ಕರ್ನಾಟಕ

karnataka

ETV Bharat / sports

ಐಪಿಎಲ್ ಅಭಿಮಾನಿಗಳಿಗೆ ಖುಷಿ ಸುದ್ದಿಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್!

ಈಗಾಗಲೇ ಕೋವಿಡ್ ಪಾಸಿಟಿವ್ ಬಂದು ಐಸೊಲೇಷನ್​ನಲ್ಲಿರುವ ಫಿಸಿಯೋಪ್ಯಾಟ್ರಿಕ್ ಫರ್ಹಾರ್ತ್​ ಅವರನ್ನು ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಎಲ್ಲಾ ಇತರ ಆರ್‌ಟಿ-ಪಿಸಿಆರ್ ವರದಿಗಳು ನೆಗೆಟಿವ್ ಬಂದಿವೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

DC vs PBKS match on April 20 may go ahead
DC vs PBKS match on April 20 may go ahead

By

Published : Apr 18, 2022, 9:48 PM IST

ಮುಂಬೈ:ಆಸ್ಟ್ರೇಲಿಯಾದ ಆಲ್ರೌಂಡರ್​ ಮಿಚೆಲ್ ಮಾರ್ಷ್​ಗೆ ಆ್ಯಂಟಿಜನ್​ ಟೆಸ್ಟ್​ ಪಾಸಿಟಿವ್ ಬಂದಿರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ತೊಡಕಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದಿರಂದ ಐಪಿಎಲ್ ವೇಳಾ ಪಟ್ಟಿಯಂತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಪಾಸಿಟಿವ್ ಬಂದು ಐಸೊಲೇಷನ್​ನಲ್ಲಿರುವ ಫಿಸಿಯೋಪ್ಯಾಟ್ರಿಕ್ ಫರ್ಹಾರ್ತ್​ ಅವರನ್ನು ಬಿಟ್ಟು, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಎಲ್ಲಾ ಇತರ ಆರ್‌ಟಿ-ಪಿಸಿಆರ್ ವರದಿಗಳು ನೆಗೆಟಿವ್ ಬಂದಿವೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

"ಮಿಚೆಲ್ ಮಾರ್ಷ್​ ಆರ್​ಟಿ-ಪಿಸಿಆರ್​ ವರದಿ ನೆಗೆಟಿವ್ ಬಂದಿದೆ. ಆರ್​ಟಿ-ಪಿಸಿಆರ್​ ವರದಿಗಳು ನಿರ್ಣಾಯಕ ಸಾಕ್ಷ್ಯವಾಗಿವೆ ಮತ್ತು ತಂಡದ ಎಲ್ಲಾ ಆಟಗಾರರ ವರದಿಗಳು ಕೂಡ ನೆಗೆಟಿವ್​ ಬಂದಿವೆ. ಆದ್ದರಿಂದ ಬುಧವಾರ ನಡೆಯಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಯಾವುದೇ ಅಪಾಯವಿಲ್ಲ" ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಸರಣಿಯ ವೇಳೆ ಮಿಚೆಲ್ ಮಾರ್ಷ್​ ಗಾಯಕ್ಕೆ ಒಳಗಾಗಿದ್ದರು. ಅವರು ಭಾರತಕ್ಕೆ ಆಗಮಿಸಿದ ನಂತರ ಫರ್ಹಾರ್ತ್​ ಅವರ ಮಾರ್ಗದರ್ಶನದಲ್ಲಿ ರಿಹಾಬ್​ಗೆ ಒಳಗಾಗಿದ್ದರು. ಈ ಕಾರಣದಿಂದ ಆ್ಯಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.

ಮಾರ್ಷ್​ಗೆ ಪಾಸಿಟಿವ್ ಬಂದಿದ್ದರಿಂದ ಸೋಮವಾರ ಪುಣೆಗೆ ತೆರಳಬೇಕಿದ್ದ ಡೆಲ್ಲಿ ತಂಡ ಪ್ರಯಾಣ ರದ್ದು ಮಾಡಿ ಹೋಟೆಲ್​ನಲ್ಲೇ ಉಳಿದುಕೊಂಡಿತ್ತು. ಇದೀಗ ಎಲ್ಲರೂ ಆರ್​ಟಿ-ಪಿಸಿಆರ್​ ಟೆಸ್ಟ್​ನಲ್ಲಿ ನೆಗೆಟಿವ್ ಪಡೆದುಕೊಂಡಿರುವುದರಿಂದ ಮಂಗಳವಾರ ಪುಣೆಗೆ ಇಡೀ ತಂಡ ಪ್ರಯಾಣಿಸಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಐಪಿಎಲ್​ನಲ್ಲಿ ವೇಗವಾಗಿ 1000 ರನ್​: ಕೊಹ್ಲಿ, ಧೋನಿ, ರೋಹಿತ್​ ಹಿಂದಿಕ್ಕಿದ ಪಡಿಕ್ಕಲ್

ABOUT THE AUTHOR

...view details