ಕರ್ನಾಟಕ

karnataka

ETV Bharat / sports

ಅಂಡರ್​-19 ವಿಶ್ವಕಪ್​ ವಿಜೇತ ಭಾರತ ತಂಡದ ನಾಯಕ ಯಶ್​ ಧುಲ್​ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್​ - ಐಪಿಎಲ್ 2022 ಲೈವ್ ಅಪ್​ಡೇಟ್ಸ್​

ಯುವ ಕ್ರಿಕೆಟಿಗರನ್ನು ಬೆಳೆಸುವ ಡೆಲ್ಲಿ ತಂಡದ ಪ್ರಯತ್ನ ಮುಂದುವರೆದಿದೆ. ಈ ಮೊದಲು ಶ್ರೇಯಸ್​ ಅಯ್ಯರ್, 2016ರಲ್ಲಿ ರಿಷಭ್ ಪಂತ್, 2018ರಲ್ಲಿ ಪೃಥ್ವಿ ಶಾರನ್ನು ಖರೀದಿಸಿ ತಂಡದಲ್ಲಿ ಅವಕಾಶ ಮಾಡಿಕೊಟ್ಟಿದ್ದ ಡೆಲ್ಲಿ ಇದೀಗ ಅದೇ ಸಂಪ್ರದಾಯದಂತೆ 2022ರ ವಿಶ್ವಕಪ್ ವಿಜೇತ ತಂಡದ ಸ್ಟಾರ್​ ಯಶ್​ ಧುಲ್​ರನ್ನು ಖರೀದಿಸಿದೆ.

Delhi capitals  bag U19 star Yash Dhull cheaply for only 50 Lakh
ಯಶ್​ ಧುಲ್​ 50 ಲಕ್ಷ ಡೆಲ್ಲಿ ಕ್ಯಾಪಿಟಲ್ಸ್

By

Published : Feb 13, 2022, 3:39 PM IST

ಬೆಂಗಳೂರು: ಭಾರತಕ್ಕೆ ಕಿರಿಯರ್​ ವಿಶ್ವಕಪ್​ ತಂಡಕೊಟ್ಟ ನಾಯಕ ಯಶ್​ ಧುಲ್​ರನ್ನು 50 ಲಕ್ಷ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್​ ಖರೀದಿಸಿದೆ.

ಯುವ ಕ್ರಿಕೆಟಿಗರನ್ನು ಬೆಳೆಸುವ ಡೆಲ್ಲಿ ತಂಡದ ಪ್ರಯತ್ನ ಮುಂದುವರೆದಿದೆ. ಈ ಹಿಂದೆ ಶ್ರೇಯಸ್​ ಅಯ್ಯರ್, 2016ರಲ್ಲಿ ರಿಷಭ್ ಪಂತ್, 2018ರಲ್ಲಿ ಪೃಥ್ವಿ ಶಾರನ್ನು ಖರೀದಿಸಿ ತಂಡದಲ್ಲಿ ಅವಕಾಶ ಮಾಡಿಕೊಟ್ಟಿದ್ದ ಡೆಲ್ಲಿ ಇದೀಗ ಅದೇ ಸಂಪ್ರದಾಯದಂತೆ 2022ರ ವಿಶ್ವಕಪ್ ವಿಜೇತ ತಂಡದ ಸ್ಟಾರ್​ ಯಶ್​ ಧುಲ್​ರನ್ನು ಖರೀದಿಸಿದೆ.

ಯಶ್​ ಧುಲ್ ಅಂಡರ್ 19 ವಿಶ್ವಕಪ್​ನಲ್ಲಿ 4 ಪಂದ್ಯಗಳಿಂದ 229 ರನ್ ​ಗಳಿಸಿದ್ದರು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 82 ರನ್​ಗಳಿಸಿ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು. ಆದರೆ, 2ನೇ ಪಂದ್ಯದ ವೇಳೆ ಕೋವಿಡ್​ 19 ಪಾಸಿಟಿವ್​ ಕಂಡುಬಂದಿದ್ದರಿಂದ ಲೀಗ್​ನ 2 ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಕೋವಿಡ್​ನಿಂದ ಚೇತರಿಸಿಕೊಂಡು ಬಾಂಗ್ಲಾದೇಶದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 20, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್​ನಲ್ಲಿ 110 ರನ್ ​ಗಳಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿರುವ ಆಟಗಾರರ ಪಟ್ಟಿ

  • ಕಮಲೇಶ್ ನಾಗರಕೋಟಿ - ಭಾರತೀಯ ಆಲ್ ರೌಂಡರ್ ₹1,10,00,000
  • ಕೆ.ಎಸ್. ಭರತ್ - ಭಾರತೀಯ ವಿಕೆಟ್ ಕೀಪರ್ ₹ 2,00,00,000
  • ಮುಸ್ತಫಿಜುರ್ ರೆಹಮಾನ್ - ವಿದೇಶಿ ಬೌಲರ್ ₹ 2,00,00,000
  • ಶಾರ್ದೂಲ್ ಠಾಕೂರ್ - ಭಾರತೀಯ ಬೌಲರ್ ₹ 10,75,00,000
  • ಮನದೀಪ್ ಸಿಂಗ್ - ಭಾರತೀಯ ಬ್ಯಾಟ್ಸ್‌ಮನ್ ₹ 1,10,00,000
  • ಮಿಚೆಲ್ ಮಾರ್ಷ್ - ವಿದೇಶಿ ಆಲ್ ರೌಂಡರ್ ₹ 6,50,00,000
  • ಅಶ್ವಿನ್ ಹೆಬ್ಬಾರ್ - ಭಾರತೀಯ ಬ್ಯಾಟ್ಸ್‌ಮನ್ ₹ 20,00,000
  • ಕುಲದೀಪ್ ಯಾದವ್ - ಭಾರತೀಯ ಬೌಲರ್ ₹ 2,00,00,000
  • ಸೈಯದ್ ಖಲೀಲ್ ಅಹಮದ್ - ಭಾರತೀಯ ಬೌಲರ್ ₹ 5,25,00,000
  • ಡೇವಿಡ್ ವಾರ್ನರ್ - ವಿದೇಶಿ ಬ್ಯಾಟ್ಸ್‌ಮನ್ ₹ 6,25,00,000
  • ಚೇತನ್ ಸಕರಿಯಾ - ಭಾರತೀಯ ಬೌಲರ್ ₹ 4,20,00,000
  • ಸರ್ಫರಾಜ್ ಖಾನ್ - ಭಾರತೀಯ ಆಲ್​ರೌಂಡರ್ ₹ 20,00,000
  • ಯಶ್​ ಧುಲ್ ​- ಭಾರತೀಯ ಬ್ಯಾಟರ್​ - ₹ 50,00,000

ಇದನ್ನೂ ಓದಿ:ಭಾರತೀಯ ವೇಗಿಗಳಿಗೆ ಮಣೆ ಹಾಕಿದ ಡೆಲ್ಲಿ.. ಸಕಾರಿಯಾ, ಖಲೀಲ್​ಗೆ ಸಿಕ್ತು ಬಂಪರ್​ ಬೆಲೆ

ABOUT THE AUTHOR

...view details