್ಲ. ಹಾಗಾಗಿ ನಾಳಿನ ಪಂದ್ಯ ಇವರಿಗೆ ಸೂಕ್ತ ವೇದಿಕೆಯಾಗಲಿದೆ. ಆದರೆ ರಾಯಲ್ಸ್​ಗೆ ಹೆಟ್ಮಾಯರ್ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಫಾರ್ಮ್​ನಲ್ಲಿದ್ದು ತಂಡಕ್ಕೆ ನಿರ್ಣಾಯಕ ರನ್​ ಗಳಿಸುತ್ತಿದ್ದಾರೆ. ಜೊತೆಗೆ ಅಶ್ವಿನ್ ಬ್ಯಾಟಿಂಗ್​ನಲ್ಲಿ ನೆರವಾಗುತ್ತಿದ್ದಾರೆ. ಆದರೆ ಪರಾಗ್​ ಮಾತ್ರ ಸಿಕ್ಕ ಅವಕಾಶಗಳನ್ನು ಇನ್ನೂ ಸದುಪಯೋಗಪಡಿಸಿಕೊಂಡಿಲ್ಲ.

ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಮತ್ತು ರಾಯಲ್ಸ್​ ಟೂರ್ನಿಯಲ್ಲೇ ಅತ್ಯುತ್ತಮ ದಾಳಿಯನ್ನು ಹೊಂದಿವೆ. ಪಂತ್​ ಬಳಗದಲ್ಲಿ ಮುಸ್ತಾಫಿಜುರ್ ರಹಮಾನ್, ಶಾರ್ದುಲ್ ಠಾಕೂರ್, ಖಲೀಲ್ ಅಹ್ಮದ್‌ರಂತಹ​ ಮಾರಕ ವೇಗಿಗಳಿದ್ದಾರೆ. ಇತ್ತ ರಾಯಲ್ಸ್​ ತಂಡದಲ್ಲಿ ವೇಗದ ಬೌಲಿಂಗ್ ಬೌಲ್ಟ್​ ಬಿಟ್ಟರೆ ಉಳಿದ ಬೌಲರ್​ಗಳು ಅಷ್ಟು ಮೊನಚು ಹೊಂದಿಲ್ಲ. ಆದರೆ ಸ್ಪಿನ್​ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಮತ್ತು ಅಶ್ವಿನ್ ಅಂತಹ ವಿಶ್ವಶ್ರೇಷ್ಠರಿದ್ದಾರೆ. ಹೆಚ್ಚು ಕಡಿಮೆ ಸರಿಸಮನಾದ ಬಳಗವನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಮುಖಾಮುಖಿ: ಉಭಯ ತಂಡಗಳ ನಡುವೆ ಇದುವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 12 ಜಯ ಸಾಧಿಸಿವೆ. ಕಳೆದ ಋತುವಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ತಲಾ 1 ಪಂದ್ಯವನ್ನು ಗೆದ್ದಿವೆ.

ಇದನ್ನೂ ಓದಿ:ಪೃಥ್ವಿ ಶಾ ಭೀತಿ, ಸ್ವಾರ್ಥವಿಲ್ಲದ ಆಡುವ ಅಮೂಲ್ಯ ಆಟಗಾರ: ಸಂಜಯ್ ಮಂಜ್ರೇಕರ್

ABOUT THE AUTHOR

...view details