ಕರ್ನಾಟಕ

karnataka

ETV Bharat / sports

ಕ್ರಿಸ್​ ವೋಕ್ಸ್​ ಬದಲಿಗೆ ಡೆಲ್ಲಿ ಸೇರಿಕೊಂಡ ಆಸೀಸ್​ ಆಲ್​ರೌಂಡರ್​ - ಬೆನ್ ​ಡ್ವಾರ್ಶಿಯಸ್

ಇಂಗ್ಲೆಂಡ್​ನ ಸ್ಟಾರ್​ ಬ್ಯಾಟ್ಸ್​ಮನ್ ಜಾಜಿ ಬೈರ್​ಸ್ಟೋವ್, ಜೋಸ್ ಬಟ್ಲರ್​, ಬೆನ್ ಸ್ಟೋಕ್ಸ್ ​ಮತ್ತು ಕ್ರಿಸ್​ ವೋಕ್ಸ್​ಈ ಬಾರಿಯ ಐಪಿಎಲ್​ನಿಂದ ಹಿಂದೆ ಸರಿದರೆ, ಕೆಲವರು ಗಾಯದ ಕಾರಣದಿಂದ ಇಡೀ ಟೂರ್ನಮೆಂಟ್​ನಿಂದಲೇ ಹಿಂದೆ ಸರಿದಿದ್ದಾರೆ. ಇದೀಗ ಆ ಲಿಸ್ಟ್​ಗೆ ಆಲ್​ರೌಂಡರ್​ ಕ್ರಿಸ್ ವೋಕ್ಸ್​ ಕೂಡ ಸೇರಿಕೊಂಡಿದ್ದಾರೆ.

Delhi Capitals
ಡೆಲ್ಲಿ ಕ್ಯಾಪಿಟಲ್ಸ್​ಗೆ ಬೆನ್ ಡ್ವಾರ್ಶಿಯಸ್​

By

Published : Sep 14, 2021, 6:06 AM IST

ಮುಂಬೈ: ಭಾರತದ ವಿರುದ್ಧದ 5ನೇ ಟೆಸ್ಟ್​ ಪಂದ್ಯ ರದ್ದಾಗುತ್ತಿದ್ದಂತೆ ಎಲ್ಲರ ಚಿತ್ತ ಇಂಡಿಯನ್ ಪ್ರೀಮಿಯರ್ ಕಡೆ ತಿರುಗಿದೆ. ಆದರೆ, ಐಪಿಎಲ್​ನ ದ್ವಿತೀಯ ಭಾಗದಿಂದ ಕೆಲವು ಇಂಗ್ಲೆಂಡ್ ಆಟಗಾರರು ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್​ನ ಸ್ಟಾರ್​ ಬ್ಯಾಟ್ಸ್​ಮನ್ ಜಾಜಿ ಬೈರ್​ಸ್ಟೋವ್, ಜೋಸ್ ಬಟ್ಲರ್​, ಬೆನ್ ಸ್ಟೋಕ್ಸ್ ​ಮತ್ತು ಕ್ರಿಸ್​ ವೋಕ್ಸ್​ಈ ಬಾರಿಯ ಐಪಿಎಲ್​ನಿಂದ ಹಿಂದೆ ಸರಿದರೆ, ಕೆಲವರು ಗಾಯದ ಕಾರಣದಿಂದ ಇಡೀ ಟೂರ್ನಮೆಂಟ್​ನಿಂದಲೇ ಔಟ್​ ಆಗಿದ್ದಾರೆ. ಇದೀಗ ಆ ಲಿಸ್ಟ್​ಗೆ ಆಲ್​ರೌಂಡರ್​ ಕ್ರಿಸ್ ವೋಕ್ಸ್​ ಕೂಡ ಸೇರಿಕೊಂಡಿದ್ದಾರೆ.

ಮೊದಲ ಹಂತದ 3 ಪಂದ್ಯಗಳಲ್ಲಿ 5 ವಿಕೆಟ್​ ಪಡೆದುಕೊಂಡಿದ್ದ ಇಂಗ್ಲಿಷ್​ ಆಲೌರೌಂಡರ್​ ಕ್ರಿಸ್​ ವೋಕ್ಸ್​ ವೈಯಕ್ತಿಕ ಕಾರಣಗಳಿದಂದ ಟೂರ್ನಮೆಂಟ್​ನಿಂದ ಹಿಂದೆ ಸರಿದಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪ್ರಕಟಣೆ ಹೊರಡಿಸಿತ್ತು.

ಇನ್ನು ಅವರ ಜಾಗಕ್ಕೆ ಆಸ್ಟ್ರೇಲಿಯಾದ ವೇಗದ ಬೌಲರ್​ ಬೆನ್ ​ಡ್ವಾರ್ಶಿಯಸ್ ಅವರನ್ನು ಬದಲೀ ಆಟಗಾರನಾಗಿ ಡೆಲ್ಲಿ ತಂಡಕ್ಕೆ ಆಯ್ಕೆ ಮಾಡಿದೆ. ಡ್ವಾರ್ಶಿಯಸ್​ 82 ಟಿ-20 ಪಂದ್ಯಗಳಲ್ಲಿ 23 ಸರಾಸರಿಯಲ್ಲಿ 100 ವಿಕೆಟ್​ ಪಡೆದಿದ್ದಾರೆ. ಬಿಬಿಎಲ್​ನಲ್ಲಿ ಸಿಡ್ನಿ ಸಿಕ್ಸರ್​ ಪರ ಆಡುವ ಅವರು 69 ಪಂದ್ಯಗಳಿಂದ 85 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಸಾರ್ವಕಾಲಿಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.​

ABOUT THE AUTHOR

...view details