ದುಬೈ:ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರೊಂದಿಗಿನ ವಿವಾದವನ್ನು ಭಾರತ ತಂಡದ ಆಫ್ - ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದ ವೇಳೆ ಕೊನೆಗೊಳಿಸಲು ಪ್ರಯತ್ನಿಸಿದ್ದಾರೆ. ಅವರೊಂದಿಗೆ ಯಾವುದೇ ವೈಯಕ್ತಿಕ ಹೋರಾಟ ನಡೆಸಿಲ್ಲ, ಆದರೆ, ಆಟವನ್ನು ಹೇಗೆ ಆಡಬೇಕು ಎನ್ನುವುದರ ಬಗೆಗಿನ ಭಿನ್ನಾಭಿಪ್ರಾಯ ಎಂದು ಹೇಳಿದ್ದಾರೆ.
ಕಳೆದ ವಾರದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಬ್ಯಾಟರ್ ಆಗಿದ್ದ ರಿಷಭ್ ಪಂತ್ ದೇಹಕ್ಕೆ ಚೆಂಡು ಬಡಿದರೂ ಅಶ್ವಿನ್ ಮತ್ತೊಂದು ರನ್ ತೆಗೆದುಕೊಂಡಿದ್ದರು. ಇದನ್ನು ಖಂಡಿಸಿದ ಮಾರ್ಗನ್ ಅಶ್ವಿನ್ ವಿರುದ್ಧ ಕೋಪಗೊಂಡು, ಇದು ಕ್ರಿಕೆಟ್ ನಿಯಮಕ್ಕೆ ಅವಮಾನ ಮಾಡಿದಂತೆ ಮತ್ತು ಕ್ರೀಡಾಸ್ಪೂರ್ತಿಗೂ ಧಕ್ಕೆ ಮಾಡಿದ್ದಾರೆಂದು ಆರೋಪಿಸಿದ್ದರು. ಎಂಸಿಸಿ ನಿಯಮದ ಪ್ರಕಾರ ಚೆಂಡು ಥ್ರೋ ಮಾಡಿದ ವೇಳೆ ಫೀಲ್ಡರ್ ದೇಹಕ್ಕೆ ತಾಗಿದ ನಂತರ ರನ್ ತೆಗೆದುಕೊಳ್ಳುವ ಹಾಗಿಲ್ಲ.
ಆದರೆ, ಇಂಗ್ಲೆಂಡ್ 2019ರ ವಿಶ್ವಕಪ್ ಫೈನಲ್ನಲ್ಲಿ ಬೆನ್ ಸ್ಟೋಕ್ಸ್ ರನ್ ಓಡುವಾಗ ಫೀಲ್ಡರ್ ಥ್ರೋ ಮಾಡಿದ ಚೆಂಡು ಬ್ಯಾಟ್ಗೆ ತಗುಲಿ ಬೌಂಡರಿ ಸೇರಿತ್ತು. ಅಂಪೈರ್ ಇಂಗ್ಲೆಂಡ್ಗೆ 5 ರನ್ ಕೊಡುಗೆ ನೀಡಿತ್ತು. ಇದು ನ್ಯೂಜಿಲ್ಯಾಂಡ್ನ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು.
ಇದು ವೈಯುಕ್ತಿಕ ಯುದ್ಧ ಅಥವಾ ಹೋರಾಟ ಎಂದು ಭಾವಿಸಿಲ್ಲ