ಕರ್ನಾಟಕ

karnataka

ETV Bharat / sports

ಕುಲ್ದೀಪ್ ಸ್ಪಿನ್​​ ದಾಳಿಗೆ ಜಾರಿಬಿದ್ದ ಕೆಕೆಆರ್; ಡೆಲ್ಲಿ​ ಗೆಲ್ಲಲು ಬೇಕು 147 ರನ್ - ಮಿಚೆಲ್ ಮಾರ್ಷ್​

ಶ್ರೇಯಸ್​ ಅಯ್ಯರ್​(42) ಮತ್ತು ನಿತೀಶ್ ರಾಣ (56) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಡೆಲ್ಲಿಗೆ 147 ರನ್​ಗಳ ಸಾಧಾರಣ ಗುರಿ ನೀಡಿತು.

Delhi Capitals vs Kolkata Knight Riders
Delhi Capitals vs Kolkata Knight Riders

By

Published : Apr 28, 2022, 7:12 PM IST

Updated : Apr 28, 2022, 9:36 PM IST

ಮುಂಬೈ: ಪ್ಲೇ ಆಫ್​​ ಪ್ರವೇಶಿಸಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕುಲ್ದೀಪ್​ ಯಾದವ್​ ಸ್ಪಿನ್​ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡವನ್ನು 147 ರನ್​ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಎರಡೂ ತಂಡಗಳಿಗೂ ಗೆಲುವು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ 35 ರನ್​ಗಳಾಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆ್ಯರೋನ್ ಫಿಂಚ್​(3), ವೆಂಕಟೇಶ್ ಅಯ್ಯರ್(6), ಬಾಬಾ ಇಂದ್ರಜಿತ್​(6) ಮತ್ತು ಸುನಿಲ್ ನರೈನ್(0) ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ಆದರೆ, 5ನೇ ವಿಕೆಟ್​ ಜೊತೆಯಾಟದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ ​ 48 ರನ್​ಗಳ ಜೊತೆಯಾಟ ನಡೆಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. 37 ಎಸೆತಗಳಲ್ಲಿ 42 ರನ್​ಗಳಿಸಿದ್ದ ಅಯ್ಯರ್,​ ಕುಲ್ದೀಪ್ ಯಾದವ್​ ಬೌಲಿಂಗ್​ನಲ್ಲಿ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿ ಪಂತ್ ಅದ್ಭುತ ಕ್ಯಾಚ್​ಗೆ ಬಲಿಯಾದರು. ಶ್ರೇಯಸ್​ ಬೆನ್ನಲ್ಲೇ ಬ್ಯಾಟಿಂಗ್​ಗೆ ಬಂದ ವಿಧ್ವಂಸಕ ಬ್ಯಾಟರ್​ ರಸೆಲ್​ ಅದೇ ಓವರ್​​ನ ನಂತರದ ಎಸೆತದಲ್ಲೇ ಸ್ಟಂಪ್ ಔಟ್​ ಆದರು.

ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಕೆಕೆಆರ್​ಗೆ ನಿತೀಶ್ ರಾಣಾ ಮತ್ತು ರಿಂಕು ಸಿಂಗ್(23) 7ನೇ ವಿಕೆಟ್​​ ಜೊತೆಯಾಟದಲ್ಲಿ 62 ರನ್​ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ರಾಣಾ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 57 ರನ್​ಗಳಿಸಿ ಕೊನೆಯ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು.

19 ಓವರ್​​ಗಳಲ್ಲಿ 144 ರನ್​ಗಳಿಸಿದ್ದ ಕೆಕೆಆರ್​ ಮುಸ್ತಫಿಜುರ್​ ಎಸೆದ 20ನೇ ಓವರ್​ನಲ್ಲಿ ಕೇವಲ 2 ರನ್​ಗಳಿಸಲಷ್ಟೇ ಶಕ್ತವಾಯಿತು. ಒಟ್ಟಾರೆ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂದು 146 ರನ್​ಗಳಿಸಿತು.

ತಂಡದ ಅಪ್​ಡೇಟ್​:ಮಾರ್ಷ್ ​ಇಂದಿನ ಪಂದ್ಯದಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಚೇತನ್ ಸಕಾರಿಯಾ ಗಾಯಗೊಂಡಿರುವ ಖಲೀಲ್ ಅಹ್ಮದ್​ ಬದಲಿಗೆ ತಂಡ ಸೇರಿಕೊಂಡಿದ್ದಾರೆ. ಇತ್ತ ಕೋಲ್ಕತ್ತಾ ನೈಟ್​ ರೈಡರ್ಸ್ ಪರ ಆ್ಯರೋನ್​ ಫಿಂಚ್​, ಹರ್ಷಿತ್ ರಾಣಾ ಮತ್ತು ಬಾಬಾ ಇಂದ್ರಜಿತ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್, ಶಿವಂ ಮಾವಿ ಮತ್ತು ವರುಣ್ ಚಕ್ರವರ್ತಿ ತಂಡದಿಂದ ಹೊರಬಿದ್ದಿದ್ದಾರೆ.

ಪ್ಲೇ ಆಫ್​ ದೃಷ್ಠಿಕೋನದಲ್ಲಿ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. 7 ಪಂದ್ಯಗಳನ್ನಾಡಿರುವ ಡೆಲ್ಲಿ 3 ಗೆಲುವು ಮತ್ತು 4 ಸೋಲು ಕಂಡಿದ್ದರೆ, ಕೆಕೆಆರ್​ ತಂಡ 8 ಪಂದ್ಯಗಳಲ್ಲಿ 3 ಜಯ ಮತ್ತು 5 ಸೋಲು ಕಂಡು ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧದ ಟೆಸ್ಟ್, ಸೀಮಿತ ಓವರ್​ಗಳ ಸರಣಿಗೆ ಉಮ್ರಾನ್​ಗೆ ಅವಕಾಶ ಕೊಡಿ: ಗವಾಸ್ಕರ್

Last Updated : Apr 28, 2022, 9:36 PM IST

ABOUT THE AUTHOR

...view details