ನವದೆಹಲಿ: ಕಳೆದ ಮೂರು ಆವೃತ್ತಿಗಳಿಂದ ಸ್ಥಿರ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ನೂತನ ಜರ್ಸಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿರುವ ಹೇಳಿಕೆಯ ಪ್ರಕಾರ, ತವರು ಕ್ರೀಡಾಂಗಣವಾಗಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಫ್ರಾಂಚೈಸಿ ಕೆಲವು ಜರ್ಸಿಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿ, ಒಂದು ಆಯ್ಕೆ ಮಾಡುವಂತೆ ಕೋರಿಕೊಂಡಿತ್ತು ಎಂದು ತಿಳಿದುಬಂದಿದೆ. ನಗರ ಕೆಲವು ಮಕ್ಕಳಿಗೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ಕ್ಲಬ್ಗಳಿಗೂ ಕೆಲವು ಜರ್ಸಿಗಳನ್ನು ನೀಡಿ ನೆಚ್ಚಿನದನ್ನು ಆಯ್ಕೆ ಮಾಡುವ ಟಾಸ್ಕ್ ನೀಡಿತ್ತು ಎಂದು ತಿಳಿದುಬಂದಿದೆ.
ಇದು ಹೊಸ ಆವೃತ್ತಿಯ ಐಪಿಎಲ್ ಆಗಿದ್ದು, ನಾವು ನೂತನ ಬ್ರ್ಯಾಂಡ್ನ ಜರ್ಸಿಯಲ್ಲಿ ನಮ್ಮ ಆಟಗಾರರನ್ನು ನೋಡುವುದಕ್ಕೆ ಕಾಯಲಾಗುತ್ತಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಹಂಗಾಮಿ ಸಿಇಒ ವಿನೋದ್ ಬಿಶ್ತ್ ಹೇಳಿದ್ದಾರೆ.