ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ರಿಷಭ್ ಪಂತ್ ಮುಂದುವರಿಕೆ: ಕುತೂಹಲಕ್ಕೆ ತೆರೆ ಎಳೆದ ಫ್ರಾಂಚೈಸಿ

ಡೆಲ್ಲಿ ಕ್ಯಾಪಿಟಲ್ಸ್​​ ತಂಡಕ್ಕೆ ಶ್ರೇಯಸ್​ ಅಯ್ಯರ್ ಕಮ್​ಬ್ಯಾಕ್​ ಹೊರತಾಗಿಯೂ ತಂಡದ ನಾಯಕನಾಗಿ ವಿಕೆಟ್​ ಕೀಪರ್​​, ಬ್ಯಾಟ್ಸ್​ಮನ್​ ರಿಷಭ್ ಪಂತ್​ ಮುಂದುವರೆಯಲಿದ್ದಾರೆ.

Rishabh Pant
Rishabh Pant

By

Published : Sep 16, 2021, 8:29 PM IST

ದುಬೈ:ಸೆಪ್ಟೆಂಬರ್​ 19ರಿಂದ 14ನೇ ಆವೃತ್ತಿ ಇಂಡಿಯನ್​​ ಪ್ರೀಮಿಯರ್ ಲೀಗ್​ನ ದ್ವಿತೀಯಾರ್ಧದ ಪಂದ್ಯಗಳು ಆರಂಭಗೊಳ್ಳಲಿವೆ. ಇದಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡೆಲ್ಲಿ ಫ್ರಾಂಚೈಸಿ ಮಹತ್ವದ ಘೋಷಣೆ ಮಾಡಿದೆ.

2ನೇ ಹಂತದ ಐಪಿಎಲ್​ನಲ್ಲಿ ಶ್ರೇಯಸ್​ ಅಯ್ಯರ್ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ಹೊರತಾಗಿಯೂ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದೆ.

ಕಳೆದ 2 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್​​ ತಂಡದ ಖಾಯಂ ನಾಯಕನಾಗಿದ್ದ ಅಯ್ಯರ್​ ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜನೋವಿಗೆ ಒಳಗಾಗಿ ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿಯ ಜೊತೆಗೆ ಮೊದಲಾರ್ಧದ ಐಪಿಎಲ್​ನಿಂದಲೂ ಹೊರಬಿದ್ದಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಯುಎಇನಲ್ಲಿ ಈಗಾಗಲೇ ಇಂಡಿಯನ್ ಪ್ರೀಮಿಯರ್​ ಲೀಗ್​ಗಾಗಿ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​​​ ಕ್ಯಾಬಿನೆಟ್​​ನಲ್ಲಿ ಎಲ್ಲರೂ ಹೊಸಬರೇ: ರೂಪಾಣಿ ಸಂಪುಟದ ಒಬ್ಬರಿಗೂ ಸಿಗದ ಮಂತ್ರಿಗಿರಿ!

ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕತ್ವವನ್ನು ಶ್ರೇಯಸ್​ಗೆ ನೀಡಲಿದೆಯೇ ಅಥವಾ 14ನೇ ಆವೃತ್ತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನದಲ್ಲಿರಿಸಿರುವ ರಿಷಭ್​ ಪಂತ್​ಗೆ ನೀಡಲಿದೆಯೇ ಎಂಬ ಕುತೂಹಲ ಉಂಟಾಗಿತ್ತು. ಅದಕ್ಕೀಗ ಫ್ರಾಂಚೈಸಿ ಖುದ್ದಾಗಿ ಸ್ಪಷ್ಟನೆ ನೀಡಿದೆ.

ಶ್ರೇಯಸ್​ ಅಯ್ಯರ್​ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡ ಪಂತ್ ನಾಯಕತ್ವದಲ್ಲಿ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದೆ.

ABOUT THE AUTHOR

...view details